ಒಂದು ಸರ್ಕಾರ ಮಾಡಲಾರದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಹೇಳಿದರು.
ಕೊರಟಗೆರೆ : ಒಂದು ಸರ್ಕಾರ ಮಾಡಲಾರದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಸಿದ್ದೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸಿದ್ದಾರ್ಥ ಶಿಕ್ಷಣ ಸಂಸ್ಥೆ, ಪ್ರಗತಿ-ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಹಲವು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 1620ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜಯದಲ್ಲಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಮದ್ಯವ್ಯಸನಿಗಳಿಗೆ ಗೌರವ ಕಡಿಮೆ ಇರುತ್ತದೆ. ಆದ್ದರಿಂದ ಮದ್ಯವ್ಯಸನದಿಂದ ಹೊರ ಬಂದು ಹೊಸ ಜೀವನ ಪಡೆದುಕೊಳ್ಳಬೇಕು. ಕೆಲಸ, ಸ್ವಂತ ಉದ್ಯೋಗ ಮಾಡಲು ಸಹಕಾರವನ್ನು ಶ್ರೀಮಠ ಮಾಡಲಿದೆ ಎಂದು ಶ್ರೀಗಳು ಹೇಳಿದರು.
ಪಾಶ್ಚಿಮಾತ್ಯರು ಮದ್ಯವನ್ನು ಕಂಡು ಹಿಡಿದರೂ ಸಹ ಇಂದು ಭಾರತೀಯರೇ ಹೆಚ್ಚು ಮದ್ಯಕ್ಕೆ ದಾಸರಾಗಿರುವುದು ವಿಪರ್ಯಾಸ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಾನು ನನ್ನ 35 ವರ್ಷ ರಾಜಕೀಯ ಜೀವನದಲ್ಲಿ ಎಂದೂ ಮದ್ಯವನ್ನು ಹಂಚಿ ಚುನಾವಣೆಯನ್ನು ಮಾಡಿಲ್ಲ. ಆದರೂ ಜನ ನನಗೆ ಮತವನ್ನು ಹಾಕಿ ಗೆಲ್ಲಿಸಿದ್ದಾರೆ. ಪ್ರತಿಯೊಬ್ಬ ರಾಜಕಾರಣಿಯೂ ಚುನಾವಣೆ ಸಂದರ್ಭದಲ್ಲಿ ಇದರಿಂದ ಹೊರ ಬರಬೇಕು. 2021-22ನೇ ಸಾಲಿನಲ್ಲಿ ಸರ್ಕಾರಕ್ಕೆ 26630 ಸಾವಿರ ಕೋಟಿ ರು.ಮದ್ಯ ಮಾರಾಟದಿಂದ ಲಾಭಬಂದಿದ್ದು, ಇದಕ್ಕೆ ಪೂರಕವೆಂಬಂತೆ ಸಿ.ಎಲ್-7 ಎನ್ನುವ ಬಾರ್ ರೆಸ್ಟೋರೆಂಟ್‌ಗಳನ್ನು ಬಿಜೆಪಿ ಸರ್ಕಾರ ಹೊಸದಾಗಿ ಮಾಡುತ್ತಿದ್ದು, ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವಂತಹ ಕೆಲಸ ಎಂದು ಕುಟುಕಿದರು.
ಶಿಬಿರದಲ್ಲಿ ಕೌಶಲ್ಯಾಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧ್ ಹಾಲಪ್ಪ, ಜಿಲ್ಲಾ ನಿರ್ದೇಶಕ ಡಿ. ದಿನೇಶ್, ಶಿಬಿರದ ಅಧ್ಯಕ್ಷ ಎಚ್.ಎಸ್ ಪ್ರದೀಪ್‌ಕುಮಾರ್, ತಾಲೂಕು ಯೋಜನಾಧಿಕಾರಿ ಎಂ. ಬಾಲಕೃಷ್ಣ, ಜನಜಾಗೃತಿ ಸದಸ್ಯರಾದ ಎಲ್. ರಾಜಣ್ಣ, ಟಿ.ಕೆ ಜಗದೀಶ್, ಪಪಂ ಸದಸ್ಯ ಕೆ.ಎನ್ ನಟರಾಜ್, ತುಮುಲ್ ತಾಲೂಕು ನಿರ್ದೇಶಕ ಗುಂಡಿನಪಾಳ್ಯ ಈಶ್ವರಯ್ಯ ಸೇರಿದಂತೆ 65 ಶಿಬಿರಾರ್ಥಿಗಳು ಮತ್ತು ಅವರ ಕುಟುಂಬ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೌಕರರು ಇದ್ದರು.
ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿಷ್ಟವಾದ ಗೌರವವನ್ನು ಸೂಚಿಸಲಾಗುತ್ತದೆ. ಇಡೀ ಸಮಾಜ ಮತ್ತು ಮನೆಯನ್ನು ಸರಿದೂಗಿಸಿಕೊಂಡು ಹೋಗುವಂತಹ ಶಕ್ತಿ ಹೆಣ್ಣಿಗಿದೆ. ಆದರೆ ಮದ್ಯವ್ಯಸನಿಗಳು ನಿರಂತರವಾಗಿ ಹೆಣ್ಣಿನ ಮೇಲೆ ಶೋಷಣೆ ಮಾಡುತ್ತಿದ್ದಾರೆ. ಇದು ನಿಲ್ಲಬೇಕು, ಹೆಣ್ಣನ್ನು ಗೌರವಿಸಬೇಕು, ನಮ್ಮ ಬದುಕಿನಲ್ಲಿ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಹೆಣ್ಣಿನ ಪಾತ್ರ ಅತ್ಯಂತ ಮಹತ್ವ.
ಡಾ. ಹನುಮಂತನಾಥ ಸ್ವಾಮೀಜಿ ಪೀಠಾಧ್ಯಕ್ಷ, ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠ
ಬರುವ 25 ವರ್ಷಗಳಲ್ಲಿ ಬೆಂಗಳೂರು ವಿಶ್ವದ ನಂಬರ್ ಒನ್ ನಗರವಾಗಿ ಬೆಳೆಯಲಿದೆ.
ದೊಡ್ಡಬಳ್ಳಾಪುರ (ನ.27): ಬರುವ 25 ವರ್ಷಗಳಲ್ಲಿ ಬೆಂಗಳೂರು ವಿಶ್ವದ ನಂಬರ್ ಒನ್ ನಗರವಾಗಿ ಬೆಳೆಯಲಿದೆ. ದೇಶದ ವಾಣಿಜ್ಯ ಹಾಗೂ ತಾಂತ್ರಿಕ ಕೇಂದ್ರವಾಗಿ ಗಮನ ಸೆಳೆಯಲಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಬಳಗ ಆಯೋಜಿಸಿದ್ದ ಕೆಂಪೇಗೌಡರ ಪ್ರಗತಿ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಗಣ್ಯರಿಗೆ ಜನಾಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುವ ವ್ಯಕ್ತಿಯನ್ನು ಎಷ್ಟೇ ಶತಮಾನವಾದರೂ ಈ ನಾಡು ಮರೆಯುವುದಿಲ್ಲ. ಬೆಂಗಳೂರು ದೇಶದಲ್ಲೇ ನಂ.1 ನಗರವಾಗಿದೆ. ನಾನು ಐಟಿಬಿಟಿ ಸಚಿವನಾಗಿದ್ದರಿಂದ ಬೆಂಗಳೂರಿನ ಶಕ್ತಿ ತಿಳಿಯಲು ನನಗೆ ಸಾಧ್ಯವಾಯಿತು. ಇಂದು ಇಡೀ ವಿಶ್ವ ಎದುರು ನೋಡುವಂತೆ ಬೆಂಗಳೂರು ಬೆಳೆದು ನಿಂತಿದೆ ಎಂದು ಹೇಳಿದರು.
