ದಾವಣಗೆರೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನದ ಬೇಗುದಿ, ಮಾಜಿ ಸಚಿವರ ವಿರುದ್ಧ ಬೇಸರ

By Suvarna News  |  First Published Sep 10, 2022, 3:21 PM IST

ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವೈ ರಾಮಪ್ಪ. ತನ್ನನ್ನು ಉಚ್ಛಾಟಿಸಿರುವ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪರಿಗೆ ಸಾಲು ಸಾಲು ಪ್ರಶ್ನೆ ಇಟ್ಟ ವೈ ರಾಮಪ್ಪ. 
 


ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಸೆ. 10): ಕಾಂಗ್ರೆಸ್‌ ಪಕ್ಷದ ಸಂಸ್ಕೃತಿ, ಸಿದ್ಧಾಂತ ಮತ್ತು ನೀತಿ ನಿಯಮ ಗೊತ್ತಿಲ್ಲದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹೆಚ್‌.ಬಿ. ಮಂಜಪ್ಪ ಮಾಡಿರುವ ಉಚ್ಚಾಟನೆ  ಸಂಪೂರ್ಣ ಸುಳ್ಳಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಮುಖಂಡ, ಜಿ.ಪಂ.ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸಂಸ್ಕೃತಿ, ಸಿದ್ಧಾಂತ, ನೀತಿ, ನಿಯಮ ಗೊತ್ತಿಲ್ಲದ ಹಾಗೂ ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದೆ ಅಧ್ಯಕ ಹೆಚ್‌.ಬಿ.ಮಂಜಪ್ಪ ಅವರಿಗೆ ಹಲವು ಪ್ರಶ್ನೆ ಕೇಳುತ್ತಿದ್ದು, ಅದಕ್ಕೆ ಉತ್ತರಿಸುವಂತೆ ಒತ್ತಾಯಿಸಿದರು.
 ಶಿಸ್ತು ಸಮಿತಿಯು ಶಿಫಾರಸ್ಸಿನ ಅನ್ವಯ ಹಾಗೂ ಕೆಲವು ಮುಖಂಡರಿಂದಾದ ದೂರಿನನ್ವಯ ಹಾಗೂ ಸಭೆಗಳಲ್ಲಿ ಗೊಂದಲ ಉಂಟು ಮಾಡುವುದರಿಂದ ನನ್ನನ್ನು ಉಚ್ಚಾಟನೆ ಮಾಡಲು ಕೆ.ಪಿ.ಸಿ.ಸಿ, ಕಳುಹಿಸಲಾಗಿದೆ ಎಂದು ಹೇಳಿಕೆಯ ಪ್ರಕಟಣೆ ಮಾಡಿರುವುದನ್ನು ನಾನು ತಡವಾಗಿ ನೋಡಿರುತ್ತೇನೆ‌. ನನ್ನ ಅನಾರೋಗ್ಯ ಸರಿ ಇಲ್ಲದ ಕಾರಣ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಪತ್ರಿಕಾ ಪ್ರಕಟಣೆಯನ್ನು ಗಮನಿಸಿದೆ. ಕೆ.ಪಿ.ಸಿ.ಸಿ.ಗೆ ಉಚ್ಚಾಟನೆ ಮಾಡಲು ಜಿಲ್ಲಾಧ್ಯಕ್ಷರ ಸುಳ್ಳು  ಶಿಫಾರಸ್ಸಿನ ಪತ್ರದಂತೆ ನಿಮ್ಮ ಮನಸಾಕ್ಷಿಯಾಗಿ ನನ್ನ ಪತ್ರಕ್ಕೆ ಉತ್ತರ ನೀಡಬೇಕಾಗುತ್ತದೆ ಹಾಗೂ ಸಾರ್ವಜನಿಕವಾಗಿ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಎಲ್ಲಾ ಅಂಶಗಳು ನಾನು ಅತ್ಯಂತ ವ್ಯವಧಾನವಾಗಿ ನೋಡಿರುತ್ತೇನೆ. ಅದರಂತೆ ನಾನು ಕೆಲವು ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

Latest Videos

undefined

 ಪೂರ್ವಾಪರ ಮಾಹಿತಿ ಇಲ್ಲದ ಏಕಾಏಕಿ ಉಚ್ಛಾಟನೆಯ ಶಿಫಾರಸ್ಸು ಪತ್ರ ಕಳುಹಿಸಿರುವ ಉದ್ದೇಶವೇನು. ಪಕ್ಷದ ಸಭೆ ಸಮಾರಂಭಗಳಲ್ಲಿ ಗಲಾಟೆ ಮಾಡುವ ಮೂಲಕ ಜಾತಿನಿಂಧನೆ ಕೇಸುಗಳನ್ನು ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ನೀಡುವುದರ ಮೂಲಕ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದು ತಿಳಿಸಿರುತ್ತೀರಿ ಎಲ್ಲಿ? ಯಾವಾಗ? ಹೇಗೆ? ಮುಜುಗರವಾಗಿರುವಂತೆ ನಡೆದು ಕೊಂಡಿರುತ್ತೇನೆ ಎನ್ನುವ ಎಲ್ಲಾ ದೂರುಗಳಿಗೆ ಉತ್ತರಿಸಬೇಕೆಂದು ಒತ್ತಾಯಿಸಿದರು.

