ಬಾಗಲಕೋಟೆ: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು, ಡಿಸಿ ಜಾನಕಿ

By Girish Goudar  |  First Published Nov 28, 2023, 10:15 PM IST

ಅಂಗವೈಕಲ್ಯ ಪ್ರಕೃತಿಯ ವಿಶೇಷ ಸೃಷ್ಠಿಯಾಗಿದ್ದು, ಆ ವಿಶೇಷತೆಯನ್ನು ಇನ್ನಷ್ಟು ಜಾಸ್ತಿ ಮಾಡಿಕೊಂಡು ತಮ್ಮಲ್ಲಿರುವ ಪ್ರತಿಯನ್ನು ಅನಾವರಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಚಲಿತರಾಗದೇ, ಕೊಂಕು ಮಾತುಗಳಿಗೆ ಕಿವಿಗೊಡದೇ ಅವುಗಳಿಂದ ದೂರವಿದ್ದು, ಸಾಧನೆಯತ್ತ ಏಕಾಗ್ರತೆ ವಹಿಸಿದಾಗ ಮಾತ್ರ ಮುಂದೆ ಬರದಲು ಸಾಧ್ಯವಾಗುತ್ತದೆ. ಕೊಂಕು ಮಾತನಾಡುವವರು ಯಾವತ್ತು ದೊಡ್ಡವಾಗಿರುವದಿಲ್ಲ. ನಾನು ಸಹ ಇಂತಹ ಮಾತುಗಳಿಗೆ ಕಿವಿಗೊಡದೇ ಮುಂದೆ ಬಂದಿರುವುದಾಗಿ ತಿಳಿಸಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ.

ಬಾಗಲಕೋಟೆ(ನ.28):  ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲ ಒಂದಿದ್ದರೆ ಸಾಕು ಸಾಧನೆಗೆ ಯಾವುದೇ ರೀತಿಯ ಅಂಗವೈಕಲ್ಯ ಅಡ್ಡಿಯಾಗದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. ಇಂದು(ಮಂಗಳವಾರ) ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶೇಷ ಚೇತನ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

Tap to resize

Latest Videos

undefined

ಅಂಗವೈಕಲ್ಯ ಪ್ರಕೃತಿಯ ವಿಶೇಷ ಸೃಷ್ಠಿಯಾಗಿದ್ದು, ಆ ವಿಶೇಷತೆಯನ್ನು ಇನ್ನಷ್ಟು ಜಾಸ್ತಿ ಮಾಡಿಕೊಂಡು ತಮ್ಮಲ್ಲಿರುವ ಪ್ರತಿಯನ್ನು ಅನಾವರಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಚಲಿತರಾಗದೇ, ಕೊಂಕು ಮಾತುಗಳಿಗೆ ಕಿವಿಗೊಡದೇ ಅವುಗಳಿಂದ ದೂರವಿದ್ದು, ಸಾಧನೆಯತ್ತ ಏಕಾಗ್ರತೆ ವಹಿಸಿದಾಗ ಮಾತ್ರ ಮುಂದೆ ಬರದಲು ಸಾಧ್ಯವಾಗುತ್ತದೆ. ಕೊಂಕು ಮಾತನಾಡುವವರು ಯಾವತ್ತು ದೊಡ್ಡವಾಗಿರುವದಿಲ್ಲ. ನಾನು ಸಹ ಇಂತಹ ಮಾತುಗಳಿಗೆ ಕಿವಿಗೊಡದೇ ಮುಂದೆ ಬಂದಿರುವುದಾಗಿ ತಿಳಿಸಿದರು. 

ಸ್ವಾಮಿಗಳದ್ದು ಎಷ್ಟರ ಮಟ್ಟಿಗೆ ಕಷ್ಟ ಐತಿ ಅಂದ್ರ; ರಾಜಕಾರಣಿ ಮನೆ ಕಸ ಬಳಿಯುವ ಆಳಿಗಿಂತ ಕಡೇ ಆಗೇತಿ: ದಿಂಗಾಲೇಶ್ವರಶ್ರೀ ಆಕ್ರೋಶ

