ಚಿಕ್ಕಮಗಳೂರಲ್ಲಿ ತಗ್ಗಿದ ವರುಣನ ಅಬ್ಬರ, ಇಂದೂ ಕೂಡ ಶಾಲಾ, ಕಾಲೇಜುಗಳಿಗೆ ರಜೆ

By Girish Goudar  |  First Published Jul 8, 2023, 2:00 AM IST

ಕಳಸ ತಾಲ್ಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು(ಶನಿವಾರ) ರಜೆ ಘೋಷಿಸಲಾಗಿದೆ. ಮಳೆಯಾಗುತ್ತಿರುವುದಲ್ಲದೆ, ಭದ್ರಾ ನದಿ ಹಾಗೂ ಅದರ ಉಪನದಿಗಳು ಮತ್ತು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವುದಲ್ಲದೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಕಾರಣ ತಾಲ್ಲೂಕಿನ ಎಲ್ಲಾ ಅಂಗನವಾಡಿ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜು.08):  ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ(ಶುಕ್ರವಾರ) ಮುಂಗಾರಿನ ಅಬ್ಬರ ಕೊಂಚ ತಗ್ಗಿದೆ. ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿದ ಮಳೆ ಇಂದು ಬಿರುಸು ಕಳೆದುಕೊಂಡಿತ್ತು. ಗುರುವಾರ ಸಂಜೆವರೆಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಪ್ರಮುಖ ನದಿಗಳಲ್ಲಿ ಒಳ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿತ್ತು .ಕಳಸ, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ವಿವಿಧೆಡೆಗಳಲ್ಲಿ ಮಳೆ ನಿನ್ನೆಯೂ ಮುಂದುವರಿದಿತ್ತು. ಆದರೆ ಅಬ್ಬರ ಕಡಿಮೆ ಇರುವುದರಿಂದ ಧರೆ ಕುಸಿತ, ರಸ್ತೆ, ಸೇತುವೆಗಳಿಗೆ ಹಾನಿಯಂತಹ ಪ್ರಕರಣಗಳು ನಡೆದಿಲ್ಲ. 

Tap to resize

Latest Videos

undefined

ಇಂದೂ ಕೂಡ ಶಾಲಾ, ಕಾಲೇಜುಗಳಿಗೆ ರಜೆ : 

ಕಳಸ ತಾಲ್ಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು(ಶನಿವಾರ) ರಜೆ ಘೋಷಿಸಲಾಗಿದೆ. ಮಳೆಯಾಗುತ್ತಿರುವುದಲ್ಲದೆ, ಭದ್ರಾ ನದಿ ಹಾಗೂ ಅದರ ಉಪನದಿಗಳು ಮತ್ತು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವುದಲ್ಲದೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಕಾರಣ ತಾಲ್ಲೂಕಿನ ಎಲ್ಲಾ ಅಂಗನವಾಡಿ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.

ಚಾರ್ಮಾಡಿ ಘಾಟ್‌ನಲ್ಲಿ KSRTC ಮುಖಾಮುಖಿ ಡಿಕ್ಕಿ, ಟ್ರಾಫಿಕ್‌ನಲ್ಲಿ ಸಿಲುಕಿದ ಗರ್ಭಿಣಿ ರಕ್ಷಿಸಿದ ಮುಸ್ಲಿಂ ಯುವಕ

ಧರೆ ಕುಸಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ : 

ಚಿಕ್ಕಮಗಳೂರು ಜಿಲ್ಲೆಯ ಮೇಲ್ಪಾಲ್ ಗ್ರಾಮದಲ್ಲಿ ಧರೆ ಕುಸಿತವಾಗಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.ಎನ್. ಆರ್. ಪುರ ತಾಲೂಕಿನ ಮೇಲ್ಪಾಲ್ ಗ್ರಾಮದ ಶಶಿಕುಮಾರ್ ಮನೆ ಮುಂದೆ ಧರೆ ಕುಸಿತವಾಗಿದೆ. ಧರೆ ಕುಸಿಯುತ್ತಿದ್ದಂತೆ ಕೂದಲೆಳೆ ಅಂತರದಲ್ಲಿ ಶಶಿಕುಮಾರ್ ಪಾರಾಗಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಮುಂದೆ ನಿಂತಿದ್ದ ಸ್ಥಳದಲ್ಲಿಯೇ ಧರೆ ಕುಸಿತವಾಗಿರುವ ದೃಶ್ಯ ಸಿಸಿಟಿವಿಯಲ್ಲಿ  ಸೆರೆಯಾಗಿದ್ದು ಶಶಿಕುಮಾರ್ ಆ ಜಾಗದಿಂದ ತಕ್ಷಣ ಹಿಂದೆ ಬಂದಿದ್ರಿಂದ ಕೂದಳೆಲೆ ಅಂತರದಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.

ತುರ್ತು ಸೇವೆಗೆ ದೂರವಾಣಿ ಸಂಪರ್ಕ

ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ಅನಾಹುತಗಳು ಸಂಭವಿಸದಂತೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತೀವ್ರ ಮಳೆಯ ಸಂಭವನೀಯ ಘಟನೆಗಳ ಮಾಹಿತಿಯನ್ನು ಸಾರ್ವಜನಿಕರು ತಿಳಿಸಲು ತುರ್ತು ಸೇವೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.ಮೂಡಿಗೆರೆ ತಾಲ್ಲೂಕು ಆಫೀಸರ್ ದೂ.ಸಂ. ೦೮೨೬೩-೨೨೦೨೦೪, ಚಿಕ್ಕಮಗಳೂರು ೦೮೨೬೨-೨೩೧೩೯೨, ಕೊಪ್ಪ ದೂ.ಸಂ. ೮೬೬೦೯೯೯೬೮೪, ಕಡೂರು ದೂ.ಸಂ. ೦೮೨೬೭-೨೨೧೨೪೦, ನರಸಿಂಹರಾಜಪುರ ದೂ.ಸಂ. ೭೦೧೯೨೯೦೧೫೯, ಶೃಂಗೇರಿ ದೂ.ಸಂ. ೦೮೨೬೫-೨೫೦೧೩೫, ಅಜ್ಜಂಪುರ ದೂ.ಸಂ. ೯೪೪೮೮೨೭೭೪೦, ಕಳಸ ದೂ.ಸಂ. ೦೮೨೬೩ ೨೦೦೭೨೨, ಸೇರಿದಂತೆ ಮೆಸ್ಕಾಂ, ಅಗಿಶಾಮಕ ಇನ್ನಿತರೆ ಇಲಾಖೆಗಳನ್ನು ಸನ್ನದ್ಧವಾಗಿಡಲಾಗಿದೆ.

ಸಾರ್ವಜನಿಕರು ತೀವ್ರ ಮಳೆಯಿಂದ ಸಂಭವಿಸಬಹುದಾದ ಘಟನೆಗಳು ಮತ್ತು ಅವಘಡಗಳ ಕುರಿತು ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವ ಮೂಲಕ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

click me!