ಕೋಲಾರದಲ್ಲಿ ಧರ್ಮದಂಗಲ್‌: ಕುರಿಗಾಹಿ ಹಿಂದೂ ಮಹಿಳೆಯರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

By Sathish Kumar KH  |  First Published Mar 28, 2023, 4:24 PM IST

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಡ್ಡಗಲ್‌ ಗ್ರಾಮದಲ್ಲಿ ನಾಲ್ಕು ಕುರಿಗಾಹಿ ಹಿಂದೂ ಮಹಿಳೆಯರ ಮೇಲೆ ಮುಸ್ಲಿಂ ಯುವಕರು ಸುಖಾ ಸುಮ್ಮನೆ ದಾಳಿ ಮಾಡಿ ಪರಾರಿ ಆಗಿರುವ ಘಟನೆ ನಡೆದಿದೆ.


ಕೋಲಾರ (ಮಾ.28): ರಾಜ್ಯ ರಾಜಧಾನಿ ಬೆಂಗಳೂರಿನ ನೆರೆಹೊರೆ ಜಿಲ್ಲೆಯಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಡ್ಡಗಲ್‌ ಗ್ರಾಮದಲ್ಲಿ ನಾಲ್ಕು ಕುರಿಗಾಹಿ ಹಿಂದೂ ಮಹಿಳೆಯರ ಮೇಲೆ ಮುಸ್ಲಿಂ ಯುವಕರು ಸುಖಾ ಸುಮ್ಮನೆ ದಾಳಿ ಮಾಡಿ ಪರಾರಿ ಆಗಿರುವ ಘಟನೆ ನಡೆದಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ವಗ್ರಾಮ ಕೋಲಾರ ಜಿಲ್ಲೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಡ್ಡಗಲ್‌ ಗ್ರಾಮದಲ್ಲಿ ಹಿಂದೂ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮುಸ್ಲಿಂ ಯುವಕರಿಂದ ಜಾತಿನಿಂದನೆ ಮತ್ತು ಹಲ್ಲೆ ಸಂಬಂಧವಾಗಿ ಪ್ರಕರಣ ದಾಖಲು ಆಗಿದೆ. ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ನಾಲ್ಕು ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ. ಕುರಿ ಮೇಯಿಸುವ ವೇಳೆ ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಯುವಕರು ಹಿಂದೂ ಮಹಿಳೆಯರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ. ಇನ್ನು ಯಾವುದೇ ತಕರಾರು ಇಲ್ಲದಿದ್ದರೂ ಏಕಾಏಕಿ ಕುರಿ ಮೇಯಿಸುವ ಮಹಿಳೆಯರ ಮೇಲೆ ಹಲ್ಲೆನಡೆಸಿದ ಯುವಕರು ಈಗ ತಲೆಮರೆಸಿಕೊಂಡಿದ್ದಾರೆ. 