ಆತ್ಮ ವಿಶ್ವಾಸದೊಂದಿಗಿನ ಬದುಕು ಕಡಮೆಯಾಗಬಾರದು

ಇನ್ನು ಮಾತು ಮುಂದುವರೆಸಿದ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರು, ಆತ್ಮವಿಶ್ವಾಸ ಕಡಿಮೆ ಮಾಡಿಕೊಳ್ಳಬಾರದು. ಆತ್ಮವಿಶ್ವಾಸ ಕೈಹಿಡಿದು ನಡೆಸುತ್ತದೆ. ಅದಕ್ಕೆ ದಕ್ಕೆ ಬಾರದ ರೀತಿಯಲ್ಲಿ ನಿಮ್ಮ ನಿಮ್ಮ ಗುರಿಗಳನ್ನು ತಲುಪಿ. ಇದಕ್ಕೆ ಪೋಷಕರು, ಸಂಘ ಸಂಸ್ಥೆಗಳು ಹಾಗೂ ವ್ಯವಸ್ಥೆ ಕೂಡಾ ಅದರ ಜೊತೆಗೆ ನಿಂತು ಬರವಸೆ ಕೊಡಬೇಕು. ಆ ನಿಟ್ಟಿನಲ್ಲಿ ಅಂತಹ ವಾತಾವರಣ ಸೃಷ್ಠಿ ಮಾಡಲು ಶ್ರಮವಹಿಸಬೇಕು. ಆ ಮನಸ್ಥಿತಿ ಸಮಾಜಕ್ಕೂ ಬರಬೇಕು. ವ್ಯವಸ್ಥೆ ಕೂಡಾ ಸಂವೇಧನಾಶೀಲತೆಯಿಂದ ನಡೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.

ವಿಶೇಷ ಶಕ್ತಿ & ಕೌಶಲ್ಯ ಇರೋದೆ ವಿಕಲಚೇತನರಲ್ಲಿ

ಇನ್ನು  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ರಮೇಶ ಎಚ್ ಪ್ರಾಸ್ತಾವಿಕವಾಗಿ ಮಾತನಾಡಿ ವಿಕಲಚೇತನರಲ್ಲಿ ವಿಶೇಷವಾದ ಪ್ರತಿಭೆ, ಶಕ್ತಿ ಹೊಂದಿದ್ದು, ಅವರಲ್ಲಿ ಸಾಧಿಸುವ ಸಾಮಥ್ರ್ಯ, ಛಲವಿರುತ್ತದೆ. ಓರ್ವ ವಿಕಲಚೇತನ ವಿಜ್ಞಾನಿಗೆ ದೇಹದ ಭಾಗ ಯಾವುದೇ ರೀತಿಯ ಸ್ವಾದೀನ ಇರಲಿಲ್ಲ. ಆದರೆ ಮೆದುಳು ಮಾತ್ರ ಎಷ್ಟು ಸಾಮಥ್ರ್ಯ ಇತ್ತು ಎಂದರೆ ನೂರಾರು ವರ್ಷಗಳ ಬ್ರಹ್ಮಾಂಡದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಚಿಂತನೆ ಮಾಡಿ ಪ್ರಬಂಧ ಬರೆದಿದ್ದಾರೆ ಎಂದರು.

ಯಾವುದೇ ಸಮಾಜಕ್ಕೆ ನೋವುಂಟಾಗುವುದಿದ್ದರೆ ಜಾತಿಗಣತಿ ವರದಿ ಬಿಡುಗಡೆ ಮಾಡಬೇಡಿ: ದಿಂಗಾಲೇಶ್ವರ

ಚೆನ್ನಾಗಿದ್ದವರೇ ಮೌಂಟ್ ಎವರೆಸ್ಟ ಏರಲು ಕಷ್ಟಪಡುತ್ತಿದ್ದಾರೆ. ಆದರೆ ವಿಶೇಷ ಚೇತನರು ಮೌಂಟ್ ಎವರೆಸ್ಟ ಶಿಖರ ಏರುವ ಮೂಲ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ವಿಕಲಚೇತನರಲ್ಲಿ ಸಾಧಿಸುವ ಛಲ ಹೆಚ್ಚಿಗೆ ಇರುವದರಿಂದ ಅವರನ್ನು ಇಲಾಖೆ ವಿಶೇಷ ಚೇತನರೆಂದು ಕರೆಯುತ್ತಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!