ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದೀಗ ಧನ್ವಂತರಿ ಮಹಾಯಾಗವನ್ನು ಮಾಡಲಾಗಿದೆ.
ಬೆಂಗಳೂರು [ಮಾ.17]: ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್ (ಕೋವಿಡ್ 19) ಸೋಂಕು ನಿವಾರಣೆಗೊಂಡು ವಿಶ್ವಶಾಂತಿ ನೆಲೆಗೊಳ್ಳಲಿ ಎಂಬ ಉದ್ದೇಶದಿಂದ ವಿವಿಧೆಡೆ ವಿಶೇಷ ಧಾರ್ಮಿಕ ಕಾರ್ಯಗಳು ನಗರದಲ್ಲಿ ಜರುಗುತ್ತಿವೆ.
ಕೆಲ ದೇವಾಲಯಗಳಲ್ಲಿ ಲೋಕ ಕಲ್ಯಾಣಾರ್ಥವಾಗಿ ಹೋಮ ಹವನಗಳು, ವಿಶೇಷ ಪೂಜಾ ಕೈಂಕರ್ಯಗಳು ದೇವಾಲಯದಲ್ಲಿ ನಡೆಸಲಾಗುತ್ತಿದೆ.
undefined
ಕರ್ನಾಟಕ ರಾಜ್ಯ ವೀರಶೈವ ಅರ್ಚಕರು ಮತ್ತು ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ವಿಜಯನಗರ ಕ್ಲಬ್ ರಸ್ತೆಯಲ್ಲಿರುವ ಹರಿಹರೇಶ್ವರ ದೇವಾಲಯದಲ್ಲಿ ಬೆಳಗ್ಗೆ ಧನ್ವಂತರಿ ಮಹಾಯಾಗ ಮತ್ತು ಮಹಾ ಮೃತ್ಯುಂಜಯ ಹೋಮ ಮಾಡಲಾಯಿತು. ಈ ವೇಳೆ ಹರಿಹರೇಶ್ವರನಿಗೆ ವಿಶೇಷ ಅಭಿಷೇಕ, ಅಲಂಕಾರ ಮಾಡಲಾಗಿತ್ತು. 20ಕ್ಕೂ ಹೆಚ್ಚು ಅರ್ಚಕರ ನೇತೃತ್ವದಲ್ಲಿ ಹೋಮಗಳು ನೆರವೇರಿದವು.
ಸೋಂಕಿತರು ಗುಣಮುಖರಾದರೂ ಎರಡು ಪರೀಕ್ಷೆ ಬಳಿಕವೇ ಡಿಸ್ಚಾರ್ಜ್!...
ಈ ವೇಳೆ ವಿಶ್ವ ಹಾಗೂ ದೇಶ, ರಾಜ್ಯದ ಜನರಲ್ಲಿ ಶಾಂತಿ, ಸೌಹಾರ್ದತೆ, ಉತ್ತಮ ಆರೋಗ್ಯ ನೆಲೆಸಲಿ. ಕೊರೋನಾ ಸೋಂಕಿಗೆ ಔಷಧಿ ಸಂಶೋಧನೆಯಲ್ಲಿ ನಿರತರಾಗಿರುವ ವೈದ್ಯರಿಗೆ ಅವರ ಕಾರ್ಯದಲ್ಲಿ ಯಶಸ್ಸು ಲಭಿಸಲಿ. ನಾಡಿನ ಜನತೆಗೆ ಪರಿಪೂರ್ಣವಾದ ಆರೋಗ್ಯ ಉಂಟಾಗಲಿ ಎಂದು ಪ್ರಾರ್ಥಿಸಲಾಯಿತು.