ದಿಬ್ಬದಹಟ್ಟಿಗ್ರಾಮದಲ್ಲಿ ಎಸ್ಸಿ, ಎಸ್ಟಿಹಿಂದುಳಿದ ಸಮುದಾಯದ 70 ಕುಟುಂಬಗಳು ಸರ್ಕಾರದ ಸೌಲಭ್ಯದಿಂದ ವಂಚಿತವಾಗಿದ್ದು, ಗ್ರಾಮಕ್ಕೆ ಸರ್ಕಾರ ರಸ್ತೆ ಒದಗಿಸಿ ಕಾಯಕಲ್ಪ ನೀಡಿ ಇಲ್ಲಿನ ಜನರಿಗೆ ನೆರವಾಗಲು ದಿಬ್ಬದಹಟ್ಟಿಗ್ರಾಮದ ಯುವ ಮುಖಂಡ ಪಾಲಯ್ಯ ಜಿಲ್ಲಾಧಿಕಾರಿಯವರ ಒತ್ತಾಯಿಸಿದ್ದಾರೆ.
ಜಗಳೂರು (ಅ.11). ದಿಬ್ಬದಹಟ್ಟಿಗ್ರಾಮದಲ್ಲಿ ಎಸ್ಸಿ, ಎಸ್ಟಿಹಿಂದುಳಿದ ಸಮುದಾಯದ 70 ಕುಟುಂಬಗಳು ಸರ್ಕಾರದ ಸೌಲಭ್ಯದಿಂದ ವಂಚಿತವಾಗಿದ್ದು, ಗ್ರಾಮಕ್ಕೆ ಸರ್ಕಾರ ರಸ್ತೆ ಒದಗಿಸಿ ಕಾಯಕಲ್ಪ ನೀಡಿ ಇಲ್ಲಿನ ಜನರಿಗೆ ನೆರವಾಗಲು ದಿಬ್ಬದಹಟ್ಟಿಗ್ರಾಮದ ಯುವ ಮುಖಂಡ ಪಾಲಯ್ಯ ಜಿಲ್ಲಾಧಿಕಾರಿಯವರ ಒತ್ತಾಯಿಸಿದ್ದಾರೆ.
ಈ ಹಳ್ಳಿಗೆ ಯಾರೂ ಹೆಣ್ಣು ಕೊಡೋದಿಲ್ಲ; ಇಲ್ಲಿನ ಹೆಣ್ಣನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ!
undefined
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿಬ್ಬದಹಟ್ಟಿಗ್ರಾಮದೊಳಗೆ ತಾಲೂಕು ಕೇಂದ್ರ ಮತ್ತು ಕೆಲಸ ನಿಮಿತ್ತ ಬಿದರಕೆರೆ ಸೇರಿ ವಿವಿಧ ಗ್ರಾಮಗಳಿಗೆ ತೆರಳಲು ಸರಿಯಾದ ಸಂಪರ್ಕ ರಸ್ತೆಯಿಲ್ಲದೆ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಸಂಚಾರಿಸುವುದೇ ಸಾಹಸಮಯ.
ರಸ್ತೆಯಲ್ಲೆ ಬಿಟ್ಟು ಹೋದ ಅಂಬ್ಯುಲೆನ್ಸ್:
ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಕೆಸರು ಗದ್ದೆಯಲ್ಲಿ ಸಂಚಾರಿಸುವುದೇ ದುಸ್ತರ. ಗ್ರಾಮದಲ್ಲಿ ಅನಾರೋಗ್ಯ ಕಾಣಿಸಿದಾಗ ಚಿಕಿತ್ಸೆ ಪಡೆಯಲು ಅಂಬ್ಯುಲೆನ್ಸ್ ಕರೆ ಮಾಡಿದರೆ ಬರಲು ಹಿಂದೇಟು ಹಾಕಿದ್ದಾರೆ. ಗ್ರಾಮದೊಳಗೆ ರಸ್ತೆ ಇಲ್ಲದೇ ನಡು ರಸ್ತೆಯಲ್ಲೇ ಅಂಬುಲೆನ್ಸ್‌ನವರು ರೋಗಿಗಳ ಬಿಟ್ಟು ಹೋಗಿದ್ದಾರೆ. ವಾಹನ ಬರಲು ಸರಿಯಾದ ರಸ್ತೆಯಿಲ್ಲದೆ ನಡೆದುಕೊಂಡೆ ಹೋಗುವಂತಾಗಿದೆ ಬಸ್ ಇಲ್ಲ. ಆಟೋಕ್ಕೆ ಬಿದರಕೆರೆಯಿಂದ 4 ಕಿ.ಮೀ.ಇದೇ ಗ್ರಾಮಕ್ಕೆ ಆಟೋದಿಂದ ಬರಬೇಕಾದರೆ 300 ರು. ಕೊಟ್ಟು ಬರಬೇಕಿದೆ. ವೋಟು ಕೇಳಲು ಬರುವ ಜನಪ್ರತಿನಿಧಿಗಳು ತಿರುಗಿಯೂ ನೋಡಿಲ್ಲ. ರಸ್ತೆ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೇರಿ ಕ್ಷೇತ್ರದ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಹಾಗೂ ಮಾಜಿ ಶಾಸಕರಿಗೂ ಮನವಿ ಮಾಡಿದ್ದರೂ ರಸ್ತೆ ನಿರ್ಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ : ತಾಯಿ ಮುಂದೆಯೇ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು
ಜಮೀನು ಮಾಲೀಕರ ಅಡ್ಡಿ:
ಕಳೆದ ಅವಧಿಯಲ್ಲಿ ಮಾಜಿ ಶಾಸಕ ಎಚ್ ಪಿ ರಾಜೇಶ್‌ರಿಗೆ ರಸ್ತೆ ನಿರ್ಮಿಸಲು ಮನವಿ ಸಲ್ಲಿಸಿದ ಫಲವಾಗಿ ರಸ್ತೆ ದುರಸ್ತಿಗೆ ಪ್ರಯತ್ನಿಸಿದರು. ಆದರೆ ಜಮೀನಿನ ಮಾಲೀಕರು ಅಡ್ಡಿಪಡಿಸಿ ರಸ್ತೆಗೆ ಜಾಗ ಬಿಡಲ್ಲ ಎಂದು ತಕರಾರು ಮಾಡಿದ್ದರಿಂದ ರಸ್ತೆ ನನೆಗುದಿಗೆ ಬಿದ್ದಿದೆ. ಹಾಲಿ ಶಾಸಕ ಎಸ್ ವಿ ರಾಮಚಂದ್ರರ ನೇತೃತ್ವದಲ್ಲಿ ಬಿದರಕೆರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ವೇಳೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ರಸ್ತೆ ದುರಸ್ತಿಗೆ ಎಂದು ಮನವಿ ಸಲ್ಲಿಸಿದರೂ ರಸ್ತೆ ಅಭಿವೃದ್ಧಿಗೆ ಮುಂದಾಗಲಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು. ಶೀಘ್ರವೆ ರಸ್ತೆ ದುರಸ್ತಿ ಸೇರಿ ಮೂಲಭೂತ ಸೌಕರ್ಯಗಳ ಒದಗಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅದಕ್ಕೂ ಬಗ್ಗದೇ ಇದ್ದರೆ ಶಾಸಕರ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ದಿಬ್ಬದಹಟ್ಟಿಗ್ರಾಮದ ಮಹಾಂತೇಶ್, ಪ್ರಸನ್ನ, ರಮೇಶ್ ಇದ್ದರು.