Udupi; ಮಕ್ಕಳ ವಿರುದ್ಧ ದೂರು ನೀಡಲು ಧರ್ಮಸ್ಥಳಕ್ಕೆ ಹೊರಟಿದ್ದ ವೃದ್ಧನ ರಕ್ಷಣೆ

By Gowthami KFirst Published Sep 26, 2022, 5:12 PM IST
Highlights

ಮಕ್ಕಳ ಮೇಲೆ ಮುನಿಸಿಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ಅವರಲ್ಲಿ ದೂರು ನೀಡಲು ಹೊರಟಿದ್ದ ಧಾರವಾಡದ ಶಿವಪ್ಪ (90) ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ  ದಾಖಲಿಸಿದ್ದಾರೆ.

ಉಡುಪಿ (ಸೆ.26): ಅದಾವುದೋ ಕಾರಣಕ್ಕೆ ತನ್ನ ಮಕ್ಕಳ ಮೇಲೆ ಮುನಿಸಿಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ಅವರಲ್ಲಿ ದೂರು ನೀಡಲು ಹೊರಟಿದ್ದ ಧಾರವಾಡದ ಶಿವಪ್ಪ (90) ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ಭಾನುವಾರ ದಾಖಲಿಸಿದ್ದಾರೆ. ತೀವ್ರ ವೃದ್ಧಾಪ್ಯದಿಂದ ಬಳಲುತ್ತಿರುವ ಶಿವಪ್ಪ ಅವರು ಭಾನುವಾರ ರಾತ್ರಿ ಉಡುಪಿಯ ಜೋಡುಕಟ್ಟೆಯ ಬಳಿ ರಸ್ತೆ ದಾಟಲಾಗದೆ ಡಿವೈಡರ್ ಮಧ್ಯೆ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ವಿಶು ಶೆಟ್ಟಿ ಅವರು ವೃದ್ಧನನ್ನು ರಕ್ಷಿಸಿದ್ದಾರೆ. ಅವರ ಪೂರ್ವಾಪರ ವಿಚಾರಿಸಿದಾಗ ಊರು ಧಾರವಾಡ, ಹೆಸರು ಶಿವಪ್ಪ ಎಂದಷ್ಟೇ ಮಾಹಿತಿ ನೀಡುತ್ತಾರೆ. ಮಕ್ಕಳ ಬಗ್ಗೆ ವಿಚಾರಿಸಿದರೆ ಉರಿದು ಬೀಳುತ್ತಾರೆ. ಮಕ್ಕಳ ವಿರುದ್ಧವೇ ದೂರು ನೀಡಲು ಧರ್ಮಸ್ಥಳಕ್ಕೆ ಹೊರಟಿದ್ದೇನೆ. ಅವರ ಹೆಸರೆತ್ತಬೇಡಿ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಶಿವಪ್ಪ ಧಾರವಾಡದಿಂದ ಉಡುಪಿಗೆ ಹೇಗೆ ಬಂದರು ? ಯಾರ ಜೊತೆ ಬಂದರು ? ಜೋಡುಕಟ್ಟೆಗೆ ಹೇಗೆ ತಲುಪಿದರು ?  ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅವರ ವಾರೀಸುದಾರರು ಯಾರಾದರೂ ಇದ್ದಲ್ಲಿ ಮಣಿಪಾಲದ ಹೊಸಬೆಳಕು ಆಶ್ರಮ (ಮೊ. .9620417570)ನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಅವರು ಸೂಚಿಸಿದ್ದಾರೆ. ಕಾರ್ಯಾಚರಣೆಯಲ್ಲಿ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದರು.

ಅಜೆಕಾರಿನಲ್ಲಿ ಕನ್ನಡ ಲಿಪಿಯ 14ನೇ ಶತಮಾನದ ಶಾಸನ ಪತ್ತೆ
ಕಾರ್ಕಳ: ಅಜೆಕಾರಿನಲ್ಲಿ 14 ಶತಮಾನದ ಶಾಸನ ವೊಂದು ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ವಿಷ್ಣು ಮೂರ್ತಿ ದೇವಸ್ಥಾನದ ಬಳಿಯ ಗಾಣದ ಬೆಟ್ಟು ಎಂಬಲ್ಲಿ ಪತ್ತೆಯಾಗಿದೆ.

