Dharwad : ವಿಧಾನಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಕ್ರಮ

By Suvarna News  |  First Published Feb 6, 2023, 7:33 PM IST

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಿಂದ ಶೇ.100 ರಷ್ಟು ಮತದಾನವಾಗಬೇಕು. ಮತದಾರ ಜಾಗೃತಿಗಾಗಿ ಪರಿಣಾಮಕಾರಿ ಕಾರ್ಯಕ್ರಮವನ್ನು ಆಯೋಜಿಸಲು ಕ್ರಿಯಾ ಯೋಜನೆ ಸಿದ್ದಗೊಳಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಡಾ.ಸುರೇಶ ಇಟ್ನಾಳ ಅವರು ಹೇಳಿದರು.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಫೆ.6): ಬರುವ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಶೇ.100 ರಷ್ಟು ಮತದಾನವಾಗಬೇಕು. ಮತದಾರ ಜಾಗೃತಿಗಾಗಿ ಪರಿಣಾಮಕಾರಿ ಕಾರ್ಯಕ್ರಮವನ್ನು ಆಯೋಜಿಸಲು ಕ್ರಿಯಾ ಯೋಜನೆ ಸಿದ್ದಗೊಳಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಡಾ.ಸುರೇಶ ಇಟ್ನಾಳ ಅವರು ಹೇಳಿದರು. ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಹಳೆ ಸಭಾಂಗಣದಲ್ಲಿ ವಿಧಾನಸಭಾ ಚುನಾವಣಾ ಜಾಗೃತಿಗಾಗಿ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಸಭೆಯಲ್ಲಿ ಸ್ವೀಪ್ ಕ್ರಿಯಾಯೋಜನೆ ತಯಾರಿಗಾಗಿ  ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ, ಮಾತನಾಡಿದರು . ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರು ಹಿಂದಿನ ಚುನಾವಣೆಗಳಲ್ಲಿ ಮತದಾನ ಕಡಿಮೆ ಆಗಿರುವ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ, ಕಾರಣ ತಿಳಿಯಬೇಕು. ಮುಂದಿನ ಚುನಾವಣೆಗಳಲ್ಲಿ ಎಲ್ಲ ಮತಗಟ್ಟಗಳಲ್ಲಿ ಅಲ್ಲಿನ ಎಲ್ಲ  ನೋಂದಾಯಿತ ಮತದಾರರು ಮತ ಚಲಾವಣೆ ಮಾಡುವಂತೆ ಜಾಗೃತಿ ಮೂಡಿಸಬೇಕು. ಮತ್ತು ಕಡಿಮೆ ಮತದಾನ ಆಗಿರುವ ಮತಕೇಂದ್ರಗಳಲ್ಲಿ ಕನಿಷ್ಠ ಇನ್ನೂ ಶೇ.10 ರಷ್ಟು ಮತದಾನ ಹೆಚ್ಚಳವಾಗುವಂತೆ ವಿಶೇಷ ಅರಿವು ಕಾರ್ಯಕ್ರಮಗಳನ್ನು ಸಂಘಟಿಸಬೇಕೆಂದು ಅವರು ಹೇಳಿದರು.

Latest Videos

undefined

ಜಿಲ್ಲೆಯಲ್ಲಿನ 18 ವರ್ಷ ತುಂಬಿದ ಮತ್ತು 19 ವರ್ಷದೊಳಗಿನ ಇನ್ನು ಹಲವು ಜನ ಮತದಾರ ಪಟ್ಟಿಗೆ ಸೆರ್ಪಡೆ ಆಗಿಲ್ಲ ಪ್ರತಿ ವಯಸ್ಕ ಮತದಾರ, ಮತದಾರ ಪಟ್ಟಿಗೆ ಸೇರಿಸುವ ಮತ್ತು ಮತದಾನ ಮಾಡುವಂತೆ ಕ್ರಮವಹಿಸಬೇಕು. 

ಶಾಲಾ ಕಾಲೇಜುಗಳಲ್ಲಿ ಸ್ಥಾಪಿಸಿರುವ ಚುನಾವಣಾ ಸಾಕ್ಷರತಾ ಕ್ಲಬ್ ಗಳು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಮತದಾನ ಮಹತ್ವ ತಿಳಿಸುವ ಮೂಲಕ ಅವರ ಪಾಲಕರು ಮತದಾರ ಪಟ್ಟಿಗೆ ಸೇರಿರುವದನ್ನು ಖಾತರಿ ಮಾಡಿಕೊಂಡು, ತಪ್ಪದೇ ಅವರು ಮತದಾನ ಮಾಡುವಂತೆ ಮಕ್ಕಳ ಮೂಲಕ ಮನವೊಲಿಸಬೇಕು ಎಂದು ಅವರು ಹೇಳಿದರು ಭಾರತ ಚುನಾವಣಾ ಆಯೋಗ ಮತದಾನ ಸುಧಾರಣೆ ಮತ್ತು ಪೂರ್ಣ ಮತದಾನಕ್ಕೆ ನೀಡಿರುವ ಸಲಹೆ, ಮಾರ್ಗದರ್ಶನಗಳನ್ನು ಗಮನಿಸಿ, ಪರಿಣಾಮಕಾರಿ ಮತದಾನಕ್ಕೆ ಅಗತ್ಯ ಕ್ರಿಯೆ ಯೋಜನೆ ರೂಪಿಸಬೇಕು.

ಬಿಜೆಪಿ ತೆಕ್ಕೆಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಐತಿಹಾಸಿಕ ದಾಖಲೆ

ಪ್ರತಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಯೋಜನ ಪಡೆಯಲು ಅರ್ಹವಿರುವ ಜನಸಮೂಹವನ್ನು ಗಮನದಲ್ಲಿಟ್ಟುಕೊಂಡು ಮತದಾನ ಜಾಗೃತಿಗಾಗಿ ಕ್ರಿಯಾಯೋಜನೆ ರೂಪಿಸಿ, ಜಿಲ್ಲಾ ಸ್ವೀಪ್ ಸಮಿತಿಗೆ ಸಲ್ಲಿಸಬೇಕು. ಯಾವ ಅರ್ಹ ಮತದಾರನು ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು. ಆರೋಗ್ಯ, ಶಾಲಾ ಶಿಕ್ಷಣ ಮತ್ತು ಸುಧಾರಣೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಿಯು, ಡಿಗ್ರಿ ಕಾಲೇಜು, ಅಲ್ಪ ಸಂಖ್ಯಾತರ, ವಿಕಲಚೇತನರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಜಾಗೃತಿ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಮೂರು ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಅಧಿಸೂಚನೆ

ಸಭೆಯಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಟೀಲ ಶಶಿ, ಶಾಲಾ ಸಾಕ್ಷರತೆ ಮತ್ತು ಸುಧಾರಣೆ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣ ನಾಯ್ಕ್, ಅಲ್ಪ ಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಜಿಲ್ಲಾ ಸ್ವೀಪ್ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ ಸಂಪನ್ಮೂಲ ವ್ಯಕ್ತಿ ಕೆ.ಎಂ.ಶೇಖ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

click me!