ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಸಾಕಷ್ಟು ಕ್ರೈಂಗಳು ನಡಿತಾನೆ ಬಂದಿವೆ..ಆದರೆ ಹಿಂದಿರುವ ಪೋಲಿಸ್ ಕಮಿಷನರ್ ಅವರು ಸೂಕ್ತವಾಗಿ ಯಾವುದೆ ಕ್ರಮವನ್ನ ಕೈಗೋಳ್ಳದ ಕಾರಣ ಕ್ರೈಂಗಳು ಆಗ್ತಾ ಇದ್ದವು ಆದರೆ ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಪೋಲಿಸ್ ಕಮಿನಷರ್ ಅಧಿಕಾರ ತೆಗೆದುಕ್ಕೊಂಡಾಗಿನಿಂದಲೂ ಕಾಲಿಗೆ ಚಕ್ರ ಕಟ್ಟಿಕ್ಕೊಂಡು ಅವಳಿ ನಗರದವನ್ನ ಕ್ರೈಂ ಸಿಟಿಯಿಂದ ಮುಕ್ತ ಗೊಳಿಸಲು ಸಭೆಗಳ ಮೇಲೆ ಸಭೆಗಳನ್ನ ಮಾಡುತ್ತಿದ್ದಾರೆ
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ: ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಸಾಕಷ್ಟು ಕ್ರೈಂಗಳು ನಡಿತಾನೆ ಬಂದಿವೆ..ಆದರೆ ಹಿಂದಿರುವ ಪೋಲಿಸ್ ಕಮಿಷನರ್ ಅವರು ಸೂಕ್ತವಾಗಿ ಯಾವುದೆ ಕ್ರಮವನ್ನ ಕೈಗೋಳ್ಳದ ಕಾರಣ ಕ್ರೈಂಗಳು ಆಗ್ತಾ ಇದ್ದವು ಆದರೆ ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಪೋಲಿಸ್ ಕಮಿನಷರ್ ಅಧಿಕಾರ ತೆಗೆದುಕ್ಕೊಂಡಾಗಿನಿಂದಲೂ ಕಾಲಿಗೆ ಚಕ್ರ ಕಟ್ಟಿಕ್ಕೊಂಡು ಅವಳಿ ನಗರದವನ್ನ ಕ್ರೈಂ ಸಿಟಿಯಿಂದ ಮುಕ್ತ ಗೊಳಿಸಲು ಸಭೆಗಳ ಮೇಲೆ ಸಭೆಗಳನ್ನ ಮಾಡುತ್ತಿದ್ದಾರೆ.
ಇಂದು ಧಾರವಾಡ ನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ಹಾಸ್ಟೆಲ್ ವಾರ್ಡನ್ ಗಳು, ಶಾಲೆಯ ಪ್ರಾಂಶುಪಾಲರು, ವಿಶ್ವ ವಿದ್ಯಾಲಯಗಳು ಶಿಕ್ಷಕರ ಜೊತೆ, ಪೋಷಕರ ಜೊತೆ, ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿ ಸಾಕಷ್ಡು ಮಾಹಿತಿಗಳನ್ನ ಹಂಚಿಕ್ಕೊಂಡರು ಜೊತೆಗೆ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಂದಲೂ ಸಲಗೆ ಗಳನ್ನು ನೀಡಿ ಸಾಕಷ್ಡು ಮಾಹಿತಿಗಳನ್ನ ಸಭೆಯಲ್ಲಿ ಭಾಗವಹಿಸಿದವರಿಗೆ ತಿಳಿ ಹೇಳಿದರು..
ಇವನ ಬಳಿ ದೇಶ ಸುಧಾರಿಸುವ ಐಡಿಯಾಗಳಿವೆಯಂತೆ; ಜಿಲ್ಲಾಧಿಕಾರಿ ಹುದ್ದೆಗೆ ಬೇಡಿಕೆ ಇಟ್ಟ ವಿಚಿತ್ರ ಯುವಕ!
ಜೊತೆಗೆ ಜಿಲ್ಲಾಧಿಕಾರಿಗಳು ಸಹ ನಮಗೆ ಬಹಳ ಸಪೋರ್ಟ ಮಾಡ್ತಾ ಇದಾರೆ..ಇಗಾಗಲೆ ಅವಳಿ ನಗರದಲ್ಲಿ ಕಳೆದ ಒಂದು ತಿಂಗಳಿಂದ ಗಾಂಜಾ ಮಾರಾಟಾ ಮಾಡುವವರನ್ನು, ಕಳ್ಳರನ್ನು, ರೌಡಿಶಿಟರ್ ಗಳನ್ನು, ಜೂಜು ಕೋರರನ್ನು,ಬಡ್ಡಿ ಧಂದೆ ಮಾಡುವವರನ್ನ ಕರೆಸಿ ಇಗಾಲೆ ಎಲ್ಲರಿಗೂ ವಾರ್ನ ಮಾಡಿ ಎಚ್ಚರಿಕೆ ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಸುವವ್ಯವಸ್ಥೆಯನ್ನ ಸಾರ್ವಜನಿಕ ಸ್ಥಳದಲ್ಲಿ ಹಾಳು ಮಾಡುವ ಸುಮಾರು 2000 ಜನರ ಕ್ಕೂ ಹೆಚ್ಚು ವ್ಯಕ್ತಿಗಳನ್ನ ಇಗಾಗಲೆ ಆಯಾ ಪೋಲಿಸ್ ಠಾಣೆಗಳಿಗೆ ಕರೆಸಿ ಎಲ್ಲರಿಗೂ ವಾರ್ನ ಮಾಡಿದ್ದಾರೆ.
