Bengaluru: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ, ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು!

By Gowthami KFirst Published Nov 29, 2022, 10:23 PM IST
Highlights

ತಮಿಳುನಾಡಿನಲ್ಲಿ ಮದುವೆ ಮುಗಿಸಿ ರಾತ್ರಿ ಮೆಜೆಸ್ಟಿಕ್ ನಿಂದ ಆಟೋ ಏರಿದ್ದ ದಂಪತಿ ಹೌಸಿಂಗ್ ಬೋರ್ಡ್ ನಲ್ಲಿ ಇಳಿದು ಚಿನ್ನದ ಬ್ಯಾಗ್ ಅನ್ನು ಆಟೋದಲ್ಲೇ ಮರೆತಿದ್ದರು. ಇದೀಗ ದಂಪತಿಗೆ ಚಿನ್ನ ಮರಳಿ ಸಿಕ್ಕಿದ್ದು, ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ.  ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ .

ಬೆಂಗಳೂರು (ನ.29): ತಮಿಳುನಾಡಿನಿಂದ ಬಂದಿದ್ದ ಗೋವಿಂದರಾಜನಗರದ ನಿವಾಸಿಯಾಗಿರುವ ಮಂಜುನಾಥ್ ದಂಪತಿ  ಆಟೋದಲ್ಲಿ ಮನೆ ಕಡೆ ತೆರಳಿದ್ರು. ತಮಿಳುನಾಡಿನಲ್ಲಿ ಮದುವೆ ಮುಗಿಸಿ ರಾತ್ರಿ ಮೆಜೆಸ್ಟಿಕ್ ನಿಂದ ಆಟೋ ಏರಿದ್ದ ದಂಪತಿ ಹೌಸಿಂಗ್ ಬೋರ್ಡ್ ನಲ್ಲಿ ಇಳಿದು ಬ್ಯಾಗ್ ಬಿಟ್ಟು ಹೋಗಿದ್ದರು. ಆಟೋದಲ್ಲೆ 250 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಬಿಟ್ಟು ಹೋಗಿದ್ದರು. ರಾತ್ರಿ  ಬ್ಯಾಗ್ ಮಿಸ್ಸಿಂಗ್ ಅರಿವಿಗೆ ಬಂದ ತಕ್ಷಣ  ಮಂಜುನಾಥ್ ದಂಪತಿ  ಗೋವಿಂದರಾಜನಗರ ಪೊಲೀಸರಿಗೆ ದೂರು ನೀಡಿದ್ದರು.  ಇತ್ತ ತನ್ನ ಗ್ರಾಹಕನಿಗೆ ಚಿನ್ನ ಹಿಂದಿರುಗಿಸಲು  ಆಟೋ ಚಾಲಕ ಹರೀಶ್ ಹುಡುಕುತ್ತಿದ್ದರು. ಆದರೆ ಸಿನೀಮಿಯ ಶೈಲಿಯಲ್ಲಿ ಪೊಲೀಸರು ಆಟೋಚಾಲಕ ಒಂದಾದರು. ಸರ್ ಈ ರೀತಿ ಚಿನ್ನ ಬಿಟ್ಟು ಹೋಗಿದ್ದಾರೆ ನಾನು ಕೂಡ‌ ಹುಡುಕ್ತಿದ್ದೆ ಎಂದು ಪೊಲೀಸರ ಬಳಿ  ಹೇಳಿದ ಆಟೋ ಚಾಲಕ ಹರೀಶ್. ಈ ವೇಳೆ ಠಾಣೆಗೆ ಆಟೋ ಚಾಲಕನನ್ನು ಕರೆತಂದು ಮಂಜುನಾಥ್ ನನ್ನು ಕರೆಸಿದ ಪೊಲೀಸರು.  ಗೋವಿಂದರಾಜನಗರ ಇನ್ಸ್ ಪೆಕ್ಟರ್ ಶಿವ ಪ್ರಸಾದ್ ಸಮ್ಮುಖದಲ್ಲಿ ಚಿನ್ನ ಕೊಟ್ಟ ಸಿಬ್ಬಂದಿ. ಮಾಲೀಕನಿಗೆ ಚಿನ್ನ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ, ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು.

ಆ್ಯಪ್‌ ಆಟೋಗಳಿಗೆ ದರ ನಿಗದಿಗೆ ಸೂಚನೆ: ಸರ್ಕಾರ
ಪರವಾನಗಿ ಹೊಂದಿರುವ ಅಗ್ರಿಗೇಟರ್‌ಗಳಿಗೆ (ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ) ಸ್ಥಳೀಯ ಆಟೋ ರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5 ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಲಾಗಿದೆ ಎಂದು ಸರ್ಕಾರ ಹೈಕೋರ್ಚ್‌ಗೆ ತಿಳಿಸಿದೆ.

ಬಳ್ಳಾರಿಯ ಆಟೋ ಚಾಲಕನನ್ನು ಮದುವೆಯಾದ ಬೆಲ್ಜಿಯಂ ಯುವತಿ

ಆ್ಯಪ್‌ ಆಧಾರಿತ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಲು ನಿರ್ದೇಶಿಸಿ ರಾಜ್ಯ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ, ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌, ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸವೀರ್‍ಸಸ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿದ್ದವು.

ದಕ್ಷಿಣ ಕನ್ನಡ: ಡಿ.1ರಿಂದ ಆಟೋ ಪ್ರಯಾಣ ದರ ಕನಿಷ್ಠ ದರ 35 ರು.

 

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಆಟೋ ದರ ನಿಗದಿಪಡಿಸಲು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಿ ಹೊರಡಿಸಿರುವ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿತು.

click me!