ಮೂರು ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಅಧಿಸೂಚನೆ

By Suvarna News  |  First Published Feb 6, 2023, 7:06 PM IST

ವಿವಿಧ ಕಾರಣಗಳಿಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಮೂರು ಗ್ರಾಮಪಂಚಾಯಿತಿಗಳ ಪರಿಶಿಷ್ಟ ಜಾತಿಗೆ ಸೇರಿದ 3 ಸ್ಥಾನಕ್ಕೆ ನಡೆಯುವ ಚುನಾವಣೆಗೆ ಫೆಬ್ರವರಿ 8ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿಸಿದ್ದು, ಫೆಬ್ರವರಿ 25ರಂದು ಚುನಾವಣೆ ನಡೆಯುತ್ತಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಫೆ.6): ವಿವಿಧ ಕಾರಣಗಳಿಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಮೂರು ಗ್ರಾಮಪಂಚಾಯಿತಿಗಳ ಪರಿಶಿಷ್ಟ ಜಾತಿಗೆ ಸೇರಿದ 3 ಸ್ಥಾನಕ್ಕೆ ನಡೆಯುವ ಚುನಾವಣೆಗೆ ಫೆಬ್ರವರಿ 8ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿಸಿದ್ದು, ಫೆಬ್ರವರಿ 25ರಂದು ಚುನಾವಣೆ ನಡೆಯುತ್ತಿದೆ. ಜಿಲ್ಲೆಯ ಕಡೂರು ತಾಲೂಕಿನ ಗಿರಿಯಾಪುರ, ಚೋಡಿಹೋಚಿಹಳ್ಳಿ ಮತ್ತು ನೂತನ ಅಜ್ಜಂಪುರ ತಾಲೂಕಿನ ಬೇಗೂರು ಪಂಚಾಯಿತಿಯ ಪರಿಶಿಷ್ಟಜಾತಿಗೆ ಸೇರಿದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜೋಡಿಹೋಚಿಹಳ್ಳಿ ಮತ್ತು ಬೇಗೂರು ಪಂಚಾಯಿತಿ ಸದಸ್ಯರು ಅಕಾಲಿಕ ಮರಣಹೊಂದಿದ್ದರಿಂದ ಆ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.ವಿಶೇಷವೆಂದರೆ ಗಿರಿಯಾಪುರ ಪಂಚಾಯಿತಿಯ ಪರಿಶಿಷ್ಟಜಾತಿಗೆ ಸೇರಿದ 1ಸ್ಥಾನಕ್ಕೆ ಮೂರು ಬಾರಿ ಚುನಾವಣೆ ಘೋಷಣೆಯಾದರೂ ಯಾರೊಬ್ಬರು ನಾಮಪತ್ರ ಸಲ್ಲಿಸಲು ಮುಂದೆ ಬಾರದಿರುವುದರಿಂದ ಈಗ ಮತ್ತೊಮ್ಮೆ ಚುನಾವಣೆ ನಡೆಯುತ್ತಿದೆ.

Tap to resize

Latest Videos

ಮೇಲ್ವರ್ಗದ ಪ್ರಬಲ ಸಮುದಾಯವೊಂದರ ಮುಖಂಡರು ತಾವು ಹೇಳಿದಂತೆ ಕೇಳುವ, ಅವರು ಹೇಳಿದ್ದಕ್ಕೆ ತಲೆಯಲ್ಲಾಡಿಸುವ ಸದಸ್ಯರು ಯಾರೂ ಮುಂದೆ ಬಾರದಿರುವುದೇ ಈ ಪಂಚಾಯಿತಿ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿಲ್ಲವೆನ್ನುತ್ತಾರೆ ಗ್ರಾಮದವರು. ಕಡೂರು ತಾಲೂಕು ಜೋಡಿಹೋಚಿಹಳ್ಳಿಯ ಪಂಚಾಯಿತಿಯ ಜೋಡಿಹೋಚಿಹಳ್ಳಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಬ್ಯಾಲದಾಳು ತಾಂಡ್ಯದ ರವೀಂದ್ರನಾಯ್ಕ 2 ತಿಂಗಳ ಹಿಂದೆ ಮೃತಪಟ್ಟಿದ್ದರೆ, ಅಜ್ಜಂಪುರ ತಾಲ್ಲೂಕು ಬೇಗೂರು ಪಂಚಾಯಿತಿಯ ಜಿ.ಹಾಲನಾಯ್ಕ ಅವರು ಅಕ್ಟೋಬರ್ 12 ರಂದು ಅಪಘಾತದಲ್ಲಿ ಸಾವಪ್ಪಿದ್ದರಿಂದ ತೆರವಾದ ಈ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ಗಿರಿಯಾಪುರ ಪಂಚಾಯಿತಿಯಲ್ಲಿ ಪರಿಶಿಷ್ಟಜಾತಿಗೆ ಸೇರಿದ 1 ಸ್ಥಾನಕ್ಕೆ ಮೂರುಬಾರಿ ಚುನಾವಣೆ ಘೋಷಣೆಯಾದರೂ ಯಾರೊಬ್ಬರು ಚುನಾವಣೆ ಎದುರಿಸಲು ನಾಮಪತ್ರ ಸಲ್ಲಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ರಾಜ್ಯದ ವಿವಿಧಡೆ ನಡೆಯುಲಿರುವ ಚುನಾವಣೆ :
ಬೆಂಗಳೂರು ಗ್ರಾಮಾಂತರ, ದಕ್ಷಿಣಕನ್ನಡ, ಹಾಸನ ವಿಜಯಪುರ, ವಿಜಯನಗರ, ಯಾದಗಿರಿ ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು,  ಚಿಕ್ಕಮಗಳೂರು, ಬೆಳಗಾವಿ,ಉಡುಪಿ, ಬಾಗಲಕಸೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಉತ್ತರಕನ್ನಡ, ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ ಸೇರಿದಂತೆ ಒಟ್ಟು 103 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಅದರಲ್ಲಿ ಈ ಜಿಲ್ಲೆಯ ಮೂರು ಸ್ಥಾನಗಳು ಸೇರಿವೆ.

