ಅಣ್ಣನ ತಿಥಿಗೆಂದು ವಯನಾಡಿಗೆ ಹೋಗಿದ್ದ ನಾನು ಬದುಕಿದ್ದೇ ಹೆಚ್ಚು: ದುರಂತದಲ್ಲಿ ಪಾರಾದ ಕನ್ನಡಿಗನ ಅನುಭವ..!

By Kannadaprabha NewsFirst Published Aug 2, 2024, 12:38 PM IST
Highlights

ನಾವಿದ್ದ ಎಸ್ಟೇಟ್ ಬಳಿ ಮುಳ್ಳುತಂತಿ ಅಡಿಯ ಮೂಲಕ ನಾವೆಲ್ಲರೂ ಎಸ್ಟೇಟಿನ ತಿಟ್ಟಿಗೆ ಹೋದವು. ಆ ವೇಳೆಗೆ ಸೇತುವೆಯೊಂದು ಕುಸಿತಗೊಂಡು ಮತ್ತಷ್ಟು ನೀರು ಬಂದು ಮನೆಗಳೆಲ್ಲವೂ ಕೊಚ್ಚಿಕೊಂಡು ಹೋದವು. ಇಲ್ಲದಿದ್ದರೆ ನಮ್ಮ ಕುಟುಂಬದವರು ಯಾರೂ ಬದುಕುತ್ತಿರಲಿಲ್ಲ ಎಂದು ಹೇಳಿದ ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ ಗ್ರಾಮದ ಸ್ವಾಮಿ ಶೆಟ್ಟಿ. 
 

ಗುಂಡ್ಲುಪೇಟೆ(ಆ.02):  ಮನೆಯೊಳಗೆ ನೀರು ತುಂಬಿದ್ದರಿಂದ ಹಿಂಬಾಗಿಲ ಮೂಲಕ ಆಚೆ ತೆರಳಿ * ಎತ್ತರದ ಪ್ರದೇಶಕ್ಕೆ ಸ ಹೋಗದೆ ಇದ್ದರೆ ನಮ್ಮ ಕುಟುಂಬದವರು ನೀರು ಪಾಲಾಗು ತ್ತಿದ್ದೆವು ಎಂದು ವಯನಾಡ್ ಭೂ ಕುಸಿತದಿಂದ ಪಾರಾದ ತಾಲೂಕಿನ ತ್ರಿಯಂಬಕಪುರ ಗ್ರಾಮದ ಸ್ವಾಮಿ ಶೆಟ್ಟಿ ಹೇಳಿದರು.

ವಯನಾಡ್‌ನ ಚೂರಲ್ ಮಾಲಾ ಬಳಿಯ ಎಸ್ಟೇಟ್‌ನಲ್ಲಿ ಸ್ವಾಮಿ ಶೆಟ್ಟಿಯ ಅಣ್ಣ ಹುಲಗಶೆಟ್ಟಿಯ ಕುಟುಂಬ 3 ದಶಕಗಳಿಂದಲೂ ವಾಸವಿತ್ತು. ಹುಲಗಶೆಟ್ಟಿ ಚೂರಲ್‌ ಮಾಲಾ ಬಳಿ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದ. ಅಣ್ಣನ ಸಾವಿಗೆ ಸ್ವಾಮಿ ಶೆಟ್ಟಿಯ ಕುಟುಂಬ ಹೋಗಿ ಬಂದಿತ್ತು. ಸ್ವಾಮಿ ಶೆಟ್ಟಿ ಕಳೆದ ಸೋಮವಾರ ಬೆಳಗ್ಗೆ ಹಾಲು ತುಪ್ಪ, ಅಣ್ಣನ ತಿಥಿಗೆಂದು ತೆರಳಿ ಅಣ್ಣನ ವಾಸದ ಮನೆಯಲ್ಲಿದ್ದರು. ವಯನಾಡ್‌ನಲ್ಲಿ ನಿರಂತರವಾಗಿ ಮಳೆಗೆ ಮನೆಯೊಳಗೆ ನದಿ ನೀರು ನುಗ್ಗಿದ ದೃಶ್ಯ ಮರೆಯಲು ಸಾಧ್ಯವಿಲ್ಲ ಎಂದು ಸ್ವಾಮಿ ಶೆಟ್ಟಿ ಕನ್ನಡ ಪ್ರಭದೊಂದಿಗೆ ಹೇಳಿಕೊಂಡಿದ್ದಾರೆ.