ಅಜೆಕಾರು ಗಾಣದಬೆಟ್ಟು ಪ್ರದೇಶದ ಅಮ್ಮು ಶೆಟ್ಟಿಅವರಿಗೆ ಸೇರಿದ ಜಾಗದಲ್ಲಿ 14ನೇ ಶತಮಾನಕ್ಕೆ ಸೇರಿದ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ (ಅಂಗಸಂಸ್ಥೆ NTಇ-ಅOಋ) ಇದರ ಅಧ್ಯಯನ ನಿರ್ದೇಶಕರಾದ ಪ್ರೊ.ಎಸ್‌.ಎ. ಕೃಷ್ಣಯ್ಯ ಮತ್ತು ಕಡಿಯಾಳಿಯ ಯು. ಕಮಲಬಾಯಿ ಪ್ರೌಢಶಾಲೆ ನಿವೃತ್ತ ಶಿಕ್ಷಕ ಕೆ. ಶ್ರೀಧರ್‌ ಭಟ್‌ ಇವರ ನೇತೃತ್ವದಲ್ಲಿ ಪ್ಲೀಚ್‌ ಇಂಡಿಯಾ ಫೌಂಡೇಶನ್‌- ಹೈದರಾಬಾದ್‌ ಇಲ್ಲಿನ ಸಹಾಯಕ ಸಂಶೋಧಕ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿದ್ದಾರೆ.

Udupi; ಈ ಒಂಟಿ ವೃದ್ದೆಯನ್ನು ಮರಳಿ ಗೂಡಿಗೆ ಸೇರಿಸುವವರಾರು?

ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲುಗಳನ್ನು ಒಳಗೊಂಡಿರುವ ಈ ದಾನ ಶಾಸನವು 3 ಅಡಿ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿದ್ದು, ಗ್ರಾನೈಟ್‌ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ಮತ್ತು ಶಂಖ-ಚಕ್ರದ ಕೆತ್ತನೆ ಇದೆ. ಶಕ ವರುಷ 1331ನೆಯ ಮಾರ್ಗಶಿರ ಶುದ್ಧ 1 ಗುರುವಾರ ಅಂದರೆ ಸಾಮಾನ್ಯ ವರ್ಷ 1409 ವಿರೋಧಿ ಸಂವತ್ಸರ ನವಂಬರ್‌ 07 ಗುರುವಾರಕ್ಕೆ ಸರಿಹೊಂದುತ್ತದೆ.

ರಾಗಿ ಕಳ್ಳ ಆರೋಪ: ಧರ್ಮಸ್ಥಳದಲ್ಲಿ ಶಿವಲಿಂಗೇಗೌಡ ಆಣೆಪ್ರಮಾಣ

ಮಂಣೆ (ಪ್ರಸ್ತುತ ಮರ್ಣೆ)ಯ ವಿಷ್ಣು ದೇವರ ದೀವಿಗೆಗೆ ಆಜಕಾರ (ಪ್ರಸ್ತುತ ಅಜೆಕಾರು) ಕಾತು ಮೂಲಿಗೆ ಎಂಬ ವ್ಯಕ್ತಿಯು ಬೆಟ್ಟಿಂ (ಪ್ರಸ್ತುತ ಗಾಣದಬೆಟ್ಟು) ಪ್ರದೇಶದಿಂದ ಎಣ್ಣೆಯನ್ನು ಮತ್ತು 11 ತೆಂಗಿನಕಾಯಿಯನ್ನು (ಅಥವಾ 11 ತೆಂಗಿನಕಾಯಿಯ ಎಣ್ಣೆ) ದಾನವಾಗಿ ಬಿಟ್ಟಿರುವುದರ ಬಗ್ಗೆ ಶಾಸನವು ಉಲ್ಲೇಖಿಸುತ್ತದೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಪ್ರಕಾಶ್‌ ಶೆಟ್ಟಿಮರ್ಣೆ, ಸುರೇಶ್‌ ಶೆಟ್ಟಿಗಾಣದಬೆಟ್ಟು ಮನೆ, ರವಿ ಸಂತೋಷ್‌ ಆಳ್ವ ಮತ್ತು ಸುಶಂತ್‌ ಶೆಟ್ಟಿಸಹಕಾರ ನೀಡಿದ್ದಾರೆ.

 

click me!