ಡಿಜಟಲೀಕರಣದಿಂದ ನ್ಯಾಯಾಂಗ ವ್ಯವಸ್ಥೆ ಚುರುಕಾಗಿದೆ. ನ್ಯಾಯಾಲಯದ ತೀರ್ಪುಗಳ ಡಿಜಿಟಲೈಸೇಷನ್ ಮಾಡಲಾಗಿದೆ. ವಕೀಲರ ವಾದ, ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳು ಡಿಜಿಟಲೀಕರಣವಾಗುತ್ತಿದೆ.
ಸವಣೂರು (ಆ.22): ಡಿಜಟಲೀಕರಣದಿಂದ ನ್ಯಾಯಾಂಗ ವ್ಯವಸ್ಥೆ ಚುರುಕಾಗಿದೆ. ನ್ಯಾಯಾಲಯದ ತೀರ್ಪುಗಳ ಡಿಜಿಟಲೈಸೇಷನ್ ಮಾಡಲಾಗಿದೆ. ವಕೀಲರ ವಾದ, ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳು ಡಿಜಿಟಲೀಕರಣವಾಗುತ್ತಿದೆ. ಈ ನಿಟ್ಟಿನಲ್ಲಿ ವಕೀಲರ ಸಂಘಕ್ಕೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸವಣೂರು ವಕೀಲರ ಸಂಘದ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನ್ಯಾಯಾಲಯ ಪ್ರಕರಣದ ಮಾನಿಟರಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ನ್ಯಾಯಾಲಯದ ಗ್ರಂಥಾಲಯಗಳು ಡಿಜಿಟಲೀಕರಣ ಆಗುತ್ತಿದೆ. ವಕೀಲರು ನಿಗದಿತ ಸಮಯದೊಳಗೆ ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸಲು ಪ್ರಯತ್ನಿಸಬೇಕು. ಮನುಷ್ಯ ಮಾಡಿರುವ ಕಾನೂನುಗಳು, ಸಮಾಜದಲ್ಲಿ ಶಿಸ್ತುಪಾಲನೆಗಾಗಿ ಮಾಡಲಾಗಿದ್ದು, ಶಿಕ್ಷೆಯನ್ನು ಆಧರಿಸಿವೆ. ನೈಸರ್ಗಿಕ ಕಾನೂನುಗಳು, ಸತ್ಯ, ನ್ಯಾಯ, ಧರ್ಮದ ಮಾರ್ಗವನ್ನು ತಿಳಿಸುತ್ತಿದ್ದು, ಪುರಸ್ಕಾರವನ್ನು ಆಧರಿಸಿವೆ. ನಾವು ರೂಪಿಸುವ ಕಾನೂನಿನಲ್ಲಿ ನೈತಿಕತೆ ಮತ್ತು ಮಾನವೀಯತೆ ಇರಬೇಕು. ಸಾಮಾನ್ಯ ಮನುಷ್ಯನಿಗೆ ನ್ಯಾಯ ದೊರಕಿಸಿಕೊಡುವುದೇ ಕಾನೂನಾತ್ಮಕ ನ್ಯಾಯ, ನಿಸರ್ಗದತ್ತವಾದ ನ್ಯಾಯ ಮತ್ತು ಸಾಮಾಜಿಕ ನ್ಯಾಯಗಳ ತಾತ್ಪರ್ಯವಾಗಿದೆ ಎಂದರು.