Latest Videos

ಕುತ್ತಿಗೆವರೆಗೆ ನೀರಲ್ಲಿ ಮುಳುಗಿದ್ದೆ, ಹಗ್ಗ ಹಿಡಿದು ಬೆಟ್ಟ ಏರಿ ಪಾರಾದೆ: ವಯನಾಡು ದುರಂತದಲ್ಲಿ ಪಾರಾಗಿ ಬಂದ ಮಹಿಳೆಯ ಹೇಳಿಕೆ..!

ನೋಡುತ್ತಿದೆ ನೋಡ ನೋಡುತ್ತಿದ್ದಂತೆ ಮನೆ ತುಂಬೆಲ್ಲಾ ನೀರು: 

ನಾನು ತಂಗಿದ್ದ ಮನೆಯ ಬಳಿಯೇ ನದಿ ಹರಿಯುತ್ತದೆ. ಮಂಗಳವಾರ ರಾತ್ರಿ ನದಿಯ ನೀರು ಎಸ್ಟೇಟ್‌ನ ಮನೆ ತನಕ ಬಂದ ಕಾರಣ ಮನೆಯ ಹಿಂಬದಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 6 ಜಾನುವಾರನ್ನು ನಾನೇ ಬಿಟ್ಟೆ. ಅದಾದ ಕೆಲ ಗಂಟೆಗಳ ಬಳಿಕ ಮನೆಯ ಬಾಗಿಲು ತನಕ ನೀರು ಬಂದು ಬಾಗಿಲು ಬಡಿಯುವಂತೆ ಭಾಸವಾಯ್ತು. ಮನೆಯ ಬಾಗಿಲು ತೆರದಾಗ ಮನೆಯೊಳಗೆ ನೀರು ಬಂದೇ ಬಿಡ್ತು. ಆಗ ನಾನು ಮಲಗಿದ್ದ ಬಾಮೈದನ ಹೆಂಡತಿ ಮತ್ತು ಮೊಮ್ಮಗುವನ್ನು ಹಿಂದಿನ ಬಾಗಿಲ ಮೂಲಕ ಆಚೆ ಹೋಗಿ ಎಂದೆ ಅವರಿಬ್ಬರು ಆಚೆ ಹೋಗುವ ವೇಳೆಗೆ ಮನೆಯ ತುಂಬೆಲ್ಲ ನೀರು ತುಂಬೋಯ್ತು ಎಂದರು.

ಬೇರೆ ಮನೆಗೆ ಹೋಗಿದ್ದಕ್ಕೆ ಜೀವ ಉಳಿಯಿತು: 

ನಾವಿದ್ದ ಎಸ್ಟೇಟ್ ಬಳಿ ಮುಳ್ಳುತಂತಿ ಅಡಿಯ ಮೂಲಕ ನಾವೆಲ್ಲರೂ ಎಸ್ಟೇಟಿನ ತಿಟ್ಟಿಗೆ ಹೋದವು. ಆ ವೇಳೆಗೆ ಸೇತುವೆಯೊಂದು ಕುಸಿತಗೊಂಡು ಮತ್ತಷ್ಟು ನೀರು ಬಂದು ಮನೆಗಳೆಲ್ಲವೂ ಕೊಚ್ಚಿಕೊಂಡು ಹೋದವು. ಇಲ್ಲದಿದ್ದರೆ ನಮ್ಮ ಕುಟುಂಬದವರು ಯಾರೂ ಬದುಕುತ್ತಿರಲಿಲ್ಲ ಎಂದು ಹೇಳಿದ್ದಾರೆ.

click me!