ಆದಷ್ಟು ಬೇಗ ಡ್ರಗ್ಸ್ ಮುಕ್ತವಾಗಲಿದೆ ಕರ್ನಾಟಕ: ಪ್ರವೀಣ್‌ ಸೂದ್

By Suvarna NewsFirst Published Sep 3, 2020, 3:17 PM IST
Highlights

ಯಾವುದೇ ಜಿಲ್ಲೆ ಯಾವುದೇ ರಾಜ್ಯದ ಗಡಿಗೆ ಹೊಂದಿಕೊಂಡಿದ್ರೂ ಸಮಸ್ಯೆ ಇಲ್ಲ| ಗಡಿ ಜಿಲ್ಲೆಗಳಲ್ಲಿ ಡ್ರಗ್ಸ್‌ ಒಳ ಬಾರದಂತೆ ಹೇಗೆ ತಡೆಯಬೇಕು ಮತ್ತು ಹೇಗೆ ಹತೋಟಿಗೆ ತರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ| ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಮಗೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ: ಡಿಜಿ ಹಾಗೂ ಐಜಿಪಿ ಪ್ರವೀಣ್‌|

ವಿಜಯಪುರ(ಸೆ.03): ಬೆಂಗಳೂರು ಸಿಟಿ ಸೇರಿದಂತೆ ಆಯಾ ವಲಯವಾರಿನಲ್ಲಿ ಸಾಕಷ್ಟು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಹಲವೆಡೆ ದಾಳಿ ನಡೆಸಿ ಡ್ರಗ್ಸ್‌ ಸೀಜ್ ಮಾಡಲಾಗಿದೆ. ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಐಜಿಪಿಗಳಿಗೆ ಹಾಗೂ ಆಯಾ ಜಿಲ್ಲಾ ಎಸ್‌ಪಿಗಳಿಗೆ ಸೂಚಿಸಿದ್ದೇನೆ. ಡ್ರಗ್ಸ್‌ ಮಾಫಿಯಾ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದೆ, ನಡೆಯುತ್ತಲೇ ಇರುತ್ತದೆ. ಆದಷ್ಟು ಬೇಗ ಡ್ರಗ್ಸ್ ಮುಕ್ತವಾಗಲಿದೆ ಕರ್ನಾಟಕ ಎಂದು ಡಿಜಿ ಹಾಗೂ ಐಜಿಪಿ ಪ್ರವೀಣ್‌ ಸೂದ್ ಅವರು ಹೇಳಿದ್ದಾರೆ.

ಮಹಾರಾಷ್ಟ್ರ, ಆಂಧ್ರಕ್ಕೆ ರಾಜ್ಯದ ಜಿಲ್ಲೆಗಳು ಹೊಂದಿಕೊಂಡ ವಿಚಾರದ ಬಗ್ಗೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಜಿಲ್ಲೆ ಯಾವುದೇ ರಾಜ್ಯದ ಗಡಿಗೆ ಹೊಂದಿಕೊಂಡಿದ್ರೂ ಸಮಸ್ಯೆ ಇಲ್ಲ. ಗಡಿ ಜಿಲ್ಲೆಗಳಲ್ಲಿ ಡ್ರಗ್ಸ್‌ ಒಳ ಬಾರದಂತೆ ಹೇಗೆ ತಡೆಯಬೇಕು ಮತ್ತು ಹೇಗೆ ಹತೋಟಿಗೆ ತರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಡ್ರಗ್ಸ್ ಜಾಲ : ಮತ್ತೊಂದಿಷ್ಟು ಸೀಕ್ರೇಟ್ಸ್ ಹೇಳಿದ್ರು ಸಂಬರಗಿ

ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಮಗೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ. ಡ್ರಗ್ಸ್ ಪತ್ತೆ ಹಚ್ಚುವುದು, ತಡೆಗಟ್ಟುವ ಕೆಲಸ ಮಾಡುತ್ತಲೇ ಇದ್ದೇವೆ. ಡ್ರಗ್ಸ್ ಮುಕ್ತ ರಾಜ್ಯ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಿಂದ ಆದಷ್ಟು ಬೇಗ ಡ್ರಗ್ಸ್ ಅನ್ನು ಹೊರಹಾಕಲಿದ್ದೇವೆ ಎಂದು ಹೇಳಿದ್ದಾರೆ.
 

click me!