ಚಿಲುಮೆ ಸಂಸ್ಥೆಯನ್ನು ನಾನು ಬಳಸಿಲ್ಲ: ಸಚಿವ ಅಶ್ವತ್ಥ್ ನಾರಾಯಣ
ಪ್ರೇರೇಪಣೆಯ ಪ್ರಗತಿ ಪ್ರತಿಮೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಪ್ರಗತಿ, ಸಮೃದ್ಧಿಯ ಸಂಕೇತವಾಗಿದೆ.ವಿಮಾನ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬರಿಗೂ ಕೆಂಪೇಗೌಡರ ಪರಿಚಯವಾಗಲಿದೆ. ಸಮಾಜಕ್ಕೆ ಉತ್ತಮ ಸಂದೇಶ, ಪ್ರತಿಯೊಬ್ಬರಲ್ಲೂ ಸ್ಫೂರ್ತಿಯನ್ನು ಪ್ರೇರೇಪಿಸುವ ಪ್ರಗತಿ ಪ್ರತಿಮೆ 23 ಎಕರೆ ಜಾಗದಲ್ಲಿ ತಲೆ ಎತ್ತಿ ನಿಂತಿದೆ ಎಂದರು.
ಲಾಲ್‌ಬಾಗ್‌ಗೆ ಕೆಂಪೇಗೌಡರ ಹೆಸರು ನಾಮಕರಣಕ್ಕೆ ಒತ್ತಾಯ: ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗಿಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡುವಂತೆ ಸಾಕಷ್ಟುಒತ್ತಾಯ ಕೇಳಿಬಂದಿದೆ. ಅಭಿವೃದ್ಧಿಗೆ ಮತ್ತೊಂದು ಹೆಸರಾದ ಕೆಂಪೇಗೌಡರ ವ್ಯಕ್ತಿತ್ವ ಸಂಚಲನ ಮೂಡಿಸುವಂತಿದೆ ಎಂದು ಬಣ್ಣಿಸಿದರು. ಕೆಂಪೇಗೌಡರ ಮೃತ್ತಿಕೆ ಸಂಗ್ರಹ ರಥಯಾತ್ರೆಯು 22 ಸಾವಿರ ಕಿ.ಮೀ, ಕ್ರಮಿಸಿ 24 ಸಾವಿರ ಸ್ಥಳಗಳಿಂದ ಮೃತಿಕೆ ಸಂಗ್ರಹಿಸಲಾಯಿತು ಎಂದು ಹೇಳಿದರು.
ಪುಣ್ಯಕ್ಷೇತ್ರದ ಫಲ ಪ್ರಾಪ್ತಿ: ರಾಜ್ಯದ ಹಲವು ಪುಣ್ಯಕ್ಷೇತ್ರ, ಸಾಧುಸಂತರು, ದೇವಾಲಯಗಳ ಜಾಗದಿಂದ ಸಂಗ್ರಹಿಸಿರುವ ಮೃತಿಕೆಯಿಂದ ಪ್ರಗತಿ ಪ್ರತಿಮೆ ಸ್ಥಳ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಬಂದರೆ ಕರ್ನಾಟಕವನ್ನೇ ಸ್ಪರ್ಶ ಮಾಡಿದಂತಾಗುತ್ತದೆ. ರಥಯಾತ್ರೆ ವೇಳೆ 3.60 ಕೋಟಿ ಜನರು ಭಾಗವಹಿಸಿದ್ದರು. ಅ ಮೂಲಕ ದೇಶದಲ್ಲೇ ಇತಿಹಾಸ ಸೃಷ್ಟಿಸಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಕಾಂಗ್ರೆಸಿಗರ ವಿರುದ್ಧ ಮಾನನಷ್ಟ ಕೇಸ್: ಸಚಿವ ಅಶ್ವತ್ಥ್ ನಾರಾಯಣ ಎಚ್ಚರಿಕೆ
ಸಮಾರಂಭದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಲಾಯಿತು. ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಮಾಜಿ ಶಾಸಕ ಎಂ.ಕೃಷ್ಣಪ್ಪ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಧೀರಜ್ ಮುನಿರಾಜು, ಡಾ.ಆಂಜಿನಪ್ಪ, ದಿಬ್ಬೂರು ಜಯಣ್ಣ, ಟಿ.ವಿ.ಲಕ್ಷ್ಮಿನಾರಾಯಣ, ಎ.ನರಸಿಂಹಯ್ಯ, ಅ.ದೇವೇಗೌಡ, ಬಿ.ಸಿ.ನಾರಾಯಣಸ್ವಾಮಿ, ನಾಗೇಶ್, ಬಂತಿ ವೆಂಕಟೇಶ್, ಎಸ್.ಪದ್ಮನಾಭ್ ಮತ್ತಿತರರು ಪಾಲ್ಗೊಂಡಿದ್ದರು.