
ಧಾರವಾಡ (ಜು.21): ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧಾರವಾಡದ ವೈದ್ಯ ಪತ್ನಿಯಿಂದ (Doctor's Wife) ಗಂಡನ ಕೊಲೆ ಹಾಗೂ ಮಗನಿಗೆ ಚಾಕು ಇರಿತ ಪ್ರಕರಣಕ್ಕೆ (Husband Murder & Son Stabbing Case) ಸಂಬಂಧಿಸಿದಂತೆ ಒಂದು ಸುಖಾಂತ್ಯದ ಸುದ್ದಿ ಹೊರಬಿದ್ದಿದೆ. ತನ್ನದೇ ಹೆತ್ತ ತಾಯಿಯಿಂದ ಭೀಕರವಾಗಿ ಚಾಕು ಇರಿತಕ್ಕೊಳಗಾಗಿದ್ದ 8 ವರ್ಷದ ಬಾಲಕ ನಿಹೇತ್ (Nihet) ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.
ಕಳೆದ ಜುಲೈ 15 ರಂದು ನಡೆದ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಹೇತ್‌ನನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿತ್ತು. ಹೊಟ್ಟೆ ಹಾಗೂ ದೇಹದ ಭಾಗಗಳಿಗೆ ಚಾಕು ಇರಿತವಾಗಿದ್ದರಿಂದ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ, ವೈದ್ಯರ ಸತತ ಪ್ರಯತ್ನ ಹಾಗೂ ಮಗುವಿನ ಜೀವಾಲೆಗೆ ಜಯ ಸಿಕ್ಕಿದ್ದು, ನಿಹೇತ್ ಈಗ ಆಸ್ಪತ್ರೆಯಲ್ಲೇ ಆಟವಾಡುತ್ತಿದ್ದಾನೆ. ಪುಟಾಣಿ ಬಾಲಕ ಚೇತರಿಸಿಕೊಂಡಿರುವುದು ವೈದ್ಯಕೀಯ ತಂಡ ಹಾಗೂ ಪೊಲೀಸ್ ಇಲಾಖೆಯಲ್ಲಿ ಹರ್ಷ ಮೂಡಿಸಿದೆ.
ಈ ಮಗು ಇಂದು ಬದುಕಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ (Police Commissioner) ಎನ್. ಶಶಿಕುಮಾರ್ (IPS Shashi Kumar) ಅವರ ಸಮಯಪ್ರಜ್ಞೆ. ಜುಲೈ 15 ರಂದು ಮಹಿಳೆ ತನ್ನ ಗಂಡನನ್ನು ಕೊಲೆ ಮಾಡಿ, ಮಗನಿಗೂ ಚಾಕು ಇರಿದಿದ್ದಳು. ಮಗು ರಕ್ತದ ಮಡುವಿನಲ್ಲಿ (Pool of Blood) ಒದ್ದಾಡುತ್ತಿದ್ದರೂ, ಆ ಪಾಪಿ ತಾಯಿ ಕಿಂಚಿತ್ತೂ ಮನ ಮಿಡಿಯದೆ ಪಕ್ಕದಲ್ಲೇ ಕುಳಿತು ಮೊಬೈಲ್ ನೋಡುತ್ತಿದ್ದಳು.
ಸ್ಥಳಕ್ಕೆ ಭೇಟಿ ನೀಡಿದ್ದ ಕಮಿಷನರ್ ಶಶಿಕುಮಾರ್ ಅವರು, ಮಗುವಿನ ಸ್ಥಿತಿ ಕಂಡು ಮರುಗಿದ್ದರು. ಆಂಬುಲೆನ್ಸ್‌ಗೆ ಕಾಯುತ್ತಾ ನಿಲ್ಲದ ಕಮಿಷನರ್, ರಕ್ತದ ಮಡುವಿನಲ್ಲಿದ್ದ ಮಗುವನ್ನು ಎದೆಗಪ್ಪಿಕೊಂಡು (Hold Close to Chest) ತಾವೇ ಆಸ್ಪತ್ರೆಗೆ ಓಡಿಸಿದ್ದರು. ಪೊಲೀಸ್ ಅಧಿಕಾರಿ ಎಂಬ ಗತ್ತು ಬಿಟ್ಟು ಒಬ್ಬ ತಂದೆಯಂತೆ ಮಗುವನ್ನು ಎತ್ತಿಕೊಂಡು ಹೋಗಿ ತುರ್ತು ಚಿಕಿತ್ಸೆಗೆ (Emergency Treatment) ವ್ಯವಸ್ಥೆ ಮಾಡಿದ್ದರು. ಕಮಿಷನರ್ ಅವರ ಈ ಒಂದು ಮಾನವೀಯ ನಡೆ (Humanitarian Act) ಇಂದು ಒಂದು ಅಮಾಯಕ ಜೀವವನ್ನು ಉಳಿಸಿದೆ.
ಮಗು ಗುಣಮುಖನಾಗಿರುವ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ. "ಖಾಕಿ ಉಡುಪಿನ ಹಿಂದೆ ಒಬ್ಬ ಕರುಣಾಮಯಿ ತಂದೆಯಿದ್ದಾರೆ" ಎಂದು ಜನರು ಕೊಂಡಾಡುತ್ತಿದ್ದಾರೆ. ತನ್ನ ಸ್ವಂತ ತಾಯಿಯೇ ರಾಕ್ಷಸಿಯಂತೆ ವರ್ತಿಸಿದಾಗ, ಅಪರಿಚಿತ ಪೊಲೀಸ್ ಅಧಿಕಾರಿಯೊಬ್ಬರು ದೇವದೂತನಂತೆ ಬಂದು ಮಗುವಿನ ಜೀವ ಉಳಿಸಿರುವುದು ನಿಜಕ್ಕೂ ವಿಶೇಷ. ಸದ್ಯ ಮಗು ಆಪತ್ತಿನಿಂದ ಪಾರಾಗಿದ್ದು, ಶೀಘ್ರವೇ ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಲಿದೆ.