ಧಾರವಾಡ: ಕೇಸ್ ದಾಖಲಿಸಿಕೊಳ್ಳದಿದ್ದರೆ ಅಧಿಕಾರಿಯೇ ಸಸ್ಪೆಂಡ್, ಎಸ್ಪಿ ಜಗಲಾಸರ್ ಖಡಕ್ ವಾರ್ನಿಂಗ್..!

By Girish Goudar  |  First Published Nov 4, 2022, 2:00 PM IST

ಜನಸಾಮಾನ್ಯರನ್ನ ನಾಳೆ, ನಾಡಿದ್ದು ಬಾ ಎಂದು ತಿರುಗಾಡಿಸಿದರೆ ಅಂತಹ ಅಧಿಕಾರಿಗಳನ್ನ ಅಮಾನತು ಮಾಡಲಾಗುವುದು: ಲೋಕೇಶ್ ಜಗಲಾಸರ್ 


ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ನ.04):  ಧಾರವಾಡ ಜಿಲ್ಲೆ ಸಾಂಸ್ಕೃತಿಕ, ಸಾಹಿತಿಗಳ ಶಾಂತಿಯಿಂದ ಇರುವ ಜಿಲ್ಲೆ ಧಾರವಾಡ ಜಿಲ್ಲೆ, ಧಾರವಾಡ ಜಿಲ್ಲೆ ಅಂದರೆ ನೆನಪಾಗೋದು ಧಾರವಾಡ ಪೇಡಾ, ಧಾರವಾಡದಲ್ಲಿ ಐಪಿಎಸ್ ಅಧಿಕಾರಿ ಅಂದ್ರೆ ಧಾರವಾಡ ಎಸ್ಪಿಯಾಗಿ ಬಂದ ಲೋಕೇಶ್ ಜಗಲಾಸರ್ ಅವರು ಎಲ್ಲ ಪೊಲೀಸ್ ಠಾಣೆಗಳಲ್ಲಿ ಬದಲಾವಣೆಗಳನ್ನ ಮಾಡುತ್ತಿದ್ದಾರೆ. ಆದರೆ ಇವರು ಬದಲಾವಣೆ ಮಾಡುತ್ತಿರುವ  ಬಗ್ಗೆ ಎಸ್ಪಿ ಲೋಕೇಶ್ ಜಗಲಾಸರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಹೇಳಿಕೊಂಡಿದ್ದಾರೆ. 

Latest Videos

undefined

ಧಾರವಾಡ ಜಿಲ್ಲೆಯಲ್ಲಿ ಇತ್ತೀಚಿಗೆ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿವೆ, ಆದರೆ ಜನ ಸಾಮಾನ್ಯರು ತೊಂದರೆ ಅಂತ ಪೊಲೀಸ್ ಠಾಣೆಗೆ ದೂರು ದಾಖಲಿಸಿಕೊಳ್ಳಲು ಬಂದರೆ ಕೆಲ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳನ್ನ ಗಮನದಲ್ಲಿಟ್ಟುಕೊಂಡ ಎಸ್ಪಿ ಲೋಕೇಶ ಜಗಲಾಸರ್ ಅವರು ಖಡಕ್ ನಿರ್ಣಯಗಳನ್ನ ತೆಗೆದುಕೊಂಡಿದ್ದಾರೆ. ಯಾರಾದರೂ ಮಿಸ್ಸಿಂಗ್ ಕೇಸ್ ದಾಖಲಿಸಲು ಬಂದ್ರೆ ಪೊಲೀಸರು ಕೇಸ್‌ಗಳನ್ನ ದಾಖಲು ಮಾಡಿಕೊಳ್ಳಬೇಕು. ಅವರು ದಾಖಲು ಮಾಡಿಕೊಳ್ಳದಿದ್ದರೆ ಅವರು ನೇರವಾಗಿ ಎಸ್ಪಿ ಕಚೇರಿಗೆ ಬರಬೇಕಾಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತೆ. ಆದರೆ ಪಿಎಸ್‌ಐ, ಸಿಪಿಐಗಳು ಯಾವುದೇ ಕೇಸ್‌ಗಳನ್ನ ದಾಖಲಿಸಿಲು ಅಮಾಯಕರು ಬಂದರೆ ಅವರಿಗೆ ಸ್ದಂದನೆಯನ್ನ ಕೊಡಬೇಕು. ಒಂದು ವೇಳೆ ಜನಸಾಮಾನ್ಯರಿಗೆ ನಾಳೆ, ನಾಡಿದ್ದು ಬಾ ಎಂದು ತಿರುಗಾಡಿಸಿದರೆ ಅಂತಹ ಅಧಿಕಾರಿಗಳನ್ನ ಅಮಾನತು ಮಾಡಲಾಗುವುದು ಎಂದು ಖಡಕ್ ನಿರ್ಣಯಗಳನ್ನ ತೆಗೆದುಕೊಂಡಿದ್ದಾರೆ. 

ಧಾರವಾಡ: 4 ವರ್ಷದಿಂದ‌ ಕರ್ತವ್ಯಕ್ಕೆ ಹಾಜರಾಗದ 3 ಪೋಲಿಸರು ವಜಾ: ಎಸ್ಪಿ ಜಗಲಾಸರ್

ಮಿಸ್ಸಿಂಗ್, ರೇಪ್, ಮರ್ಡರ್ ಸೇರಿ ಯಾವುದೇ ಕೇಸ್ ಇರಬಹುದು‌, ಯಾವುದೇ ಪ್ರಕರಣಗಳನ್ನ ದಾಖಲಿಸಲು ಠಾಣೆಗೆ ಬಂದ್ರೆ ದೂರು ದಾಖಲಿಸಿಕೊಳ್ಳಬೇಕು. ಇನ್ನು ಪೊಲೀಸ್ ಠಾಣೆಗಳನ್ನ ಅಭಿವೃದ್ಧಿಪಡಿಸಲು ಎಸ್ಪಿ ಲೋಕೇಶ ಜಗಲಾಸರ್  ಖಡಕ್ ಹೆಜ್ಜೆಗಳನ್ನ ಇಡುತ್ತಿದ್ದಾರೆ. ಇನ್ನು ಇವರು ಬಂದು ಮೂರು ತಿಂಗಳಲ್ಲಿ 1000 ಕ್ಕೂ ಹೆಚ್ಚು ಪ್ರಕರಣಗಳ ಬಾಕಿ ಇದ್ದವು. ಆದರೆ ಸದ್ಯ ಅದರಲ್ಲಿ ಮೂನ್ನೂರಕ್ಕೂ ಹೆಚ್ಚು ಕೇಸ್‌ಗಳನ್ನ ಇಥ್ಯರ್ಥಗೊಳಿಸಿದ್ದಾರೆ. 
ಇನ್ನು ಎಸ್ಪಿ ಅವರು ಈ ಹಿಂದೆ ಐದಕ್ಕೂ ಹೆಚ್ಚು ಪೊಲೀಸ್ ಪೇದೆಗಳು ಸೇವೆಯಲ್ಲಿ ಹಾಜರಿ ತೋರಿಸಿ ಬೇರೆ ಎಲ್ಲೋ ಇದ್ದುಕೊಂಡು ಸ್ಪರ್ದಾತ್ಮಕ ಪರೀಕ್ಷೆಗಳನ್ನ ಬರೆಯುತ್ತಿರುವ ಐವರನ್ನ ಪತ್ತೆ ಹಚ್ಚಿ ಅವರು ಮೇಲೆ‌ ಕ್ರಮ ಕೈಗೊಂಡಿದ್ದರು. ಇನ್ನು ಯಾವುದೆ ಕಾರಣಕ್ಕೂ ಪೊಲೀಸ್ ಇಲಾಖೆ ಜನರಿಂದ ದೂರ ಹೋಗದೆ ರೀತಿಯಲ್ಲಿ ಜನರೊಂದಿಗೆ ಇದ್ದು ಜನರ ಸಂಪರ್ಕ ಹೊಂದಿ‌ ಜನರೊಂದಿಗೆ ಕೆಲಸವನ್ನ ಮಾಡಬೇಕು. ಬಡವರಿಗೆ ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಬೇಕು ಅಂತ ಎಲ್ಲ ಪೊಲೀಸರಿಗೆ ಎಸ್ಪಿ ಖಡಕ್ ವಾರ್ನಿಂಗ್ ಮಾಡಿದ್ದಾರೆ. 

ನಿಜಕ್ಕೂ ಧಾರವಾಡದಲ್ಲಿ ಕಳೆದ ಮೂರು ತಿಂಗಳಿಂದ ಎಸ್ಪಿ ಅವರು ಧಾರವಾಡ ಜಿಲ್ಲೆಯಲ್ಲಿ ತೆಗೆದುಕೊಂಡ ಕೆಲ‌ ನಿರ್ಣಯಗಳು ಪೊಲೀಸ್ ಇಲಾಖೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವದನ್ನು ಜನಸಾಮಾನ್ಯರು ಸ್ವಾಗತಿಸಿದ್ದಾರೆ. 
 

click me!