ಹಿಂದೂ, ಆರ್‌ಎಸ್‌ಎಸ್‌ ವಿರೋಧಿ ಸಿದ್ಧಲಿಂಗ ಶ್ರೀ ಜನ್ಮದಿನ ಭಾವೈಕ್ಯತಾ ದಿನವೇಕೆ?: ದಿಂಗಾಲೇಶ್ವರ ಶ್ರೀ

By Girish GoudarFirst Published Apr 20, 2022, 12:03 PM IST
Highlights

*  ರಾಜ್ಯ ಸರ್ಕಾರಕ್ಕೆ ಫಕೀರ ದಿಂಗಾಲೇಶ್ವರ ಶ್ರೀ ಪ್ರಶ್ನೆ
*  ಭಾವೈಕ್ಯತೆಯ ಅರ್ಥ ಗೊತ್ತಿರದ ರಾಜಕಾರಣಿಗಳಿಂದ ಪ್ರಮಾದ
*  ಶಿರಹಟ್ಟಿ ಮಠದ ಭಾವೈಕ್ಯತೆ 
 

ಶಿರಹಟ್ಟಿ(ಏ.20):  ಆರ್‌ಎಸ್‌ಎಸ್‌(RSS), ಹಿಂದೂ(Hindu), ಬ್ರಾಹ್ಮಣ ಸೇರಿದಂತೆ ಹಲವು ವರ್ಗಗಳ ವಿರೋಧಿಯಾಗಿದ್ದ ಗದುಗಿನ ತೋಂಟದಾರ್ಯ ಶ್ರೀಗಳ(Tontadarya Shri) ಜನ್ಮದಿನ ಭಾವೈಕ್ಯತಾ ದಿನವೇಕೆ?
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಇಲ್ಲಿನ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀ(Dingaleshwara Shri) ಇಂಥದೊಂದು ಪ್ರಶ್ನೆ ಮಾಡುವ ಜತೆಗೆ ವೀರಶೈವ -ಲಿಂಗಾಯತ ಒಂದಲ್ಲಾ ಅವು ಎರಡು ಎನ್ನುವ ವಿವಾದ ಸೃಷ್ಟಿಮಾಡಿ ಇಡೀ ಸಮಾಜ ಹೊತ್ತಿ ಉರಿಯುವಂತೆ, ಒಂದು ಪಕ್ಷದ ಬೆಂಬಲ ತೆಗೆದುಕೊಂಡು ಕೆಟ್ಟ ನಿರ್ಧಾರಕ್ಕೆ ಕೈ ಹಾಕಿರುವ ಸ್ವಾಮೀಜಿಗಳು ಭಾವೈಕ್ಯತೆ ಪ್ರತೀಕ ಹೇಗಾಗುತ್ತಾರೆ? ಎನ್ನುವ ಪ್ರಶ್ನೆಯನ್ನೂ ಮಾಡಿದರು.
ತೋಂಟದಾರ್ಯ ಶ್ರೀಗಳಿಗೆ ಪ್ರಶಸ್ತಿ ನೀಡಲಿ ಅಥವಾ ವಿಧಾನಸೌಧದಲ್ಲಿ ಅವರ ಭಾವಚಿತ್ರ ಹಾಕಲಿ, ನಮ್ಮ ತಕರಾರಿಲ್ಲ. ಆದರೆ, ಭಾವೈಕ್ಯತೆ ಎಂಬ ಶಬ್ದಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಅವರ ಹೆಸರಲ್ಲಿ ಭಾವೈಕ್ಯತಾ ದಿನ ಆಚರಿಸಲಾಗುವುದು ಎಂಬ ಮುಖ್ಯಮಂತ್ರಿಗಳ ಹೇಳಿಕೆಯೇ ಹಾಸ್ಯಾಸ್ಪದವಾಗಿದೆ ಎಂದರು.