Latest Videos

undefined

ಶಿವಮೊಗ್ಗದಲ್ಲಿ ಮತ್ತೆ 'ಧರ್ಮ ದಂಗಲ್ ', ವಿಎಚ್‌ಪಿಯಿಂದ ಇಂದು ಭಜನಾ ಪ್ರತಿಭಟನೆ

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಮಹಿಳೆಯರು: ನಾಲ್ವರು ಹಿಂದೂ ಮಹಿಳೆಯರು ಕುರಿಗಳನ್ನು ಜಮೀನಿನಲ್ಲಿ ಮೇಯಿಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಅಡ್ಡಗಲ್ ಗ್ರಾಮದ ಯುವಕ ಅಲಿ ಹಾಗೂ ಆತನ ಸಹಚರರು ಬಂದು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಮೇಲೆ ಎದ್ದೇಳಲೂ ಬರದ ಸ್ಥತಿಯನ್ನು ತಲುಪಿದ್ದರು. ಆಗ, ದಾರಿ ಹೋಕರು ಕುರಿಗಾಹಿ ಮಹಿಳೆಯರು ನರಳುವುದನ್ನು ನೋಡಿ ಗರಾಮಸ್ಥರಿಗೆ ವಿಚಾರವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಹಲ್ಲೆಗೊಳಗಾದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಎಲ್ಲ ಗಾಯಾಳು ಕುರಿಗಾಹಿ ಮಹಿಳೆಯರು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಚುನಾವಣೆ ವೇಳೆ ಮುನ್ನೆಲೆಗೆ ಬಂದ ಧರ್ಮದಂಗಲ್: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಧರ್ಮ ದಂಗಲ್‌ ಆರಂಭವಾಗಿದೆ. ಈ ವಿಚಾರವಾಗಿ ಕರಾವಳಿ ಪ್ರದೇಶ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಹಲ್ಲೆ, ಕೊಲೆಗಳು ಕೂಡ ನಡೆದಿವೆ. ಕೋಲಾರದಲ್ಲಿ ಈಗಾಗಲೇ ಹಲವು ಜಾತ್ರೆಗಳಲ್ಲಿ ಹಾಗೂ ಹಬ್ಬಗಳ ಆಚರಣೆ ವೇಳೆ ಧರ್ಮದಂಗಲ್‌ ಮುನ್ನೆಲೆಗೆ ಬಂದಿದ್ದು, ಹಿಂದೂಗಳ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗಿತ್ತು. ಆದರೆ, ಈಗ ರಾಜ್ಯ ವಿಧಾನಸಭೆ ಮಾಜಿ ಸ್ಮೀಕರ್‌ ಆರ್. ರಮೇಶ್‌ ಕುಮಾರ್‌ ಅವರ ಸ್ವಗ್ರಾಮದಲ್ಲಿ ಧರ್ಮದಂಗಲ್‌ ವಿಚಾರಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. 

ಚಿಕ್ಕಮಗಳೂರು: ಚುನಾವಣಾ ಹೊತ್ತಲ್ಲಿ ಮತ್ತೆ ಮುನ್ನೆಲೆಗೆ ಬಂದ ಧರ್ಮ ದಂಗಲ್

ಜಿಲ್ಲಾಧಿಕಾರಿ ಕಚೇರಿ ಬಳಿ ಅಜಾನ್‌ ಕೂಗು:  ಮಲೆನಾಡು ಶಿವಮೊಗ್ಗದಲ್ಲಿ ಮತ್ತೆ ಧರ್ಮ ದಂಗಲ್‌ ಶುರು ಆಗಿದ್ದು, ಮುಸ್ಲಿಂ ದೇವರು ಅಲ್ಲಾಗೆ ಕಿವಿ ಕೇಳಲ್ವಾ, ಕಿವುಡಾ ಎಂದಿದ್ದ ಈಶ್ವರಪ್ಪ ವಿರುದ್ಧ ಮುಸ್ಲಿಂ ಸಮುದಾಯ ಕಿಡಿಕಾರಿದೆ. ಈಶ್ವರಪ್ಪ ಹೇಳಿಕೆ ವಿರುದ್ಧ ಶಿವಮೊಗ್ಗ ನಗರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೆಲ ದಿನಗಳ ಹಿಂದೆ ಎಸ್‌ಡಿಪಿಐ ನಾಯಕರು ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಮುಸ್ಲಿಂ ಯುವಕನೊಬ್ಬ ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಆಜಾನ್‌ ಕೂಗಿದ್ದಾನೆ. ಹೀಗಾಗಿ ಆಜಾನ್‌ ದಂಗಲ್‌ಗೆ ತಿರುಗೇಟು ನೀಡಲು ವಿಎಚ್‌ಪಿ ರೆಡಿಯಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಭಜನಾ ಪ್ರತಿಭಟನೆಯನ್ನೂ ಮಾಡಿತ್ತು.

click me!