KarnatakaBudget2023: ರಾಮ​ನ​ಗರ ಜಿಲ್ಲೆಯ ಜನರ ತುಟಿಗೆ ತುಪ್ಪ, ಕೊನೆಗೂ ಗೆದ್ದ ಡಿಕೆ ಸಹೋ​ದ​ರರು..!

By Kannadaprabha News  |  First Published Jul 8, 2023, 3:30 AM IST

ರಾಮನಗರ ಜಿಲ್ಲೆ​ಯಿಂದ ಆಯ್ಕೆ​ಯಾಗಿರುವ ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌, ಶಾಸ​ಕ​ರಾದ ಇಕ್ಬಾಲ್‌ ಹುಸೇನ್‌, ಬಾಲ​ಕೃ​ಷ್ಣ​ ಹಾಗೂ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ರ​ವರ ಬಗ್ಗೆ ಅಪಾ​ರ​ವಾದ ನಿರೀಕ್ಷೆ ಇಟ್ಟು​ಕೊ​ಳ್ಳ​ಲಾ​ಗಿತ್ತು. ಅವರೂ ಕೂಡ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ನೀಡಿದ್ದರು. ಆದರೆ, ಇವರ ಪ್ರಸ್ತಾವನೆಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದಿರುವುದು ಬಜೆಟ್‌ನಿಂದ ಬಹಿರಂಗಗೊಂಡಿದೆ. 


ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ಜು.08):  ಮುಖ್ಯಮಂತ್ರಿ ಸಿದ್ದ​ರಾ​ಮ​ಯ್ಯ​ನವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆಯ ಜನರನ್ನು ನಿರಾಸೆಗೊಳಿಸದೆ ಸಮಾಧಾನ ಪಡಿಸುವ ಕೊಡುಗೆಗಳನ್ನು ನೀಡಿ ತುಟಿಗೆ ತುಪ್ಪ ಸವ​ರುವ ಕೆಲಸ ಮಾಡಿದ್ದಾರೆ.

Tap to resize

Latest Videos

ಜಿಲ್ಲೆ​ಯಿಂದ ಆಯ್ಕೆ​ಯಾಗಿರುವ ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌, ಶಾಸ​ಕ​ರಾದ ಇಕ್ಬಾಲ್‌ ಹುಸೇನ್‌, ಬಾಲ​ಕೃ​ಷ್ಣ​ ಹಾಗೂ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ರ​ವರ ಬಗ್ಗೆ ಅಪಾ​ರ​ವಾದ ನಿರೀಕ್ಷೆ ಇಟ್ಟು​ಕೊ​ಳ್ಳ​ಲಾ​ಗಿತ್ತು. ಅವರೂ ಕೂಡ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ನೀಡಿದ್ದರು. ಆದರೆ, ಇವರ ಪ್ರಸ್ತಾವನೆಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದಿರುವುದು ಬಜೆಟ್‌ನಿಂದ ಬಹಿರಂಗಗೊಂಡಿದೆ. ಕಾಂಗ್ರೆಸ್‌ ಶಾಸ​ಕರು ತಮ್ಮದೇ ಸರ್ಕಾ​ರದ ಮೇಲೆ ಒತ್ತಡ ಹೇರಿ ಜಿಲ್ಲೆಯ ಅಭಿ​ವೃ​ದ್ಧಿಗೆ ಪೂರ​ಕ​ವಾದ ವಿಶೇಷ ಯೋಜ​ನೆ​ಗ​ಳನ್ನು ಘೋಷ​ಣೆ ಮಾಡಿ​ಸು​ವಲ್ಲಿ ಹಾಗೂ ನೆನೆ​ಗು​ದಿಗೆ ಬಿದ್ದಿ​ರುವ ಯೋಜ​ನೆ​ಗ​ಳಿಗೆ ಮರು ಜೀವ ಕೊಡಿ​ಸು​ವಲ್ಲಿ ಎಡ​ವಿ​ರು​ವುದು ಸ್ಪಷ್ಟ​ವಾ​ಗಿದೆ.

