Almatti Dam: ಆಲಮಟ್ಟಿ ಡ್ಯಾಂಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ, ರಾಜ್ಯದ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟು?

Published : Jul 21, 2026, 11:30 AM ISTUpdated : Jul 21, 2026, 11:33 AM IST
Minister Ramalinga Reddy visits Almatti Dam water levels karnataka reservoirs today

ಸಾರಾಂಶ

ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ವಿಜಯಪುರ ಜಿಲ್ಲೆಯ ನಿಡಗುಂಡಿ ತಾಲೂಕಿನಲ್ಲಿರುವ ಆಲಮಟ್ಟಿ ಲಾಲ್‌ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿದರು.

ವಿಜಯಪುರ (ಜು.21): ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿಅವರು ಇಂದು ವಿಜಯಪುರ ಜಿಲ್ಲೆಯ ನಿಡಗುಂಡಿ ತಾಲೂಕಿನಲ್ಲಿರುವ ಆಲಮಟ್ಟಿ ಲಾಲ್‌ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿದರು.

ಜಲಾಶಯಕ್ಕೆ ಭೇಟಿ ನೀಡಿದ ಸಚಿವರು, ಡ್ಯಾಂ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಈ ವೇಳೆ ಜಲಾಶಯದ ಗೇಟ್‌ ಮುಂಭಾಗಕ್ಕೆ ತೆರಳಿದ ಸಚಿವರು, ನೀರು ಬಿಡುಗಡೆ, ಗೇಟ್‌ಗಳ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಈ ವೇಳೆ ಕೆಬಿಜೆಎನ್‌ಎಲ್ ಮುಖ್ಯ ಇಂಜಿನೀಯರ್(ಸಿಇ) ಡಿ.ಬಸವರಾಜ್ ಮತ್ತು ಇತರೆ ಅಧಿಕಾರಿಗಳು ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ, ಒಳಹರಿವು, ಹೊರಹರಿವಿನ ಕುರಿತು ಸ್ಥಳದಲ್ಲೇ ಮಾಹಿತಿ ನೀಡಿದರು.

ಆಲಮಟ್ಟಿ ವಾಟರ್‌ ಪಾರ್ಕ್‌ಗೂ ಸಚಿವ ಭೇಟಿ:

ಜಲಾಶಯ ಪರಿಶೀಲನೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಅವರು ಆಲಮಟ್ಟಿ ವಾಟರ್‌ ಪಾರ್ಕ್‌ಗೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಸಿಎಸ್ ನಾಡಗೌಡ (ಅಪ್ಪಾಜಿ), ಜಿಟಿ ಪಾಟೀಲ ಹಾಗೂ ಉಮೇಶ್ ಮೇಟಿ ಸೇರಿದಂತೆ ಹಲವರು ಸಚಿವರಿಗೆ ಸಾಥ್ ನೀಡಿದರು.

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?

ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ

  • ಕಬಿನಿ 64% 2284 2271.77
  • ಹೇಮಾವತಿ 61% 2922 2904.32
  • ತುಂಗಭದ್ರಾ 24% 1633 1603.08
  • ಸೂಪಾ(ಮೀ.) 28% 564 530.80
  • ಕೆಆರ್‌ಎಸ್ 35% 124.80 92.61
  • ಘಟಪ್ರಭಾ 45% 2175 2232.05
  • ಲಿಂಗನಮಕ್ಕಿ 22% 1819.12 1765.10
  • ಭದ್ರಾ 47% 2158 2121.08
  • ಹಾರಂಗಿ 74% 2859 2851.65
  • ಆಲಮಟ್ಟಿ(ಮೀ.) 77% 519.60 517.75
  • ನಾರಾಯಣಪುರ(ಮೀ.) 61% 492.25 488.90
  • ಮಲಪ್ರಭಾ 34% 2079.50 2055.15

PREV
Read more Articles on
click me!

Recommended Stories

ಕೃಷ್ಣಾ ನದಿಗೆ ಕೊಲ್ಹಾಪುರ ಜಿಲ್ಲೆಯಲ್ಲಿ ಇನ್ನೊಂದು ಅಣೆಕಟ್ಟು, ಕನ್ನಡ ಸಂಘಸಂಸ್ಥೆಗಳ ವಿರೋಧ
ಸಿಎಂ ಡಿಕೆ ಶಿವಕುಮಾರ್‌ಗೆ ರಂಭಾಪುರಿ ಶ್ರೀಗಳ ಮೇಲೇಕೆ ಅಷ್ಟೊಂದು ಭಕ್ತಿ?: ರಹಸ್ಯ ಬಿಚ್ಚಿಟ್ಟ ಜಗದ್ಗುರುಗಳು!