ರಾಯಚೂರು: ಕಚೇರಿಯಲ್ಲಿ ಇಸ್ಪೀಟ್ ಆಡಿದ್ದ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮಾನತು

Suvarna News   | Asianet News
Published : Sep 03, 2020, 03:01 PM ISTUpdated : Sep 03, 2020, 03:05 PM IST
ರಾಯಚೂರು: ಕಚೇರಿಯಲ್ಲಿ ಇಸ್ಪೀಟ್ ಆಡಿದ್ದ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮಾನತು

ಸಾರಾಂಶ

ಸರ್ಕಾರಿ ಶಿಕ್ಷಕರ ಸಂಘದ ಕಾರ್ಯಾಲಯದಲ್ಲಿ ಒಸ್ಟೀಟ್ ಆಡ್ತಿದ್ದ ಶಿಕ್ಷಕ ವೀರಭದ್ರಪ್ಪ ಅಮಾನತು| ಏಗನೂರು ದಂಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸ್ತಿದ್ದ ಅಮಾನತು ಆಗಿರುವ ವೀರಭದ್ರಪ್ಪ| ವೀರಭದ್ರಪ್ಪ ವಿರುದ್ಧ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು| 

ರಾಯಚೂರು(ಸೆ.03): ಅಕ್ರಮ ಕೂಟ ರಚಿಸಿ ಇಸ್ಪೀಟ್ ಆಡಿದ್ದ ಸರ್ಕಾರಿ ಪ್ರಾಥಮಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮಾನತು ಆದ ಘಟನೆ ಇಂದು(ಗುರುವಾರ) ನಡೆದಿದೆ. ವೀರಭದ್ರಪ್ಪ ಎಂಬುವರೇ ಅಮಾನತು ಆಗಿರುವ ಶಿಕ್ಷಕರಾಗಿದ್ದಾರೆ.

ತಾಲೂಕಿನ ಏಗನೂರು ದಂಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸ್ತಿದ್ದ ವೀರಭದ್ರಪ್ಪ ಅವರು ಸರ್ಕಾರಿ ಶಿಕ್ಷಕರ ಸಂಘದ ಕಾರ್ಯಾಲಯದಲ್ಲಿ ಇಸ್ಟೀಟ್ ಆಡುತ್ತಿದ್ದರು. ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದರಿಂದ ವೀರಭದ್ರಪ್ಪ ವಿರುದ್ಧ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ರಾಯಚೂರು: ಡ್ರಗ್‌ ಪಾರ್ಕ್ ಸ್ಥಾಪನೆ, ಶ್ರೀರ್ಘ ಮೋದಿ ಬಳಿಗೆ ನಿಯೋಗ ಸಚಿವ ಶೆಟ್ಟರ್‌ 

ದೂರಿನ ಆಧಾರದ ಮೇಲೆ ಡಿಡಿಪಿಐ ಬಿ. ಎಚ್. ಗೋನಾಳ್ ಅವರು ವೀರಭದ್ರಪ್ಪನನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!