ಬಿಜೆಪಿ ಸರ್ಕಾರದ 10 ಯೋಜನೆಗೆ ತಡೆ, ಉಚಿತ ಗ್ಯಾರೆಂಟಿ ಜೊತೆ ಹೊಸ ಕಾರ್ಯಕ್ರಮ ಘೋಷಣೆ!

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಿಂದಿನ ಸರ್ಕಾರಗಳಲ್ಲಿ ಸಿಗಬೇಕಾದ ನ್ಯಾಯ ಸಿಗದ ಕಾರಣ ಜನರ ನಿರೀಕ್ಷೆಗಳೆಲ್ಲವೂ ಹುಸಿಯಾಗಿದ್ದವು. ನಮ್ಮ ಜಿಲ್ಲೆಯವರೇ ಉಪಮುಖ್ಯಮಂತ್ರಿ ಆಗಿರುವ ಕಾರಣ ಬಂಪರ್‌ ಕೊಡುಗೆ ಸಿಗು​ತ್ತದೆ ಎಂಬ ನಿರೀಕ್ಷೆಗಳು ಬೆಟ್ಟದಷ್ಟುಮೂಡಿದ್ದವು.ಆದರೆ, ಮುಖ್ಯಮಂತ್ರಿ ಸಿದ್ದ​ರಾ​ಮಯ್ಯರವರು ಮಂಡಿಸಿದ ಬಜೆಟ್‌ನಲ್ಲಿ ಬಹುತೇಕ ನಿರೀಕ್ಷೆಗಳು ಹುಸಿಯಾಗಿವೆ. ರಾಜಧಾನಿಗೆ ಸನಿಹದಲ್ಲಿಯೇ ರಾಮನಗರ ಇದ್ದರೂ ಪ್ರಗತಿಯನ್ನೇ ಕಾಣದೆ ಅಭಿವೃದ್ಧಿಯಿಂದ ವಂಚಿತವಾಗಿದೆ. ಆದರೂ ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ರವರು ಅಭಿವೃದ್ಧಿಯಲ್ಲಿ ಜಿಲ್ಲೆಗೆ ಸಿಗಬೇಕಾದ ನ್ಯಾಯವನ್ನು ದಕ್ಕಿಸುವಲ್ಲಿ ವಿಫ​ಲ​ರಾ​ಗಿ​ದ್ದಾ​ರೆ.

ಎತ್ತಿನಹೊಳೆ, ಮೇಕೆದಾಟು ಪ್ರಸ್ತಾಪಕ್ಕೆ ಸೀಮಿತ:

ಎತ್ತಿ​ನ​ಹೊಳೆ ಮತ್ತು ಮೇಕೆ​ದಾಟು ಯೋಜನೆ ಸಂಪ್ರ​ದಾ​ಯ​ದಂತೆ ಮತ್ತೊಮ್ಮೆ ಬಜೆಟ್‌ನಲ್ಲಿ ಪ್ರಸ್ತಾ​ಪ​ವಾ​ಗಿದೆ. ಎತ್ತಿ​ನ​ಹೊಳೆ ಯೋಜ​ನೆ​ಯಿಂದ ಜಿಲ್ಲೆಗೆ ನೀರಾ​ವರಿ ಸೌಲಭ್ಯ ಸಿಗುವ ನಿರೀಕ್ಷೆಯಿದೆ. ಇನ್ನು ಮೇಕೆ​ದಾಟು ಯೋಜ​ನೆಗೆ ಸಂಬಂಧಿ​ಸಿ​ದಂತೆ ಅರಣ್ಯೀಕರಣಕ್ಕೆ ಅಗತ್ಯವಿರುವ ಭೂ ಪರಿಹಾರ ನೀಡುವುದು ಹಾಗೂ ಕೇಂದ್ರದ ಅನುಮೋದನೆ ಪಡೆಯುವುದಕ್ಕೆ ಸೀಮಿತ​ಗೊಂಡಿದೆ. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಘೋಷಣೆ ಆಗಿ​ಲ್ಲ.

