ಬೆಂಗಳೂರಿನ ಸುತ್ತ ನಾಲ್ಕು ನವ ನಗರಗಳ ನಿರ್ಮಾಣ ತಮ್ಮ ಕನಸು ಎಂದು ಮುಖ್ಯಮಂತ್ರಿಗಳು ಈ ಪೈಕಿ ಒಂದು ನಗರ ಬಿಡದಿಯ ಬಳಿ ನಿರ್ಮಿಸುವುದು ತಮ್ಮ ಕನಸು. ಅಲ್ಲಿ ವಸತಿ, ಆರೋಗ್ಯ, ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ಒಳಗೊಂಡಂತೆ ಸಮಗ್ರವಾದ ನಗರ ನಿರ್ಮಾಣದ ಕಾರ್ಯ ಇನ್ನೊಂದು ವರ್ಷದಲ್ಲಿ ಆರಂಭವಾಗಲಿದೆ ಎಂದ ಸಿಎಂ ಬೊಮ್ಮಾಯಿ.
ರಾಮನಗರ(ಮಾ.28): ಬಿಡದಿಯಲ್ಲಿ ಸುಸಜ್ಜಿತ ಟೌನ್ ಶಿಪ್ ನಿರ್ಮಾಣದ ಜೊತೆಗೆ ನಮ್ಮ ಮೆಟ್ರೋ ಅನ್ನು ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಹೊರ ವಲಯದ ಅರ್ಚಕರಹಳ್ಳಿಯ ರಾಜೀವ್ ಗಾಂಧಿ ಆರೋಗ್ಯ ವಿವಿ ಆವರಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ , ಸರ್ಕಾರಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬೆಂಗಳೂರಿನ ಸುತ್ತ ನಾಲ್ಕು ನವ ನಗರಗಳ ನಿರ್ಮಾಣ ತಮ್ಮ ಕನಸು ಎಂದು ಮುಖ್ಯಮಂತ್ರಿಗಳು ಈ ಪೈಕಿ ಒಂದು ನಗರ ಬಿಡದಿಯ ಬಳಿ ನಿರ್ಮಿಸುವುದು ತಮ್ಮ ಕನಸು. ಅಲ್ಲಿ ವಸತಿ, ಆರೋಗ್ಯ, ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ಒಳಗೊಂಡಂತೆ ಸಮಗ್ರವಾದ ನಗರ ನಿರ್ಮಾಣದ ಕಾರ್ಯ ಇನ್ನೊಂದು ವರ್ಷದಲ್ಲಿ ಆರಂಭವಾಗಲಿದೆ ಎಂದರು.
ನಮ್ಮ ಮೆಟ್ರೋ ವೈಟ್‘ಫೀಲ್ಡ್’ಗೆ ಮೋದಿ ಚಾಲನೆ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಜತೆ ಸಂವಾದ
ಬೆಂಗಳೂರಿಗೆ ರಾಮನಗರ ಜಿಲ್ಲೆಯೊಂದಿಗೆ ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋದ ಮೂಲಕ ಸಂಪರ್ಕ ಕಲ್ಪಿಸುವ ಚಿಂತನೆ ನಡೆದಿದೆ. ಬಿಡದಿ ಮತ್ತು ಮಾಗಡಿ ಪಟ್ಟಣಗಳಿಗೆ ಮೆಟ್ರೋ ರೈಲು ಜೋಡಿಸಲು ತಮ್ಮ ಸರ್ಕಾರದ ಉದ್ದೇಶವಿದೆ ಎಂದರು.
ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗೋದಿಲ್ಲವಾ - ಬಸವರಾಜ ಬೊಮ್ಮಾಯಿ
ರಾಮನಗರ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಪ್ರಯತ್ನಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
14 ಸಾವಿರ ಕೋಟಿ ರು. ವೆಚ್ಚದಲ್ಲಿ ಬೆಂಗಳೂರು-ಮೈಸೂರು ರಾಷ್ಟಿ್ರಯ ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗಿದೆ. ಈ ಯೋಜನೆಗೆ 2014ರಲ್ಲಿ ಡಿಪಿಆರ್ ಸಿದ್ದವಾಯಿತು. ಆಗ ಅಧಿಕಾರದಲ್ಲಿ ನೀವಿದ್ದಿರಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಡಿಪಿಆರ್ ಸಿದ್ಧವಾದಾಗ ಪ್ರಧಾನಿಯಾಗಿ ಮೋದಿ ಅವರಿದ್ದರು. 2019ರಲ್ಲಿ ಟೆಂಡರ್ ಆಗಿದೆ. ಆಗ ನೀವಿದ್ದಿರಾ ಎಂದು ಕಾಂಗ್ರೆಸ್ಸಿಗರನ್ನು ಪುನಃ ಪ್ರಶ್ನಿಸಿದ ಬಸವರಾಜ ಬೊಮ್ಮಾಯಿರವರು ಆಗಲೂ ಪ್ರಧಾನಿಯಾಗಿ ಮೋದಿಯವರೇ ಇದ್ದರು. ಈಗ ಹೆದ್ದಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಈಗಲೂ ಮೋದಿಯವರೇ ಪ್ರಧಾನಿ ಆಗಿದ್ದಾರೆ. ಎಲ್ಲ ಹಂತಗಳಲ್ಲೂ ಪ್ರಧಾನಿ ಮೋದಿಯವರಿದ್ದಾರೆ. ಯಾರೋ ಮಾಡಿದ ಕೆಲಸವನ್ನು ನಾನು ಮಾಡಿದೆ ಎಂದು ಹೇಳಿಕೊಳ್ಳಲು ನಿಮಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.
ಯಾರೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಿ ಅದು ರಾಷ್ಟ್ರೀಯ ಸ್ವತ್ತು. ಈ ಭಾಗಕ್ಕೆ ಒಳ್ಳೆಯದಾಗಿದೆ ಎಂದು ಸಂತೋಷ ಪಡುವುದನ್ನು ಬಿಟ್ಟು, ಯುಪಿಎ ಕಾಲದಲ್ಲಾಗಿದೆ, ನಮ್ಮ ಕಾಲದಲ್ಲಾಗಿದೆ ಎಂದು ಹೇಳವುದು ಸರಿಯಲ್ಲ. ಸತ್ಯ ಎಂದಿಗೂ ಸತ್ಯವೇ, ಸತ್ಯಕ್ಕೆ ಎಂದಿಗೂ ಜಯ ಎಂದು ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಮಾತಿನ ಚಾಟಿ ಬೀಸಿದರು.
ರಾಮನಗರ ಶ್ರೀ ರಾಮನ ಮಹಿಮೆ ಉಳ್ಳ ಸ್ಥಳವಾಗಿದೆ. ಪುರಾಣದಲ್ಲಿ ಈ ಭಾಗ ಖ್ಯಾತಿಗಳಿಸಿದೆ. ಅದೇ ಖ್ಯಾತಿಯನ್ನು ಮರು ಸೃಷ್ಟಿಸುವುದು ತಮ್ಮ ಸರ್ಕಾರದ ಉದ್ದೇಶ. ಹೀಗಾಗಿ ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಮಂದಿರ ಕಟ್ಟುವುದು ಒಂದೆಡೆಯದರೆ ಮತ್ತೊಂದೆಡೆ ರಾಮರಾಜ್ಯವನ್ನು ನಿರ್ಮಿಸಿದರೆ ಸಾರ್ಥಕವಾಗುತ್ತದೆ. ನವ ಕರ್ನಾಟಕ ನಿರ್ಮಾಣದಿಂದ ನವ ಭಾರತವನ್ನು ನಿರ್ಮಿಸುವುದು ತಮ್ಮ ಪಕ್ಷದ ಉದ್ದೇಶ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಮ್ಮದು ಜನಪರ ಮಾನವೀಯತೆಯುಳ್ಳ ಸರ್ಕಾರ: ಸಿಎಂ ಬೊಮ್ಮಾಯಿ