undefined
ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ಶೀಘ್ರ - ಸಿಎಂ ಬಸವರಾಜ ಬೊಮ್ಮಾಯಿ
ಸವಣೂರು ನ್ಯಾಯಾಲಯಕ್ಕೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಸವಣೂರು ನ್ಯಾಯ ಕೊಡುವ ಸ್ಥಾನವಾಗಿತ್ತು. ಸವಣೂರಿನ ಇತಿಹಾಸದ ಪರಂಪರೆಯನ್ನು ಇಲ್ಲಿಯ ವಕೀಲರು ಉಳಿಸಿಕೊಂಡು ಬಂದಿರುವುದಕ್ಕೆ ಅಭಿನಂದನೆಗಳು. ಸವಣೂರಿನ ವಕೀಲ ಸಂಘಕ್ಕೆ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು. ಹೈಕೋರ್ಚ್ ನ್ಯಾಯಮೂರ್ತಿ ಸಚಿನ್ ಮುಗದುಮ್, ಜಿಲ್ಲಾ ನ್ಯಾಯಾಧೀಶರಾದ ಯಾದವ ವನಮಾಲಾ ಆನಂದರಾವ್, ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸವಣೂರು ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪಾಟೀಲ, ಸಂಘದ ಪದಾಧಿಕಾರಿಗಳು ಇದ್ದರು.
ನಾಗನೂರು ಕೆರೆಗೆ ಬಾಗಿನ ಅರ್ಪಣೆ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಆಗುವ ನಾಗನೂರು ಕೆರೆಗೆ ಚೆನ್ನಮ್ಮ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರೂಪಾ ಜಗದೀಶ ಬನ್ನಿಕೊಪ್ಪ, ಉಪಾಧ್ಯಕ್ಷೆ ಶೇಖವ್ವ ರಂಗಪ್ಪ ವಡ್ಡರ, ಸ್ಥಾಯಿ ಸಮಿತಿ ಚೇರಮನ್ ಜಾಪರಖಾನ ಹುಸೇನಖಾನ ಪಠಾಣ, ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಪುರಸಭೆಯ ಸದಸ್ಯರಾದ ಸುಭಾಸ ರಾಮಚಂದ್ರ ಚವ್ಹಾಣ, ಸುಲೇಮಾನಬಾಷಾ ತರ್ಲಘಟ್ಟ, ರಮೇಶ ವನಹಳ್ಳಿ. ಸಂಗೀತಾ ತಿಪ್ಪಣ್ಣ ವಾಲ್ಮೀಕಿ, ವಸಂತಾ ಪುಟ್ಟಪ್ಪ ಬಾಗೂರ,
ನ್ಯಾಯಾಂಗ ಬಲಿಷ್ಠವಾಗಿರುವುದರಿಂದ ಪ್ರಜಾಪ್ರಭುತ್ವ ಜೀವಂತ: ಮುಖ್ಯಮಂತ್ರಿ ಬೊಮ್ಮಾಯಿ
ಜ್ಯೋತಿ ಕೊಟ್ರಪ್ಪ ನಡೂರ, ನಸರೀನಬಾನು ತಿಮ್ಮಾಪೂರ, ಮಹಬೂಬಿ ನೀರಲಗಿ, ಸುಶೀಲಾ ಶಂಕರಗೌಡ ಪಾಟೀಲ, ಭಾರತಿ ಅಕ್ಕನವರ ಬ್ರಮ್ಮಕುಮಾರಿ, ಶೋಭಾ ನಿಸಿಮಗೌಡ್ರ, ಉಷಾ ಬಿಳಿಕುದರಿ, ಸಂಘ- ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು, ಪುರಸಭೆಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಶಿಗ್ಗಾಂವಿ ಪುರಸಭೆಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಚೆನ್ನಮ್ಮ ಬಸವರಾಜ ಬೊಮ್ಮಾಯಿ, ಸುಶೀಲಾ ಶಂಕರಗೌಡ ಪಾಟೀಲ, ಬಿ.ಕೆ. ಭಾರತಿ ಅವರಿಗೆ ಪುರಸಭೆಯ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಮುಖ್ಯಾಧಿಕಾರಿ ಮುಖ್ಯಾಧಿಕಾರಿ ಜಗದೀಶ ವೈ.ಕೆ ಸೇರಿದಂತೆ ಸಿಬ್ಬಂದಿ ವರ್ಗ ಇತರರು ಇದ್ದರು.