ಕೊನೆಗೂ ಗೆದ್ದ ಡಿಕೆ ಸಹೋ​ದ​ರರು:

ಕಳೆದ 5 ವರ್ಷ​ಗ​ಳಿಂದ ಸ್ವಕ್ಷೇತ್ರ ಕನ​ಕ​ಪು​ರಕ್ಕೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಿ​ಸಲು ನಡೆ​ಸಿದ ಹೋರಾ​ಟ​ದಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಡಿ.ಕೆ.​ಸು​ರೇಶ್‌ ಸಫ​ಲ​ಗೊಂಡಿ​ದ್ದಾರೆ. 2018 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಕನಕಪುರ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದಾಗ ಕನಕಪುರದಲ್ಲಿ ಮೆಡಿಕಲ… ಕಾಲೇಜು ನಿರ್ಮಾಣ ಮಾಡಿಸುವ ಸಂಬಂಧ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿ​ದ್ದರು.
ಆನಂತರ 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿ​ಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಮೆಡಿಕಲ್‌ ಕಾಲೇಜು ಘೋಷಣೆ ಮಾಡಿಸಿದ್ದರು. ಆದರೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಮೆಡಿಕಲ್‌ ಕಾಲೇಜು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿತ್ತು. ಇದೀಗ ಮತ್ತೆ ಕನಕಪುರದಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಡಿಕೆ ಸಹೋ​ದ​ರರು ಹಿಡಿದ ಹಠ ಬಿಡದೆ ಸಾಧಿ​ಸಿ​ದ್ದಾ​ರೆ.

ಆದರೀಗ ಕನಕಪುರಕ್ಕಾಗಿಯೇ ಹೊಸದಾಗಿ ಮೆಡಿಕಲ್‌ ಕಾಲೇಜು ಘೋಷಣೆ ಮಾಡಲಾಗಿದೆಯೋ ಅಥವಾ ರಾಮನಗರದಲ್ಲಿ ನಿರ್ಮಾಣವಾಗಲಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿಯಲ್ಲಿನ ಉದ್ದೇಶಿತ ಮೆಡಿಕಲ್‌ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆಯೋ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ.

ಜಾನಪದ ಲೋಕಕ್ಕೆ ಆರ್ಥಿಕ ನೆರವು:

ಜಾನಪದ ವಸ್ತುಗಳು ಮತ್ತು ಕಲೆಯನ್ನು ಸಂರಕ್ಷಣೆ ಮಾಡುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಎಚ್‌.ಎಲ….ನಾಗೇಗೌಡರ ಕನಸ್ಸಿನ ಕೂಸಾದ ಜಾನಪದ ಲೋಕವು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿತ್ತು. ಸರ್ಕಾರ ಈ ಬಾರಿ ಬಜೆಟ್‌ನಲ್ಲಿ 2 ಕೋಟಿ ಆರ್ಥಿಕ ನೆರವು ಘೋಷಿ​ಸಿದೆ. ಇದ​ರೊಂದಿಗೆ ಸಂಕ​ಷ್ಟ​ದ​ಲ್ಲಿ​ರುವ ಜಾನಪದ ಲೋಕ ಕಾಯ​ಕಲ್ಪ ಪಡೆ​ದು​ಕೊಂಡು ಮತ್ತಷ್ಟುಜನಾ​ಕ​ರ್ಷ​ಣೀಯ​ಗೊ​ಳ್ಳಲು ಸಹ​ಕಾ​ರಿ​ಯಾ​ಗ​ಲಿ​ದೆ.

ಅಲ್ಪ​ಸಂಖ್ಯಾತ ಯುವ​ಜ​ನ​ರಿಗೆ ಕೌಶಲ್ಯ ತರ​ಬೇ​ತಿ​ ನೀಡಲು ಅಲ್ಪಸಂಖ್ಯಾತ ಕೌಶಲ್ಯ ಕೇಂದ್ರ ಹಾಗೂ ಮಾನವ - ಕಾಡಾನೆ ಸಂಘ​ರ್ಷ​ವನ್ನು ನಿಯಂತ್ರಿ​ಸುವ ನಿಟ್ಟಿ​ನಲ್ಲಿ ರಾಮ​ನ​ಗ​ರ​ದಲ್ಲಿ ಆನೆ ಕಾರ್ಯ​ಪ​ಡೆ​ ರಚಿ​ಸುವ ಘೋಷ​ಣೆ​ಯಾ​ಗಿದೆ. ಉಳಿ​ದಂತೆ ಜಿಲ್ಲೆಯ ನಿರೀ​ಕ್ಷೆ​ಗಳು ಹಾಗೂ ಬಿಜೆಪಿ ಸರ್ಕಾ​ರ​ದಲ್ಲಿ ಘೋಷ​ಣೆ​ಯಾ​ಗಿದ್ದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿ ರಾಮಮಂದಿರ ನಿರ್ಮಾಣ ಸೇರಿ​ದಂತೆ ಪ್ರಮುಖ ಯೋಜ​ನೆ​ಗಳು ಕೋಕ್‌ ಪಡೆ​ದಿ​ವೆ.