ಸರ್ಕಾರ ಯಾರೊಬ್ಬರ ಸ್ವತ್ತಲ್ಲ, ಜನರ ಸರ್ಕಾರ, ಜನಪ್ರತಿನಿಧಿಗಳ ಸರ್ಕಾರ ಎಂಬುದು ನೆನಪಿನಲ್ಲಿರಲಿ. ಇತಿಹಾಸ ತಿಳಿಯದೇ ಸಿದ್ಧಾಂತಗಳಿಗೆ ದ್ರೋಹ ಬಗೆಯುವುದು ಒಳಿತಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಿ.ಸಿ. ಪಾಟೀಲ(CC Patil) ಅವರು ಮಠ ಮಾನ್ಯಗಳಲ್ಲಿಯೂ ರಾಜಕೀಯ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಪರ್ಸೆಂಟೇಜ್ ಕೊಟ್ಟಿಲ್ಲ, ಆದ್ರೆ ಹಣ ಕಟ್ ಮಾಡಿ ಕೊಡ್ತೇನೆ ಅನ್ನೋ ಹಠಕ್ಕೆ ಅಧಿಕಾರಿಗಳು ಬಿದ್ದಿದ್ದಾರೆ‌!

ಶಿರಹಟ್ಟಿ ಮಠದ ಭಾವೈಕ್ಯತೆ:

ಸೈದ್ಧಾಂತಿಕ ಹಾಗೂ ರಾಜಕೀಯ ಬೇರೆ. ಇತಿಹಾಸವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೇ ವೈಯಕ್ತಿಕ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಸಮಾಜದ್ರೋಹ ಕೆಲಸ. ನೂರಾರು ವರ್ಷಗಳ ಕಾಲ ಇತಿಹಾಸ ಹೊಂದಿರುವ ಮಠದ ಸಂಪ್ರದಾಯ ಹಾಗೂ ಇತಿಹಾಸ ಅರಿಯದೇ ನಾನು ಹೇಳಿದ್ದೇ ವೇದವಾಕ್ಯ ಎಂದು ಮುಂದುವರಿಯುವ ರಾಜಕೀಯ ನಾಯಕರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

Gadag: ಮಠದ ಹಣವನ್ನೂ ಕಿತ್ತುಕೊಳ್ಳುವ ಇವರನ್ನ ದೇವರೇ ಕಾಪಾಡಬೇಕು: ಹೆಚ್.ಕೆ.ಪಾಟೀಲ್

500 ವರ್ಷಗಳಿಂದ ಶಿರಹಟ್ಟಿ ಮಠ(Shirahatti Matha) ಭಾವೈಕ್ಯತೆ ಸಾರುತ್ತ ಬಂದಿದೆ. 13-14 ತಲೆಮಾರಿನಿಂದ ಶ್ರೀ ಮಠ ಭಾವೈಕ್ಯತೆ ಪೀಠ ಎನಿಸಿಕೊಂಡಿದೆ. ಜಿಲ್ಲಾ ಕೇಂದ್ರದಿಂದ ಕೇವಲ 25, ನರಗುಂದದಿಂದ 50 ಕಿಮೀ ದೂರವಿರುವ ಶಿರಹಟ್ಟಿ ಮಠದ ಇತಿಹಾಸ ನಿಮಗೆ ಗೊತ್ತಿಲ್ಲವೇ? ಎಂದು ಸಚಿವ ಸಿ.ಸಿ ಪಾಟೀಲ ಅವರಿಗೆ ಪ್ರಶ್ನಿಸಿದರು.

ಮಠದಲ್ಲಿಯೂ ರಾಜಕಾರಣ(Politics) ಮಾಡುವ ಉದ್ದೇಶ ನಿಮ್ಮ ಹೇಳಿಕೆಯಿಂದ ತಿಳಿದು ಬರುತ್ತಿದೆ. ಸಚಿವ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಇರಬೇಕು. ಬೇಕಾಬಿಟ್ಟಿಹೇಳಿಕೆ ನೀಡುವುದಲ್ಲ. ಕನಿಷ್ಠ ನಿಮ್ಮ ಸ್ಥಾನವನ್ನು ಅರಿತಾದರೂ ನಿಜಾಂಶ ಮಾತನಾಡುವುದನ್ನು ಕಲಿಯಬೇಕು. ನಿಮ್ಮ ನಡೆ ಇದೇ ರೀತಿ ಮುಂದುವರಿದರೇ ಯಾವುದೇ ಹೋರಾಟಕ್ಕಾದರೂ ಸಿದ್ದ ಎಂದು ಎಚ್ಚರಿಸಿದರು.
 

click me!