ಸಿಎಂ ತವರು ಜಿಲ್ಲೆ, ಸಚಿವ ಸುಧಾಕರ್‌ ತವರಿಗೆ ವರ : ಬಂಪರ್ ಕೊಡುಗೆ

By Kannadaprabha News  |  First Published Nov 9, 2021, 10:59 AM IST
  •  ಧಾರವಾಡ ಮತ್ತು ಕೋಲಾರ ಹಾಲು ಒಕ್ಕೂಟಗಳನ್ನು ವಿಭಜಿಸಿ ಹೊಸದಾಗಿ ಎರಡು ಒಕ್ಕೂಟಗಳನ್ನು ಸ್ಥಾಪನೆ
  • ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ

ಬೆಂಗಳೂರು (ನ.09):  ಧಾರವಾಡ (Dharwad) ಮತ್ತು ಕೋಲಾರ (kolar) ಹಾಲು ಒಕ್ಕೂಟಗಳನ್ನು ವಿಭಜಿಸಿ ಹೊಸದಾಗಿ ಎರಡು ಒಕ್ಕೂಟಗಳನ್ನು ಸ್ಥಾಪಿಸಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ (Cabinet Meet) ತೀರ್ಮಾನ ಕೈಗೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ತವರು ಜಿಲ್ಲೆಗೆ ಪ್ರತ್ಯೇಕ ಹಾವೇರಿ ಹಾಲು ಒಕ್ಕೂಟ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Health minister Dr K sudhakar) ಅವರ ತವರು ಜಿಲ್ಲೆಗೆ ಪ್ರತ್ಯೇಕ ಚಿಕ್ಕಬಳ್ಳಾಪುರ (Chikkaballapura) ಹಾಲು ಒಕ್ಕೂಟ ಸ್ಥಾಪನೆಯಾಗಲಿವೆ.

Tap to resize

Latest Videos

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಧಾರವಾಡ (Dharwad) ಹಾಲು ಒಕ್ಕೂಟವು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ. ಧಾರವಾಡ ಹಾಲು ಒಕ್ಕೂಟವನ್ನು ವಿಭಜಿಸಿ ಪ್ರತ್ಯೇಕವಾಗಿ ಹಾವೇರಿ (Haveri) ಹಾಲು ಒಕ್ಕೂಟವನ್ನು (Milk Union) ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಅದೇ ರೀತಿ ಕೋಲಾರ ಹಾಲು ಒಕ್ಕೂಟವನ್ನು ಸಹ ವಿಭಜನೆ ಮಾಡಲಾಗಿದ್ದು, ಪ್ರತ್ಯೇಕವಾಗಿ ಚಿಕ್ಕಬಳ್ಳಾಪುರ (Chikkaballapura) ಹಾಲು ಒಕ್ಕೂಟ ಸ್ಥಾಪನೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಎರಡು ಜಿಲ್ಲೆಗಳಿಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ತಿಕ್ಕಾಟದಲ್ಲಿ ಸುಧಾಕರ್‌ಗೆ ‘ಜಯ’:  ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರಯತ್ನದ ಫಲವಾಗಿ ಕೋಲಾರ-ಚಿಕ್ಕಬಳ್ಳಾಪುರ (Kolar Chikkaballapura) ಹಾಲು ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತ್ಯೇಕಿಸಲಾಗಿದೆ. ಇದು ರಾಜಕೀಯವಾಗಿ ಕಾಂಗ್ರೆಸ್‌ನ (Congress) ಮಾಜಿ ಸಚಿವರೂ ಆಗಿರುವ ಹಾಲಿ ಶಾಸಕ ರಮೇಶ್‌ ಕುಮಾರ್‌ (Ramesh Kumar) ಮತ್ತು ಸಚಿವ ಸುಧಾಕರ್‌ ನಡುವಿನ ತಿಕ್ಕಾಟ ಸಹ ನಡೆದಿತ್ತು. ಅಂತಿಮವಾಗಿ ಈ ತಿಕ್ಕಾಟದಲ್ಲಿ ಸಚಿವ ಸುಧಾಕರ್‌ ಗೆಲುವು ಸಾಧಿಸಿದ್ದು, ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ಚಿಮುಲ್ :  ಜಿಲ್ಲೆಯ ಉಸ್ತುವಾರಿ ಹಾಗೂ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಡಾ.ಕೆ.ಸುಧಾಕರ್‌, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ ಆಗಬೇಕೆಂಬ ದಶಕಗಳ ಬೇಡಿಕೆಯನ್ನು ಸೋಮವಾರ ನಡೆದ ರಾಜ್ಯ ಸಚಿವ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ.

ಡಿಸಿಸಿ ಬ್ಯಾಂಕ್‌ ಹಾಗೂ ಕೋಚಿಮುಲ್‌ ವಿಭಜನೆಗೆ ಎಷ್ಟೇ ವಿರೋಧ ವ್ಯಕ್ತವಾದರೂ ಧೃತಿಗೆಡದೆ ಸಚಿವ ಡಾ.ಸುಧಾಕರ್‌, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುವ ಮೂಲಕ ಚಿಮುಲ್‌ ಸ್ಥಾಪನೆಗೆ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಡಿಸಿಸಿ ಬ್ಯಾಂಕ್‌ ವಿಭಜನೆ ಅಷ್ಟೇ ಬಾಕಿ ಇದೆ.

ಪಟಾಕಿ ಸಿಡಿಸಿ ಸಂಭ್ರಮ:

ಕೋಚಿಮುಲ್‌ನಿಂದ ಚಿಕ್ಕಬಳ್ಳಾಪುರ ವಿಭಜನೆ ಹಿನ್ನೆಲೆಯಲ್ಲಿ ಚಿಮೂಲ್‌ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡುತ್ತಿದ್ದಂತೆ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ನಗರದ ಅಂಬೇಡ್ಕರ್‌ ವೃತ್ತದಲ್ಲಿ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ…, ಮತ್ತಿತರರು ಇದ್ದರು.

ರೈತರ ಅನೇಕ ವರ್ಷಗಳ ಕನಸು ಇಂದು ಈಡೇರಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಗೆ, ಸಹಕಾರ ಸಚಿವರಿಗೆ ವಿಶೇಷವಾಗಿ ರಾಜ್ಯ ಸಚಿವ ಸಂಪುಟದ ಎಲ್ಲಾ ಸಹದ್ಯೋಗಿ ಸ್ನೇಹಿತರಿಗೆ ಜಿಲ್ಲೆಯ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಕೋಚಿಮುಲ್‌ ಪ್ರತ್ಯೇಕಗೊಳಿಸುವುದರಿಂದ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ. ಅನೇಕ ವರ್ಷಗಳ ಹೋರಾಟ, ಕನಸು ಇಂದು ಈಡೇರಿದೆ.

ಡಾ.ಕೆ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವರು.

click me!