Karnataka Budget 2023: ಗೂಬೆ ಕೂರಿಸುವ, ಜನರ ತಲೆ ಮೇಲೆ ಹೂವ ಇಡೋ ಬಜೆಟ್: ಎಚ್‌ಡಿಕೆ ರಿಯಾಕ್ಷನ್

ರಾಜ್ಯ ಆಯವ್ಯಯದಲ್ಲಿ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ದಕ್ಕಿದ್ದು ಏನೇನು ?

1.ಎ​ತ್ತಿ​ನ​ಹೊಳೆ ಯೋಜ​ನೆ​ಯನ್ನು ಹಿಂದಿನ ಸರ್ಕಾರ ಸಕಾಲ​ದಲ್ಲಿ ಪೂರ್ಣ​ಗೊ​ಳಿ​ಸದ ಕಾರಣ ದರ ಹೆಚ್ಚ​ಳ​ಗೊಂಡು ಈ ಯೋಜ​ನೆಯು 23,252 ಕೋಟಿ ರು. ಮೊ​ತ್ತಕ್ಕೆ ಪರಿಷ್ಕೃ​ತ​ಗೊಂಡಿದೆ. ಯೋಜ​ನೆ​ಯಡಿ ಬಾಕಿ ಇರುವ ಕಾಮ​ಗಾ​ರಿ​ಗ​ಳನ್ನು ಪೂರ್ಣ​ಗೊ​ಳಿ​ಸಲು ಕ್ರಮ​ವ​ಹಿಸಿ ಕೋಲಾರ, ಚಿಕ್ಕ​ಬ​ಳ್ಳಾ​ಪುರ, ರಾಮ​ನ​ಗರ, ಬೆಂಗ​ಳೂರು ಗ್ರಾಮಾಂತರ ಮತ್ತು ತುಮ​ಕೂರು ಜಿಲ್ಲೆ​ಗ​ಳಿಗೆ ಕುಡಿ​ಯುವ ನೀರು ಪೂರೈ​ಸಲು ಆದ್ಯ​ತೆ ಮೇಲೆ ಕ್ರಮ ತೆಗೆ​ದು​ಕೊ​ಳ್ಳುವು​ದು.
2.ಮೇ​ಕೆ​ದಾಟು ಸಮ​ತೋ​ಲನ ಜಲಾ​ಶಯ ಹಾಗೂ ಕುಡಿ​ಯುವ ನೀರಿನ ಯೋಜ​ನೆಯ ವಿವ​ರ​ವಾದ ಯೋಜನಾ ವರದಿ ಹಾಗೂ ಪರಿ​ಸರ ತೀರು​ವಳಿ ಪ್ರಸ್ತಾ​ವ​ನೆ​ಯನ್ನು ಈಗಾ​ಗಲೇ ಕೇಂದ್ರ ಸರ್ಕಾ​ರಕ್ಕೆ ಸಲ್ಲಿ​ಸ​ಲಾ​ಗಿದ್ದು, ಶೀಘ್ರ​ವಾಗಿ ತೀರು​ವಳಿ ಪಡೆ​ಯಲು ಅಗತ್ಯ ಕ್ರಮ ಕೈಗೊ​ಳ್ಳ​ಲಾ​ಗು​ವುದು. ​ಅ​ರ​ಣ್ಯೀ​ಕ​ರ​ಣದ ಪರಿ​ಹಾ​ರಕ್ಕೆ ಅಗ​ತ್ಯ​ವಿ​ರುವ ಭೂಮಿ​ಯನ್ನು ಗುರು​ತಿ​ಸ​ಲಾ​ಗಿದ್ದು, ಭೂಸ್ವಾ​ಧೀನ ಪ್ರಕ್ರಿ​ಯೆ​ಗಳನ್ನು ಜರು​ಗಿ​ಸಲು ಆದ್ಯತೆ ಮೇರೆಗೆ ಕ್ರಮ ವಹಿ​ಸ​ಲಾ​ಗು​ವುದು.
