ಸೆ. 19 ರಿಂದ ಹುಬ್ಬಳ್ಳಿ-ಮುಂಬೈ ನಡುವೆ ನೇರ ವಿಮಾನಯಾನ

Kannadaprabha News   | Asianet News
Published : Sep 11, 2020, 11:20 AM IST
ಸೆ. 19 ರಿಂದ ಹುಬ್ಬಳ್ಳಿ-ಮುಂಬೈ ನಡುವೆ ನೇರ ವಿಮಾನಯಾನ

ಸಾರಾಂಶ

ವಾರದಲ್ಲಿ ಮೂರು ದಿನ ಹುಬ್ಬಳ್ಳಿಯಿಂದ ಮುಂಬೈಗೆ ಇಂಡಿಗೋ ವಿಮಾನ| ಸೆ. 6ರಿಂದ ಹುಬ್ಬಳ್ಳಿ-ಚೆನ್ನೈ ನಡುವೆ ನೇರ ವಿಮಾನಯಾನ ಆರಂಭ| ಲಾಕ್‌ಡೌನ್‌ ಬಳಿಕ ಕೊಂಚ ಮಂಕಾಗಿದ್ದ ವಾಣಿಜ್ಯ ನಗರಿಯ ವಿಮಾನಯಾನ ಇದೀಗ ಫಿನಿಕ್ಸ್‌ನಂತೆ ಎದ್ದು ನಿಂತಿದೆ| 

ಹುಬ್ಬಳ್ಳಿ(ಸೆ.11): ಇಲ್ಲಿನ ವಿಮಾನ ನಿಲ್ದಾಣದಿಂದ ಸೆ. 19ರಿಂದ ಹುಬ್ಬಳ್ಳಿ-ಮುಂಬೈ ನೇರ ವಿಮಾನಯಾನ ಆರಂಭವಾಗಲಿದೆ. ಈ ಕುರಿತು ಇಂಡಿಗೋ ಸಂಸ್ಥೆ ಸಚಿವ ಪ್ರಹ್ಲಾದ ಜೋಶಿ ಅವರಿಗೆ ತಿಳಿಸಿದ್ದಾಗಿ ಅವರು ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 

ವಾರದಲ್ಲಿ ಮೂರು ದಿನ ಮುಂಬೈಗೆ ಸಂಪರ್ಕ ಕಲ್ಪಿಸಲಿರುವ ಇಂಡಿಗೋ ವಿಮಾನವು ಈಗಾಗಲೆ ಸೆ. 6ರಿಂದ ಹುಬ್ಬಳ್ಳಿ-ಚೆನ್ನೈ ನಡುವೆ ನೇರ ವಿಮಾನಯಾನ ಕಲ್ಪಿಸಿದೆ. 

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ILS ಅಳವಡಿಕೆ ಪೂರ್ಣ

ಇನ್ನು, ಹುಬ್ಬಳ್ಳಿ- ಬೆಂಗಳೂರು ನಡುವೆ ಸಂಚರಿಸುತ್ತಿದೆ. ಸೆ. 16ರಿಂದ ಹುಬ್ಬಳ್ಳಿ-ಕಣ್ಣೂರು (ಕೇರಳ) ನಡುವೆಯೂ ಇಂಡಿಗೋ ಸಂಪರ್ಕ ಸೇವೆ ಒದಗಿಸುತ್ತಿದೆ. ಲಾಕ್‌ಡೌನ್‌ ಬಳಿಕ ಕೊಂಚ ಮಂಕಾಗಿದ್ದ ವಾಣಿಜ್ಯ ನಗರಿಯ ವಿಮಾನಯಾನ ಇದೀಗ ಫಿನಿಕ್ಸ್‌ನಂತೆ ಎದ್ದು ನಿಂತಿದೆ.
 

PREV
click me!

Recommended Stories

ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌
ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!