ಏಕಾ-ಏಕಿ ಉಚ್ಚಾಟನೆ ಮಾಡಲಿಕ್ಕೆ ಕಾಂಗ್ರೆಸ್‌ ಪಕ್ಷ ನಿಮ್ಮ ಮನೆಯ ಪೂರ್ವಜರ ಆಸ್ತಿಯಾ? ಯಾರ ಪ್ರೇರಣೆಯಿಂದ ಈ ಕೃತ್ಯಕ್ಕೆ ಕೈ ಹಾಕಿದ? ಸ್ಪಷ್ಟವಾಗಿ ತಿಳಿಸಬೇಕು. ಯಾರೋ ಕೆಲವೇ ಕೆಲವು ವ್ಯಕ್ತಿಗಳ ಕೈಗೊಂಬೆಯಾಗಿ ನಿನ್ನ ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ ಆಗುತ್ತಿದೆ ಎಂಬ ಭಯದಿಂದ ಈ ಇಂತಹ ಕೈ ಹಾಕಿರುವುದು ಸರಿಯೇ? ನಿನಗೆ ಸ್ವಾಭಿಮಾನ, ಆತ್ಮಗೌರವ, ಆತ್ಮಸಾಕ್ಷಿ ಏನಾದರೂ ಇದ್ದರೆ ನಾನು ನಿನಗೆ ಕೇಳಿದ ಎಲ್ಲಾ ಅಂಶಗಳಿಗೆ ಏಲು  ದಿನಗಳ ಒಳಗಾಗಿ ಉತ್ತರ ನೀಡಬೇಕು ಎಂದು ಹೇಳಿದರು.

 ಇಲ್ಲವಾದರೆ ನನ್ನ ಮೇಲೆ ಸಾರ್ವಜನಿಕವಾಗಿ ಆಗಿರುವ ಅವಮಾನ, ಅಪಮಾನ, ಮಾನಸಿಕ ಕಿರುಕುಳ, ಮಾನಸಿಕ ದೌರ್ಜನ್ಯ ಇವೆಲ್ಲವಕ್ಕೂ ಕಾನೂನು ತಜ್ಞರೊಂದಿಗೆ ಸಮಲೋಚಿಸಿ ಭಾರತ ಸಂವಿಧಾನದ ಅಡಿಯಲ್ಲಿ ನಿನ್ನ ಮೇಲೆ ಕಾನೂನು ಕ್ರಮ ಹೋರಾಟ ಮಾಡುತ್ತೇನೆಂದು ಈ ಪತ್ರಿಕಾಗೋಷ್ಠಿಯ ಮುಖೇನ ನಿಮಗೆ ಎಚ್ಚರಿಕೆ ನೀಡಿದರು.

ಬಳ್ಳಾರಿ ಲಾಜಿಕ್ ರಾಜಕೀಯ: ಒಬ್ರು ಸೀರೆ ಕೊಟ್ರೆ, ಮತ್ತೊಬ್ರು ಬೆಳ್ಳಿ ಕಾಯಿನ್ ಕೊಟ್ರು!

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಶಾಮನೂರು ಪುತ್ರ  ಎಸ್ ಎಸ್ ಮಲ್ಲಿಕಾರ್ಜನ್ ವಿರುದ್ಧವು ವಾಗ್ದಾಳಿ ನಡೆಸಿ ಅವರ ಶ್ರೀಮಂತಿಕೆ ದರ್ಪ ಇದ್ದರೆ ಅವರಿಗೆ ಅಂಜಿಕೆ ಪ್ರಶ್ನೇ ಇಲ್ಲ ಎಂದರು.ಲಜ್ಜೆಗೆಟ್ಟ ರಾಜಕಾರಣ ಮಾಡೋಲ್ಲ..ನಾನು ಯಾವುದೇ ಪಕ್ಷಕ್ಕೆ ಹೋಗೋಲ್ಲ ಅಂತಾ ತಪ್ಪು ನಾನು ಮಾಡಿಲ್ಲ ಎಂದರು.

 

 Karnataka Politics: ಬಿಜೆಪಿ ತೊರೆದು ಅಪಾರ ಬೆಂಬಲಿಗರೊಂದಿಗೆ ಗವಿಯಪ್ಪ ಕಾಂಗ್ರೆಸ್‌ ಸೇರ್ಪಡೆ

ಪಕ್ಷದ ತೀರ್ಮಾನಕ್ಕೆ ನಾನು ತೀರ್ಮಾನ ತೆಗೆದುಕೊಂಡಿದ್ದೇನೆ: ಜಿಲ್ಲಾದ್ಯಕ್ಷ ಹೆಚ್ ಬಿ ಮಂಜಪ್ಪ
ವೈ ರಾಮಪ್ಪನವರ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ‌.ಅದಕ್ಕೆ ಉಚ್ಚಾಟನೆ ಮಾಡಿ ಎಂದು ಸಲಹಾ ಸಮಿತಿ ತೀರ್ಮಾನವನ್ನು ನಾನು ಶಿಪಾರಸ್ಸು ಮಾಡಿದ್ದೇನೆ. ಜಿಲ್ಲಾ ಕಾಂಗ್ರೆಸ್ ಅದ್ಯಕ್ಷನಾಗಿ ನಾನು ಏನು ಮಾಡಬೇಕು ಅದನ್ನು ಮಾಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿ ಹಂತ ಹಂತವಾಗಿ ಮೇಲಕ್ಕೇರಿದ್ದೇನೆ. ಜಿಲ್ಲಾ ಮುಖಂಡರ ಶಿಪಾರಸ್ಸನ್ನು ಪುರಸ್ಕರಿಸಿ ಪಕ್ಷ ಉಚ್ಛಾಟನೆ ಮಾಡಿದೆ ಅದಕ್ಕೆ ನಾನು ಹೊಣೆಯಲ್ಲ. ಇದು ಯಾರೋದೋ ಒಬ್ಬರ ತೀರ್ಮಾನವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ‌.

click me!