3.ರಾ​ಜೀವ್‌ ಗಾಂಧಿ ಆರೋಗ್ಯ ವಿಜ್ಞಾ​ನ​ಗಳ ವಿಶ್ವವಿ​ದ್ಯಾ​ಲ​ಯದ ವತಿ​ಯಿಂದ ಕನ​ಕ​ಪುರ ತಾಲೂ​ಕಿ​ನಲ್ಲಿ ಒಂದು ಹೊಸ ವೈದ್ಯ​ಕೀಯ ಕಾಲೇ​ಜನ್ನು ಸ್ಥಾಪಿ​ಸ​ಲಾ​ಗು​ವುದು.
4.ರಾ​ಮ​ನಗರ, ಬೆಳ​ಗಾವಿ, ದಾವ​ಣ​ಗೆರೆ, ಕಲ್ಬುರ್ಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ​ಗ​ಳಲ್ಲಿ ಅಲ್ಪ​ಸಂಖ್ಯಾತ ಯುವ​ಜ​ನ​ರಿಗೆ ಕೌಶಲ್ಯ ತರ​ಬೇ​ತಿ​ಯನ್ನು 4 ಕೋಟಿ ರು.ವೆಚ್ಚ​ದಲ್ಲಿ ಪ್ರಾರಂಭಿ​ಸುವು​ದು.
5.ಜಾ​ನ​ಪದ ಕಲೆ​ಗ​ಳನ್ನು ಉಳಿಸಿ ಬೆಳೆ​ಸಲು ಮತ್ತು ಯುವ ಪೀಳಿ​ಗೆಗೆ ಪರಿ​ಚ​ಯಿ​ಸಲು ಪ್ರಮುಖ ಪಾತ್ರ ವಹಿ​ಸು​ತ್ತಿ​ರುವ ರಾಮ​ನ​ಗರ ಜಿಲ್ಲೆಯ ಜಾನ​ಪದ ಲೋಕಕ್ಕೆ 2 ಕೋಟಿ ರು. ಅನುದಾನ ನೀಡುವುದು.
6.ಮಾನವ - ಕಾಡಾನೆ ಸಂಘ​ರ್ಷ​ವನ್ನು ನಿಯಂತ್ರಿ​ಸುವ ನಿಟ್ಟಿ​ನಲ್ಲಿ ರಾಜ್ಯ​ದಲ್ಲಿ ಈಗಾ​ಗಲೇ ಮೈಸೂ​ರು, ಮಂಡ್ಯ, ಚಿಕ್ಕ​ಮ​ಗ​ಳೂರು, ಹಾಸನ ಮತ್ತು ಕೊಡಗು ಜಿಲ್ಲೆ​ಗ​ಳ್ಲಿಲ ಆನೆ ಕಾರ್ಯ​ಪ​ಡೆ​ಯನ್ನು ರಚಿ​ಸ​ಲಾ​ಗಿದ್ದು, ಪ್ರಸಕ್ತ ಸಾಲಿ​ನಲ್ಲಿ ರಾಮ​ನ​ಗರ ಮತ್ತು ಬನ್ನೇ​ರು​ಘ​ಟ್ಟ​ದಲ್ಲಿ ಎರಡು ಹೊಸ ಆನೆ ಕಾರ್ಯ​ಪ​ಡೆ​ಗ​ಳನ್ನು ರಚಿ​ಸ​ಲಾ​ಗು​ವುದು.
7. ರಾಮನಗರದ ಬಿಡದಿಯಲ್ಲಿ ಮಹಿಳೆಯರಿಗಾಗಿ ಪ್ರಾದೇಶಿಕ ವಾಹನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ 5 ಕೋಟಿ ರು. ಸಹಾಯಧನ

click me!