ರಾಮನಗರ: ಒಂದು ಸರ್ಕಾರ ಪ್ರಜಾಪ್ರಭುತ್ವದಲ್ಲಿ ಜೀವಂತವಾಗಿದ್ದರೆ ಅದು ಜನರ ಬದುಕಿನ ಜೊತೆ ಜೀವಂತವಾಗಿರುತ್ತದೆ. ಕೇವಲ ಅಧಿಕಾರದಲ್ಲಿದ್ದರೆ ಅಥವಾ ವಿಧಾನಸೌಧದ ಕಟ್ಟಡದಲ್ಲಿ ಕುಳಿತು ಆಡಳಿತ ನಡೆಸುವುದು ಸರ್ಕಾರದ ಜೀವಂತಿಕೆ ಅಲ್ಲ. ನಮ್ಮದು ಜನಪರ ಹಾಗೂ ಮಾನವೀಯತೆ ಉಳ್ಳ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಹೊರ ವಲಯದ ಅರ್ಚಕರಹಳ್ಳಿಯ ರಾಜೀವ್ ಗಾಂಧಿ ಆರೋಗ್ಯ ವಿವಿ ಆವರಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ, ಸರ್ಕಾರಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾಡಿನ ಕಟ್ಟಕಡೆಯ ವ್ಯಕ್ತಿ ನಾವು ನೀಡಿದ ಕಾರ್ಯಕ್ರಮಗಳಿಂದ ತನ್ನು ಬದುಕನ್ನು ಸಬಲೀಕರಣ ಮಾಡಿಕೊಂಡು ಮುಂದೆ ಬಂದರೆ ಅದು ಸರ್ಕಾರದ ಜೀವಂತಿಕೆ ತೋರಿಸುತ್ತದೆ ಎಂದರು.
ಮೋದಿಯಿಂದ ಅಪೂರ್ಣ ಮೆಟ್ರೋ ಉದ್ಘಾಟನೆ: ಸುರ್ಜೇವಾಲಾ
ಹಿಂದಿನ ಸರ್ಕಾರಗಳ ಘೋಷಣೆಗಳು ಘೋಷಣೆಯಾಗಿಯೇ ಉಳಿಯುತ್ತಿತ್ತು. ಯಾವುದೂ ಅನುಷ್ಠಾನ ಆಗುತ್ತಿರಲಿಲ್ಲ. ಜನರನ್ನು ಭ್ರಮೆಯಲ್ಲಿ ಇಡುತ್ತಿದ್ದರು. ನಾವು ಘೋಷಣೆ ಮುಖಾಂತರ ಜನರನ್ನು ಭ್ರಮೆಯಲ್ಲಿಟ್ಟು ಆಡಳಿತ ನಡೆಸಿದ ದಿನಗಳನ್ನು ನೋಡಿದ್ದೇವೆ. ಬಡವರು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ಭಾಷಣಗಳನ್ನು ಮಾಡುತ್ತಿದ್ದರು. ಸಾಮಾಜಿಕ ನ್ಯಾಯ ಅಂತ ಹೇಳಿ ಹಿಂದುಳಿದವರು ಹಿಂದೆಯೇ ಉಳಿದಿದ್ದಾರೆ. ಯಾರು ಸಾಮಾಜಿಕ ನ್ಯಾಯದ ಭಾಷಣ ಮಾಡಿದರೊ ಅವರೆಲ್ಲ ಮುಂದೆ ಬಂದಿದ್ದಾರೆ ಎಂದರು.
ಭಾಷಣಗಳಿಂದ ಹೊಟ್ಟೆ ತುಂಬುವುದಿಲ್ಲ. ನ್ಯಾಯವೂ ಸಿಗುವುದಿಲ್ಲ. ಆ ಸಂದರ್ಭಕ್ಕೆ ಸಮಸ್ಯೆ ಬಗೆಹರಿಸಿ ಧೀಮಂತಿಕೆ ಪ್ರದರ್ಶಿಸಿದಾಗ ಜನರಿಗೆ ಉಪಯೋಗ ಆಗುತ್ತದೆ. ನಮ್ಮಲ್ಲಿ ಜನಪ್ರಿಯ ನಾಯಕರು ಬೇಕಾದಷ್ಟುಜನರಿದ್ದಾರೆ. ನಮಗೆ ಜನೋಪಯೋಗಿ ನಾಯಕರು ಬೇಕಾಗಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.