ಚಿಕ್ಕಮಗಳೂರು: ಕಿಡ್ನಾಪ್‌ ಯತ್ನ: ಚಾಣಾಕ್ಷ ಬಾಲಕ ಎಸ್ಕೇಪ್‌

Published : Mar 28, 2023, 12:56 PM ISTUpdated : Mar 28, 2023, 01:31 PM IST
ಚಿಕ್ಕಮಗಳೂರು: ಕಿಡ್ನಾಪ್‌ ಯತ್ನ: ಚಾಣಾಕ್ಷ ಬಾಲಕ ಎಸ್ಕೇಪ್‌

ಸಾರಾಂಶ

ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಯಲ್ಲಿ ಬಾಲಕನ ಅಪಹರಣಕ್ಕೆ ಈ ಯತ್ನ ನಡೆದಿದೆ. 

ಚಿಕ್ಕಮಗಳೂರು(ಮಾ.28): ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಇದ್ದಕ್ಕಿದ್ದಂತೆ ಎತ್ತಿಕೊಂಡು ಓಡಿದ ಕಿಡ್ನಾಪರ್‌ಗೆ ಅಷ್ಟೇ ಚಾಣಾಕ್ಷತನದಿಂದ ಬಾಲಕನೋರ್ವ ಚಳ್ಳೆಹಣ್ಣು ತಿನ್ನಿಸಿ ಅಪಹರಣಕಾರನಿಂದ ಪಾರಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಯಲ್ಲಿ ಬಾಲಕನ ಅಪಹರಣಕ್ಕೆ ಈ ಯತ್ನ ನಡೆದಿದೆ. ಫುಟ್‌ಪಾತ್‌ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಬಾಲಕನನ್ನು ಅಪಹರಿಸಲು ವ್ಯಕ್ತಿಯೋರ್ವ ಪ್ರಯತ್ನಿಸಿದ್ದಾನೆ. 

ಹುಡುಗಿ ಮೇಲೆ ಬಣ್ಣ ಹಾಕಿದ್ದಕ್ಕೆ ಕಿಡ್ನಾಪ್‌ ಮಾಡಿ ಥಳಿತ: ಹೋಳಿ ಆಚರಿಸಿದ್ದೇ ತಪ್ಪಾ.?

ಬಾಲಕನ್ನು ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ಸಾಗುತ್ತಿದ್ದ ವೇಳೆ, ಬಾಲಕ ಅವನ ಹಿಡಿತದಿಂದ ನುಸುಳಿ ಕೊಂಡವನೇ ಹೆಗಲಿನಿಂದ ಕೆಳಗೆ ಚಂಗನೆ ಹಾರಿ ಅಲ್ಲಿಂದ ಪರಾರಿ ಆಗಿದ್ದಾನೆ. ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು