Belagavi: ಕುಡಿದ ಮತ್ತಿನಲ್ಲಿ‌ ಮಹಿಳೆಯರ ಕಿತ್ತಾಟ: ವೇಶ್ಯಾವಾಟಿಕೆಗಾಗಿ ಕಿತ್ತಾಡಿಕೊಂಡ್ರಾ ನಾರಿಮಣಿಯರು?

By Girish Goudar  |  First Published Mar 24, 2022, 12:51 PM IST

*  ಬೆಳಗಾವಿಯ ಖಡೇಬಜಾರ್‌‌ನಲ್ಲಿ ನಡೆದ ಘಟನೆ
*  ಮಹಿಳೆಯರ ಬಡಿದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ 
*  ನೆಲಕ್ಕುರಳಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದ ಮಹಿಳೆ 
 


ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಮಾ.24):  ಕುಡಿದ ಮತ್ತಿನಲ್ಲಿ‌ ಮಹಿಳೆಯರು(Women) ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಹೊಡೆದಾಡಿಕೊಂಡ ಘಟನೆ ಬೆಳಗಾವಿಯ(Belagavi) ಖಡೇಬಜಾರ್‌‌ನಲ್ಲಿ ನಡೆದಿದೆ. ಮಂಗಳವಾರ ರಾತ್ರಿ ನಡೆದ ಮಹಿಳೆಯರ ಬಡಿದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿದೆ. 

Tap to resize

Latest Videos

ವೇಶ್ಯಾವಾಟಿಕೆ ವಿಚಾರವಾಗಿ ಮಹಿಳೆಯರು ಕಿತ್ತಾಡಿಕೊಂಡರಾ ಎಂಬ ಅನುಮಾನ ವ್ಯಕ್ತವಾಗಿದೆ. ಕುಡಿದ ಮತ್ತಿನಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದ ಮಹಿಳೆಯರು ಕಿತ್ತಾಡಿಕೊಳ್ಳುತ್ತಿದ್ದರೇ ಓರ್ವ ಮಹಿಳೆ ಕುಡಿದ ಮತ್ತಿನಲ್ಲಿ‌ ನೆಲಕ್ಕುರಳಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದಳು. 

Mangaluru: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇಶ್ಯಾವಾಟಿಕೆಯಲ್ಲಿ ಅರೆಸ್ಟ್..!

ನನ್ನ ಏರಿಯಾದಲ್ಲಿ ನೀ ಯಾಕೆ ಎಂದು ಪರಸ್ಪರ ಅವಾಚ್ಯ ಶಬ್ದಗಳಿಂದ ಮಹಿಳೆಯರು ಬೈದಾಡಿಕೊಂಡಿದ್ದಾರೆ‌‌‌. ಮಹಿಳೆಯರ ಗಲಾಟೆ ನಿಯಂತ್ರಿಸುವಲ್ಲಿ ಪೊಲೀಸರು ಸುಸ್ತಾಗಿದ್ದು ಹರಸಾಹಸ ಮಾಡಿ ಟ್ರಾಫಿಕ್ ಪೊಲೀಸ್ ಪೇದೆ, ಮಹಿಳಾ ಪೇದೆಗಳು ಗಲಾಟೆ ನಿಯಂತ್ರಿಸಿದ್ದಾರೆ‌‌. 

ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆಯಷ್ಟೇ ಬೆಳಗಾವಿಯ ಖಡೇಬಜಾರ್‌ನಲ್ಲಿರುವ ವ್ಯಾಪಾರಸ್ಥರು ಬೆಳಗಾವಿಯ ಪ್ರಮುಖ ಮಾರುಕಟ್ಟೆಗಳಲ್ಲಿ ವೇಶ್ಯಾವಾಟಿಕೆ ಹಾವಳಿ ಜಾಸ್ತಿ ಆಗಿದ್ದು ಇದನ್ನ ನಿಯಂತ್ರಿಸುವಂತೆ ಪ್ರತಿಭಟನೆ(Pootest) ಮಾಡಿ ಖಡೇಬಜಾರ್ ಠಾಣೆಗೆ ಮನವಿ ಸಲ್ಲಿಸಿದ್ರು. ಈ ಮಧ್ಯೆ ಕುಡಿದ ಮತ್ತಿನಲ್ಲಿ‌ ಮಹಿಳೆಯರು ಕಿತ್ತಾಡಿಕೊಂಡಿದ್ದು ವೇಶ್ಯಾವಾಟಿಕೆ ವಿಚಾರವಾಗಿ ಕಿತ್ತಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಯಾವ ವಿಚಾರಕ್ಕೆ ಕಿತ್ತಾಡಿಕೊಂಡರು ಗೊತ್ತಿಲ್ಲ ಆದ್ರೆ ಗಲಾಟೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್(Police) ಮೂಲಗಳು ತಿಳಿಸಿವೆ‌.

