Dharwad: ನಾಯಿಯನ್ನು ಕೊಲ್ಲಲು ಮುಂದಾದ ದುರುಳರು: ರಕ್ಷಣೆ ಮಾಡಿದ ಶ್ವಾನ ಪ್ರಿಯ

By Govindaraj SFirst Published Jul 3, 2022, 10:58 AM IST
Highlights

ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನಲೆ ಅವುಗಳನ್ನ ಕೊಲ್ಲಲು ಮುಂದಾದ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು. ಬೀದಿ ನಾಯಿಯೊಂದು ಚಿಕ್ಕ ಮಗುವಿಗೆ ಕಚ್ಚಿದೆ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ನಾಯಿಗಳನ್ನ ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆಕಟ್ಟಿ ನಿರ್ಜಲ ಪ್ರದೇಶದಲ್ಲಿ ಎಸಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಜು.03): ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನಲೆ ಅವುಗಳನ್ನ ಕೊಲ್ಲಲು ಮುಂದಾದ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು. ಬೀದಿ ನಾಯಿಯೊಂದು ಚಿಕ್ಕ ಮಗುವಿಗೆ ಕಚ್ಚಿದೆ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ನಾಯಿಗಳನ್ನ ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆಕಟ್ಟಿ ನಿರ್ಜಲ ಪ್ರದೇಶದಲ್ಲಿ ಎಸಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ನವಲೂರಿನ ಗ್ರಾಮ ಮತ್ತು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಬೀದಿನಾಯಿಯೊಂದು ಓರ್ವ ಬಾಲಕಿಗೆ ಕಚ್ಚಿದೆ ಎಂಬ ಕಾರಣಕ್ಕೆ ಪಾಲಿಕೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಸೇರಿಕ್ಕೊಂಡು ಸಿಕ್ಕ‌ ಸಿಕ್ಕ ಶ್ವಾನಗಳನ್ನ ಕಟ್ಟಿ ಸಾಯಿಸೋ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಇನ್ನು ಅವುಗಳನ್ನು ಧಾರವಾಡ ತಾಲೂಕಿನ ದಡ್ಡಿ ಕಮಲಾಪೂರ ಗ್ರಾಮದ ಗುಡ್ಡು ಗಾಡು ಪ್ರದೇಶದಲ್ಲಿ 7 ಬೀದಿ ನಾಯಿಗಳನ್ನ ಎಸೆದು ಹೋಗಿದ್ದಾರೆ.

ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲಿ ಕಲಿಕಾ ಗುಣಮಟ್ಟ ಕಳಪೆ: ಬಸವರಾಜ ಹೊರಟ್ಟಿ

ಈ ಕುರಿತು ಮಹಾನಗರ ಪಾಲಿಕೆಯ ಕಮಿಷನರ್ ಗೋಪಾಲಕೃಷ್ಣ ಅವರು ಕೂಡಾ ಆ ದಾಳಿಗೊಳಗಾದ ಮಗುವಿನ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಆರೋಗ್ಯ ವಿಚಾರಣೆ ಮಾಡಿದ್ದು ಓಕೆ, ಆದರೆ ಆ ಬೀದಿನಾಯಿಗಳಿಗೆ ಕೊಟ್ಟಿರುವ ಶಿಕ್ಷ ಅಮಾನವೀಯವಾದದು, ಯಾವ ಬೀದಿನಾಯಿಗಳಿವೆ ಅವುಗಳಿಗೆ ಪಾಲಿಕೆ ಸಿಬ್ಬಂದಿಗಳು ಇಂಜೆಕ್ಷನ್ ಕೊಡಬಹುದು. ಆದರೆ ಅವನ್ನೆಲ್ಲ ಬಿಟ್ಟು ಕೊಲ್ಲಲು ಮುಂದಾಗಿದ್ದು ನಿಜಕ್ಕೂ ನಾಯಿ ಪ್ರಿಯರನ್ನ ಕೆರಳಿಸಿದೆ.

ಬೀದಿನಾಯಿಗಳನ್ನು ರಕ್ಷಣೆ ಮಾಡಿದ ಶ್ವಾನ ಪ್ರಿಯ: ಇನ್ನು ವಿಷಯ ತಿಳಿದ ಸೋಮಶೇಖರ್ ಚನಶೆಟ್ಟಿ ಸ್ಥಳಕ್ಕೆ ಬೇಟಿ ನೀಡಿದಾಗ 7 ನಾಯಿಗಳು ನಿರ್ಜಲ ಪ್ರದೇಶಗಳಲ್ಲಿ ಸಾವು ಬದುಕಿನ ಮದ್ಯ ಹೋರಾಡ್ತಾ ಇದ್ದವು. ಅವುಗಳನ್ನ ಅವರು ನೋಡಿ ಮಲಮಲ ಮರಗಿದ್ದಾರೆ. ಬಳಿಕ ಇವರು ಆ ನಾಯಿಗಳ ಬಾಯಿಗೆ ಕಟ್ಟಿದ್ದ ಬಟ್ಡೆಯನ್ನ ಬಿಚ್ಚಿ, ಕಾಲಿಗೆ ಕಟ್ಟಿದ  ಹಗ್ಗವನ್ನ ತೆಗೆದು ಅವುಗಳಿಗೆ ಆಹಾರ ಕೊಟ್ಟು ಚಿಕಿತ್ಸೆಯನ್ನ ಸ್ಥಳದಲ್ಲೆ ಕೊಟ್ಟು ಒಟ್ಟು ಐದು ಬೀದಿನಾಯಿಗಳನ್ನು ರಕ್ಷಣೆ ಮಾಡಿದ್ದಾರೆ. ಒಂದು ನಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಆದರೆ ಇನ್ನೊಂದು ನಾಯಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದೆ. ನಿಜಕ್ಕೂ ಇಂತಹ ಘಟನೆಯನ್ನ ಕಂಡು ಸೋಮಶೇಖರ್ ಕಣ್ಣೀರು ಹಾಕಿದ್ದಾರೆ.

ಭಾರತಮಾಲಾ: ಹುಬ್ಳಿಗೆ ಇನ್ನೊಂದು ಹಾಫ್‌ರಿಂಗ್‌ ರೋಡ್‌ ನಿರೀಕ್ಷೆ..!

ನಾಯಿಯಷ್ಟು ನೀಯತ್ತಿನ ಪ್ರಾಣಿ ಇನ್ನೊಂದಿಲ್ಲ, ಆದರೆ ಸೋಮಶೇಖರ್ ಮಾತ್ರ ಧಾರವಾಡದಲ್ಲಿ ಯಾವುದೆ ನಾಯಿಗಳಿಗೆ ಏನಾದರೂ ಆದ್ರೆ ಅವರು ಮುಂದೆ ನಿಂತು ಆ ನಾಯಿಗಳಿಗೆ ಚಿಕಿತ್ಸೆ ಕೊಡಿಸಿ ಅವುಗಳನ್ನ ರಕ್ಷಣೆ ಮಾಡಿದವರಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಧನೆ ಮಾಡಿದ್ದಾರೆ. ನಿಜಕ್ಕೂ ಈ ನಾಯಿಗಳನ್ನ ಈ ರೀತಿಯಾಗಿ ಯಾರು ತಂದು ಎಸೆದು ಹೋಗಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸೋಮಶೇಖರ್ ಚನ್ನಶೆಟ್ಡಿ ಆಕ್ರೋಶ ಹೊರಹಾಕಿದರು.

click me!