ಧರ್ಮಸ್ಥಳದಲ್ಲಿ ದುಷ್ಟರ ಅಟ್ಟಹಾಸಕ್ಕೆ ಬಲಿಯಾದ ಸೌಜನ್ಯಾಳ (Soujanya Case) ಸಮಾಧಿ ಬಳಿ ಆಕೆಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿದ್ದಾರೆ.
ದಕ್ಷಿಣ ಕನ್ನಡ (ಅ.19): ರಾಜ್ಯದಲ್ಲಿ 2012ರಲ್ಲಿ ಧರ್ಮಸ್ಥಳದಲ್ಲಿ ದುಷ್ಟರ ಅಟ್ಟಹಾಸಕ್ಕೆ ಬಲಿಯಾದ ಸೌಜನ್ಯಾಳ (Soujanya Case) 28ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ ಕುಟುಂಬ ಸದಸ್ಯರು, ಆಕೆಯ ಸಮಾಧಿ ಬಳಿ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ರಾಜ್ಯದಲ್ಲಿ ಕಳೆದ 11 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನೋವು ಅನುಭವಿಸಿ ಭೀಕರವಾಗಿ ಸಾವನ್ನಪ್ಪಿದ್ದಾಳೆ. ದುಷ್ಟರ ಆಸೆಗೆ ಸುಂದರ ಹೂವೊಂದು ಅರಳುವ ಮುನ್ನವೇ ಕಮರಿ ಹೋಗಿದೆ. ಇನ್ನು ಸೌಜನ್ಯಾ ಆತ್ಯಾಚಾರ ಆರೋಪಿ ಯಾರೆಂಬುದನ್ನು ಈಗಲೂ ಸರ್ಕಾರದಿಂದ ಪತ್ತೆಮಾಡಲು ಸಾಧ್ಯವಾಗಿಲ್ಲ. ಸೌಜನ್ಯ ಈಗ ಜೀವಂತವಾಗಿದ್ದರೆ ಆಕೆ ತನ್ನ 28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು. ಆದರೆ, ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಶಪಥ ಮಾಡಿರುವ ಕುಟುಂಬ ಸದಸ್ಯರು ಬುಧವಾರ (ಅ.18) ಸೌಜನ್ಯಾಳ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ 1.5 ಅಡಿ ಎತ್ತರದ ಕಲ್ಲಿನ ಪ್ರತಿಮೆಯನ್ನು ನಿರ್ಮಿಸಿ ಅದನ್ನು ತಂದು ಸೌಜನ್ಯಾಳ ಸಮಾಧಿ ಬಳಿ ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಿದ್ದಾರೆ. ಸೌಜನ್ಯಾ ಮೂರ್ತಿಯು ಕೂತಿರುವ ಭಂಗಿಯಲ್ಲಿದ್ದು, ಕಲ್ಲಿನ ಪ್ರತಿಮೆ ಪ್ರತಿಷ್ಠಾಪನೆಗೊಳಿಸಿ ನವರಾತ್ರಿ ಅಂಂಗವಾಗಿ ಭಜನೋತ್ಸವ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಸಲಿಂಗ ವಿವಾಹ ಅಮಾನ್ಯ ಆದೇಶಕ್ಕೆ, ಕನ್ನಡದ ಕಥೆಗಾರ ವಸುಧೇಂದ್ರ ಬೇಸರ!
ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿಯೇ ಈ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ವೇಳೆ ಸುಳ್ಯ ಭಾಗದ ಸೌಜನ್ಯಾಪರ ನ್ಯಾಯಕ್ಕಾಗಿ ಹೋರಾಟ ಮಾಡಿದವರು ಹಾಗೂ ವಿವಿಧ ಪಕ್ಷಗಳು ಮುಖಂಡರು ಕುಟುಂಬ ಸದಸ್ಯರಿಗೆ ಸೌಜನ್ಯಾಳ ಪ್ರತಿಮೆ ಪ್ರತಿಷ್ಠಾಪನೆಗೆ ಸಾಥ್ ನೀಡಿದ್ದಾರೆ. ಎಲ್ಲರೂ ಸೇರಿ ಸೌಜನ್ಯಾ ಚಾಮುಂಡೇಶ್ವರಿಯ ಸ್ವರೂಪವಾಗಿ ಲಕ್ಷಾಂತರ ಜನರಿಗೆ ಅಭಯ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
ಸೌಜನ್ಯ ಅತ್ಯಾಚಾರ ಪ್ರಕರಣ ಮರುತನಿಖೆ ಅರ್ಜಿ ವಜಾ: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಹೈಕೋರ್ಚ್ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಹೊಸದಾಗಿ ತನಿಖೆ ನಡೆಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಕಳೆದ ತಿಂಗಳು (ಸೆ.09) ವಜಾಗೊಳಿಸಿದೆ. ಆರೋಪಿ ಖುಲಾಸೆಗೊಂಡಿರುವ ಹಿನ್ನೆಲೆಯಲ್ಲಿ ಮರು ತನಿಖೆಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯ ಮಾಡಿರುವ ಕಾರಣ ನೀಡಿ ಬೆಂಗಳೂರಿನ ಶೇಷಾದ್ರಿಪುರದ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ಜಿ.ನವೀನ್ ಕುಮಾರ್ ಮತ್ತು ಬಲ್ವಾಡು ಪುತ್ತೂರಿನ ವಿನಾಯಕ ಫ್ರೆಂಡ್‌್ಸ ಚಾರಿಟಬಲ್ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಅರ್ಜಿಯಲ್ಲಿ ಅರ್ಜಿದಾರರು ಎತ್ತಿರುವ ಮನವಿ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆಯಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಲಾಗಿತ್ತು.
ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್..ಡ್ಯಾಶ್..: ಡಿಕೆಶಿಗೆ ತಿವಿದ ಮಾಜಿ ಸಚಿವ ಸಿ.ಟಿ. ರವಿ