ಸ್ಟುಡೆಂಟ್ಸ್ ಬಳಸಿಕೊಂಡು ವೇಶ್ಯಾವಾಟಿಕೆ ಜಾಲ

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರನ್ನು(Students) ಬಳಸಿ ಹೈಟೆಕ್ ವೇಶ್ಯಾವಾಟಿಕೆ (prostitution) ನಡೆಸುತ್ತಿದ್ದ ಪ್ರಕರಣ ಮಂಗಳೂರಿನಿಂದ ವರದಿಯಾಗಿದೆ. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು  ವೇಶ್ಯಾವಾಟಿಕೆ ನಡೆಸುತ್ತಿದ್ದ ಕೃತ್ಯ ಬೆಳಕಿಗೆ ಬಂದಿದ್ದು ಪ್ರತ್ಯೇಕ ನಾಲ್ಕು ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ ಘಟನೆ ಮೇ 08 ರಂದು ನಡೆದಿತ್ತು.

ವಿದ್ಯಾರ್ಥಿನಿಗೆ ಲೈಂಗಿಕ ‌ಕಿರುಕುಳ ನೀಡಿದ ನಾಲ್ವರು ಆರೋಪಿಗಳನ್ನು(Arresst) ಬಂಧಿಸಲಾಗಿದೆ.  ರಶೀದ್ ಸಾಹೇಬ್(73), ಮೊಹಮ್ಮದ್ ಆಲಿ(74), ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ(62), ಇಸ್ಮಾಯಿಲ್(41) ಬಂಧಿತ ಆರೋಪಿಗಳು. ಗ್ರಾಹಕರ ರೀತಿಯಲ್ಲಿ ಬಂದು ಲೈಂಗಿಕ ‌ಕಿರುಕುಳ ನೀಡುತ್ತಿದ್ದರು. ಮಂಗಳೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ನಂದಿಗುಡ್ಡದ ರಿಯಾನಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನ ಪೆಂಟ್ ಹೌಸ್ ನಲ್ಲಿ  ವೇಶ್ಯಾವಾಟಿಕೆ ಬೆಳಕಿಗೆ ಬಂದಿತ್ತು. ಈ ಹಿಂದೆಯೇ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರನ್ನು ಪೊಲೀಸರು ರಕ್ಷಣೆ ಮಾಡಿದ್ದರು.
ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಐದು ಪ್ರಕರಣ ದಾಖಲಿಸಿ ಹತ್ತು ಜನರನ್ನು ಬಂಧಿಸಿದ್ದಾರೆ. ಇದೀಗ ಮತ್ತೆ ಐದು ಪ್ರಕರಣ ದಾಖಲಿಸಿ 10 ಜನರ ವಿರುದ್ಧ ಎಫ್.ಐ.ಆರ್ ದಾಖಲಿಸಿಸಲಾಗಿದ್ದು ಜಾಲವನ್ನು ಬುಡಸಮೇತ ಕಿತ್ತುಹಾಕುವ ಪಣ ತೊಟ್ಟಿದ್ದರು.

Sex Racket : ಹೆಸರಿಗೆ ಸ್ಪಾ.. ಒಳಗೆ ಅದೇ ದಂಧೆ.. ಆನ್‌ಲೈನ್‌ನಲ್ಲೇ ವ್ಯವಹಾರ!

ನಿರಂತರ ದಾಳಿ:  ಹುಬ್ಬಳ್ಳಿ (Hubbalii) ಹಾಗೂ ಮಂಗಳೂರಿನಲ್ಲಿ(Mangaluru) ನಡೆಯುತ್ತಿದ್ದ ವೇಶ್ಯಾವಾಟಿಕೆ  ದಂಧೆ ಮೇಲೆ ಪೊಲೀಸರು ದಾಳಿ ಮಾಡಿದ್ದರು.  ಹುಬ್ಬಳ್ಳಿ  ಹಾಗೂ ಮಂಗಳೂರಿನಲ್ಲಿ  ಪ್ರತ್ಯೇಕವಾಗಿ ದಾಳಿಯಾಗಿದ್ದು, ಈ ಎರಡು ಘಟನೆಯ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.

ಜಿಲ್ಲೆಯ ಎಸ್.ಜಿ.ಟವರ್ಸ್, ಅಮೃತ ಡಿಲಕ್ಸ್ ಹೋಟೆಲ್‌ನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮಾಲೀಕ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.  ಲಾಡ್ಜ್ ಮಾಲೀಕ ವೆಂಕಟೇಶ ನಾಯ್ಕ, ಮ್ಯಾನೇಜರ್ ವಿರೇಶ್​ ಮುರುಡೇಶ್ವರ, ಕೆ.ಎಮ್.ಪ್ರದೀಪ್ ಗೌಡ, ಮಂಜುನಾಥ್ ಗೌಡ ಬಂಧಿತ ಆರೋಪಿಗಳು. ಆರೋಪಿಗಳು ಬೇರೆ ರಾಜ್ಯದಿಂದ ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದರು.
 

click me!