ಇನ್ನು ಇವತ್ತು ಅವಳಿ ನಗರದಲ್ಲಿ ಹಾಸ್ಟೆಲ್ ಗಳಲ್ಲಾದ, ಸಮಸ್ಯಗಳು, ಮತ್ತು ಕಿಡಗೇಡಿಗಳಿಂದ ಸಾರ್ವಜನಿಕರಿಗೆ ಆಗುವ ಸಮಸ್ಯಗಳ ಬಗ್ಗೆ ಎನೆ ಇದ್ದರೂ ನನ್ನ ಜೊತೆ ಎಲ್ಲರೂ ನೇರವಾಗಿ ಸಂಪರ್ಕ ಸಮಸ್ಯಗಳನ್ನು ಹೇಳಿಕ್ಕೊಳ್ಳಬೇಕು ಎಂದು ಸಭೆಯಲ್ಲಿ ಭಾಗಿಯಾದವರಿಗೆ ಸಲಹೇಗಳನ್ನು ನೀಡಿದರು.
ಇನ್ನು ಅವಳಿ ನಗರದಲ್ಲಿ ಶಾಲಾ ಕಾಲೇಜುಗಳಲ್ಲಾದ ಸಮಸ್ಯ ಗಳನ್ನ ಸಾಕಷ್ಡು ಜನರು ಕಮಿಷನರ್ ಅವರ ಮುಂದರ ಹಂಚಿಕ್ಕೊಂಡರು ಜೊತೆಗೆ ನಗರದ ಕ್ರೈಂ ಹಾಸ್ಟಸ್ಪಾಟ್ ಗಳಲ್ಲಿ ಹೆಚ್ಚಿಗೆ ನಿಗಾ ಇಡುವಂತೆ ಸೂಚನೆ ನೀಡಿದರು.ಇಲ್ಲಿಯವೆಗೆ ಅವಳಿ ನಗರದಲ್ಲಿ ಸಾಕಷ್ಟು ಸಮಸ್ಯಗಳಿಗೆ ಕಮಿಷನರ್ ಅವರು ಸಭೆಗಳ ಮುಖಾಂತರ ಸಾಕಷ್ಡು ಮಾಹಿತಿಗಳನ್ನ ನೀಡಿದರು
ಮಾರಿಯಮ್ಮನ ಮುನಿಸೇ ದುರಂತಕ್ಕೆ ಕಾರಣವಾಯ್ತಾ? 2 ವರ್ಷದ ಹಿಂದೆಯೇ ಸೂಚನೆ ಕೊಟ್ಟಿತ್ತಾ ದೇವರು?
ಜಿಲ್ಲೆಯಲ್ಲಿ ಡ್ರಗ್ ಕೇಸ್ ಗಳಿಗೆ ಸಂಬಂಧಪಟ್ಟಂತೆ ಒಂದು ಪೋನ್ ನಂಬರ್ ನ್ನ ಸಾರ್ವಜನಿಕರಿಗೆ ಕರೆ ಮಾಡುವಂತೆ ಹೇಳಿದರು 94488 53853 ಈ ನಂಬರಗೆ ಕರೆ ಮಾಡಿದರೆ ಸಾಕು ಆದಷ್ಡು ಬೇಗ ಆ ಸಮಸ್ಯಗಳನ್ನ ಬಗೆ ಹರಿಸಿಲು ಪೋಲಿಸ್ ಇಲಾಖೆ ಕೆಲಸ ಮಾಡುತ್ತಿದೆ ಎಂದು ಹೇಳಿದರು..ಪೋಲಿಸ್ ಕಮಿಷನರ್ ಅವರ ಮಾಡಿರುವ ಒಂದು ತಿಂಗಳ ಕೆಲಸಕ್ಕೆ ಗೃಹ ಸಚಿವರ ಡಾ.ಜಿ ಪರಮೇಶ್ವರ ಅವರು ಕೂಡಾ ಶಹಬ್ಬಾಶ್ ಗಿರಿಯನ್ನ ಕೊಟ್ಟಿದ್ದಾರೆ..
ಸಭೆಯಲ್ಲಿ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ, ಎಲ್ ಆ‌್ಯಂಡ್ ಓ ಡಿಸಿಪಿ ನಂದಗಾವಿ,ಡಿಸಿಪಿ ರವಿಶ್, ಎಸಿಪಿ ಪ್ರಶಾಂತ, ವಿದ್ಯಾಗಿರಿ ಸಿಪಿಐ ಸಂಗಮೇಶ ದಿಡಗಿನಾಳ, ಶಹರ ಪೋಲಿಸ್ ಠಾಣೆಯ ಸಿಪಿಐ ಕಾಡದೇವರಮಠ, ಉಪನಗರ ಠಾಣೆಯ ಸಿಪಿಐ ದಯಾನಂದ ಸೇರಿದಂತೆ ಮೂರು ಠಾಣೆಯ ಎಲ್ಲ ಪೋಲಿಸ್ ಸಿಬ್ಬಂದಿಗಳು ಭಾಗವಹಸಿದ್ದರು..