ಚುನಾವಣೆ ಬಂದಂತೆ ಬಿಜೆಪಿ ಸರ್ಕಾರದಲ್ಲಿ ಪರ್ಸಂಟೇಜ್‌ 60ಕ್ಕೆ ಏರಿಕೆ: ಎಂ.ಬಿ. ಪಾಟೀಲ್‌

ಈ ಜಿಲ್ಲೆಯ ಮೂರು ಸ್ಥಾನಗಳು, ಪಕ್ಕದ ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕು ಆನೆಕನ್ನಂಬಾಡಿಯ,ಸಕಲೇಶಪುರ ತಾಲೂಕು ಪುರು, ಉಚ್ಚಂಗಿಯ  3 ಸ್ಥಾನ, ಶಿವಮೊಗ್ಗ ಜಿಲ್ಲೆಯ ಹೆದ್ದಾರಿಪುರ ನಾಗೋಡಿ,(ನಿಟ್ಟೂರು) ಯಡೇಹಳ್ಳಿ 3 ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಅನಂತವಾಡಿ, ನೆಟ್ಲಮುಡ್ನೂರು, ಕುಟ್ರುಪಾಡಿ ಮತ್ತು ಆರ್ಯಾಪು ಪಂಚಾಯಿತಿಯ ಒಟ್ಟು 4 ಸ್ಥಾನಗಳಿಗೆ ಫೆಬ್ರವರಿ 23 ರಂದು ಚುನಾವಣೆ ನಡೆಯುತ್ತಿದೆ.ಅಧಿಸೂಚನೆ ಪ್ರಕಟವಾದ ದಿನಾಂಕ ಫೆಬ್ರವರಿ 8ರಿಂದ ನಾಮಪತ್ರ ಸಲ್ಲಿಸಬಹುದಾಗಿದ್ದು, ನಾಮಪತ್ರ ಸಲ್ಲಿಸುವ ಕೊನೆ ದಿನಾಂಕ ಫೆಬ್ರವರಿ 14. ನಾಮಪತ್ರ ಪರಿಶೀಲನೆ ಫೆಬ್ರವರಿ 15 ರಂದು ನಡೆದರೆ, ನಾಮಪತ್ರ ವಾಪಸ್ ಪಡೆಯುವ ದಿನಾಂಕ ಫೆಬ್ರವರಿ 17, ಮತದಾನ ಫೆಬ್ರವರಿ 25ರಂದು ಬೆಳಿಗ್ಗೆ 7ರಿಂದ ಸಂಜೆ 5ವರೆಗೆ ನಡೆಯುತ್ತಿದ್ದು, ಮರುಮತದಾನದ ಅವಶ್ಯಕವಿದ್ದರೆ ಫೆಬ್ರವರಿ 27. ಮತ ಎಣಿಕೆ ಫೆಬ್ರವರಿ 28 ರಂದು ಬೆಳಿಗ್ಗೆ 8ಗಂಟೆಗೆ ತಾಲೂಕು ಕೇಂದ್ರದಲ್ಲಿ ನಡೆಯುವುದು.

 

ಸಿದ್ದರಾಮಯ್ಯನವರೇ ನಿಮ್ಮ ಕೊನೆಯ ಚುನಾವಣೆಯಲ್ಲಿ ನೀವು ಗೆಲ್ಲಿ: ಸುಧಾಕರ್

ಮದ್ಯಮಾರಾಟ ನಿಷೇಧ: 
ಚುನಾವಣೆ ನೀತಿ ಸಂಹಿತೆ ಚುನಾವಣೆ ನಡೆಯುವ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಫೆಬ್ರವರಿ 8 ರಿಂದ ಫೆಬ್ರವರಿ25 ರವರೆಗೆ ಜಾರಿಯಲ್ಲಿರುತ್ತಿದ್ದು,ಮತದಾನ ಮುಕ್ತಾಯಗೊಳ್ಳುವ 48 ಗಂಟೆಯೊಳಗಿನ ಮೊದಲಿನ ಅವಧಿಗೆ ಮದ್ಯದಂಗಡಿಯಲ್ಲಿ ಮದ್ಯಮಾರಾಟ ನಿಷೇಧಗೊಳ್ಳಲಿದೆ.

click me!