ಕೊಲ್ಲೂರಿನಲ್ಲಿ ಡಿಜಿಪಿ ಕುಟುಂಬದಿಂದ ಚಂಡಿಕಾ ಹೋಮ

By Kannadaprabha NewsFirst Published Sep 25, 2019, 11:29 AM IST
Highlights

ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕುಟುಂಬ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಚಂಡಿಕಾ ಹೋಮ ಸೇರಿ ಇತರ ಸೇವೆ ಸಲ್ಲಿಸಿದ್ದಾರೆ. ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿದ ನೀಲಮಣಿ ರಾಜು ಅವರು ಪತಿ ಡಿ.ಎನ್‌.ನರಸಿಂಹರಾಜು ಅವರೊಂದಿಗೆ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.

ಉಡುಪಿ(ಸೆ.25): ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಮಂಗಳವಾರ ಕುಟುಂಬ ಸಮೇತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸೇವೆಗಳನ್ನು ಸಲ್ಲಿಸಿದ್ದಾರೆ. ಕುಟುಂಬ ಸಮೇತ ಮಂಗಳವಾರ ಮುಂಜಾನೆ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿದ ನೀಲಮಣಿ ರಾಜು ಅವರು ಪತಿ ಡಿ.ಎನ್‌.ನರಸಿಂಹರಾಜು ಅವರೊಂದಿಗೆ ಚಂಡಿಕಾ ಹೋಮದಲ್ಲಿ ಪಾಲ್ಗೊಂಡಿದ್ದಾರೆ.

ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನೀಲಮಣಿ ಅವರನ್ನು ದೇವಾಲಯದ ಆಡಳಿತದಿಂದ ಗೌರವಿಸಲಾಯಿತು. ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹಾಜರಿದ್ದರು. ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಿದ್ದಾರೆ.

ಮಂಗಳೂರು: 'ಮೈ ಬೀಟ್ ಮೈ ಪ್ರೈಡ್' ರಾಜ್ಯಕ್ಕೂ ವಿಸ್ತರಣೆ

ಮಂಗಳೂರಿನಲ್ಲಿ ಜಾರಿಗೆ ತಂದಿರುವ ಹೊಸ ಬೀಟ್ ವ್ಯವಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ನೀಲಮಣಿ ರಾಜು ಅವರು, ನಾಗರಿಕರು ಮತ್ತು ಪೊಲೀಸರ ಮಧ್ಯೆ ಸೇತುವಾಗಿ ಈ ಬೀಟ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿರುವುದನ್ನು ತಿಳಿದುಕೊಂಡಿದ್ದಾರೆ.  ‘ನನ್ನ ಬೀಟ್-ನನ್ನ ಹೆಮ್ಮೆ’ ಎಂಬ ಹೊಸ ಸ್ವರೂಪದ ಪೊಲೀಸ್ ಬೀಟ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆಯೂ ಅವರು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಸ್ವಚ್ಛ ಭಾರತ್ ದಿವಸ್: ರಾಜ್ಯದಿಂದ 200 ಸಾಧಕರು ಆಯ್ಕೆ

click me!