Chamarajanagar: ಶಿಥಿಲಗೊಂಡಿರುವ ವಿದ್ಯುತ್ ಕಂಬ: ಜನ, ಜಾನುವಾರಗಳಷ್ಟೇ ಅಲ್ಲ ವನ್ಯ ಪ್ರಾಣಿಗಳಿಗೂ ಕಂಟಕ!

By Govindaraj S  |  First Published Jul 12, 2024, 8:39 PM IST

ಅದು ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ. ಜನ ಜಾನುವಾರುಗಳಷ್ಟೇ ಅಲ್ಲ ವನ್ಯಜೀವಿಗಳ ಪ್ರಾಣಕ್ಕೂ ಕಂಟಕವಾಗಿ ಭಾರೀ ಅಪಾಯವನ್ನೇ ಆಹ್ವಾನಿಸುತ್ತಿರುವ ಈ ವಿದ್ಯುತ್ ಕಂಬ ಬದಲಿಸಲು ಚೆಸ್ಕಾಂ ಇಂದು ನಾಳೆ ಅಂತ ಮೀನಾಮೇಷ ಎಣಿಸುತ್ತಿದೆ. 


ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ, ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜು.12): ಅದು ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ. ಜನ ಜಾನುವಾರುಗಳಷ್ಟೇ ಅಲ್ಲ ವನ್ಯಜೀವಿಗಳ ಪ್ರಾಣಕ್ಕೂ ಕಂಟಕವಾಗಿ ಭಾರೀ ಅಪಾಯವನ್ನೇ ಆಹ್ವಾನಿಸುತ್ತಿರುವ ಈ ವಿದ್ಯುತ್ ಕಂಬ ಬದಲಿಸಲು ಚೆಸ್ಕಾಂ ಇಂದು ನಾಳೆ ಅಂತ ಮೀನಾಮೇಷ ಎಣಿಸುತ್ತಿದೆ. ಇದ್ರಿಂದ ಪ್ರಾಣಕ್ಕೆ ಸಂಚಕಾರವುಂಟಾಗುವ ಸಾಧ್ಯತೆಯಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Tap to resize

Latest Videos

ಈ ವಿದ್ಯುತ್ ಕಂಬದಲ್ಲಿ ಏನೂ ಉಳಿದಿಲ್ಲ. ಸಿಮೆಂಟ್ ಉದುರಿ ಅಸ್ತಿಪಂಜರದಂತಾಗಿರುವ ಈ ಕಂಬದ ಮೇಲೇಯೇ  ಹೈಟೆನ್ಷನ್ ವಿದ್ಯುತ್ ವೈರ್  ಎಳೆಯಲಾಗಿದೆ.  ಜೋರಾಗಿ ಗಾಳಿ ಬೀಸಿದರೂ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಯಾವಾಗ ಬೇಕಾದರೂ ನೆಲಕ್ಕೊರಗಿ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿ ಅಟ್ಟುಗುಳಿಪುರ ಬಳಿ ಎಚ್ಡಿ ಫಾರೆಸ್ಟ್ ಸರ್ವೆ ನಂಬರ್ 22, 23, 24 ರ ಜಮೀನುಗಳ ಮೇಲೆ ವಿದ್ಯುತ್ ಲೈನ್ ಎಳೆಯಲಾಗಿದ್ದು ಇಲ್ಲಿರುವ ವಿದ್ಯುತ್ ಕಂಬ ಭಾರೀ ಅಪಾಯವನ್ನೇ ಆಹ್ವಾನಿಸುತ್ತಿದೆ. 

ಸಿಎಂ ಪತ್ನಿ ಪಡೆದಿರುವ 14 ಸೈಟುಗಳು ಅಕ್ರಮವಾಗಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ

ಕಳೆದ ಕೆಲವು ತಿಂಗಳುಗಳಿಂದ ಜಮೀನು ಮಾಲೀಕರು ಚೆಸ್ಕಾಂಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಮೀನಿನಲ್ಲಿ ವ್ಯವಸಾಯ ಮಾಡುವ ವೇಳೆ  ಏನಾದರು ಅಪಘಾತ ಸಂಭವಿಸುವ ಸಾಧ್ಯತೆಗಳಿರುವುದರಿಂದ  ವ್ಯವಸಾಯ ಮಾಡುವುದನ್ನೆ ನಿಲ್ಲಿಸಿದ್ದೆವೆ ಆದರು ಇಲ್ಲಿ ದನ ಕರುಗಳನ್ನು ಮೇಯಿಸಲು ಬರುವವರಿಗೆ ಅಪಘಾತ ಆಗುವ ಸಾಧ್ಯತೆ ಇದೆ ಈ ಕಂಬ ಬಿದ್ದು ಹೋದರೆ ಸುಮಾರು 25-30 ಎಕರೆ ಜಮೀನುಗಳಲ್ಲಿ ವ್ಯವಸಾಯ ಮಾಡುವವರಿಗೆ ತೊಂದರೆಯಾಗುತ್ತದೆ. 

ಇನ್ನೂ ಶಿಥಿಲಗೊಂಡಿರುವ ವಿದ್ಯುತ್ ಕಂಬದಿಂದ ಅಪಾಯ ಉಂಟಾಗುವ ಸಾದ್ಯತೆಗಳಿರುವುದರಿಂದ ಈ ಭಾಗದ ರೈತರು ಸುಮಾರು ಏಳು ಎಕರೆ ಜಮೀನನ್ನು ಉಳುಮೆ ಮಾಡದೆ ಪಾಳು ಬಿಟ್ಟಿದ್ದಾರೆ. ದನಕರುಗಳ ಮೈ  ಸ್ವಲ್ಪ ತಾಗಿದರೂ ಸಾಕು ಈ ವಿದ್ಯುತ್ ಕಂಬ ಮುರಿದು ಬೀಳಲಿದೆ. ಅಷ್ಟೇ ಅಲ್ಲ ಸನಿಹದಲ್ಲೇ ಆನೆ ಕಾರಿಡಾರ್ ಇದ್ದು ಸುವರ್ಣಾವತಿ ಜಲಾಶಯದ ಹಿನ್ನೀರಿಗೆ ಬರುವ ಆನೆಗಳು ಸ್ವಲ್ಪ  ಒತ್ತರಿಸಿದರೂ ಸಾಕು ಅವುಗಳ ಮೇಲೆಯೇ ಹೈಟೆನ್ಷನ್ ವಿದ್ಯುತ್ ವೈರ್ಗಳು ಬಿದ್ದು ಆನೆಗಳು ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಸ್ಥಳದಲ್ಲಿ ಕಂಬ ಮುರಿದು ಬಿದ್ದು ಯಾವುದೇ ರೀತಿಯ ಪ್ರಾಣ ಹಾನಿಯಾದರು ಅದಕ್ಕೆ ಚೆಸ್ಕಾಂ ನವರೆ ನೇರ ಹೊಣೆ ಎನ್ನುತ್ತಾರೆ ಸ್ಥಳೀಯರು.

ಕೇಂದ್ರ ಪುರಸ್ಕೃತ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸಂಸದ ಯದುವೀರ್ ಒಡೆಯರ್ ಅಧಿಕಾರಿಗಳಿಗೆ ಸೂಚನೆ!

ಒಟ್ನಲ್ಲಿ ಅಪಾಯಕಾರಿ ಯಾಗಿರುವ ಈ ವಿದ್ಯುತ್ ಕಂಬ ಬದಲಿಸುವಂತೆ ಅನೇಕ ಬಾರಿ ಮನವಿ ನೀಡಿದರೂ ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಶಿಥಿಲಗೊಂಡು ಅಸ್ತಿಜರದಂತೆ ಆಗಿರುವ ಈ ವಿದ್ಯುತ್ ಕಂಬ ಮುರಿದು ಇದ್ದು ಜನ ಜಾನುವಾರುಗಳು ಹಾಗೂ ವನ್ಯ ಪ್ರಾಣಿಗಳು ಜೀವ ಹಾನಿಯಾಗುವ ಮೊದಲು ಎಚ್ಚೆತ್ತು ಚೆಸ್ಕಾಂ ಅಧಿಕಾರಿಗಳು ಕಂಬ ಬದಲಿಸುವರೆ  ಕಾದು ನೋಡೋಣ.

click me!