ಸಿದ್ದರಾಮಯ್ಯ ಸರ್ವ ಸ್ವತಂತ್ರರು, ಎಲ್ಲಿಗೆ ಬೇಕಾದ್ರೂ ಹೋಗಲಿ : ಸಚಿವ ಸುಧಾಕರ್

By Kannadaprabha News  |  First Published Sep 3, 2020, 2:05 PM IST

ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ. ಅವರು ಸ್ವತಂತ್ರರು ಎಲ್ಲಾದರೂ ಹೋಲಿ ಎಂದಿದ್ದಾರೆ.


ಚಿಕ್ಕಬಳ್ಳಾಪುರ (ಸೆ.03):  ಬೆಂಗಳೂರಿಗೆ ಗಲಭೆಗೆ ಕಾರಣವಾಗಿದ್ದ ಕೆಜಿಹಳ್ಳಿ ಹಾಗೂ ಡಿಜೆಹಳ್ಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬೇಟಿ ಕುರಿತು ಮಾತನಾಡಿದ ಸಚಿವ ಸುಧಾಕರ್ ಅವರು ಸರ್ವ ಸ್ವತಂತ್ರರು ಎಂದರು.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಯಾರು ಎಲ್ಲಿ ಬೇಕಾದರೂ ಹೋಗಬಹುದು. ಅವರು ಸರ್ವ ಸ್ವತಂತ್ರರರು. ಕೊರೊನಾದಿಂದ ಬೇರೆ ಗುಣಮುಖರಾಗಿದ್ದಾರೆ. ಎಲ್ಲಿಗೆ ಬೇಕಾದರೂ ಹೋಗಲಿ, ಡಿಜೆಹಳ್ಳಿ ಕೂಡ ಭಾರತದಲ್ಲಿ ಇದೆ ಎಂದರು.

Tap to resize

Latest Videos

2 ವರ್ಷದೊಳಗೆ ವಸತಿ ರಹಿತರಿಗೆ ಸೂರು

ಮುಂದಿನ ಎರಡು ವರ್ಷದೊಳಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವಸತಿ ಹಾಗು ನಿವೇಶನ ರಹಿತರಿಗೆ ಸ್ವಂತ ಸೂರು ಕಲ್ಪಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ಗಲಭೆ ನಡೆದಿದ್ದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಸಿದ್ದರಾಮಯ್ಯ ರೌಂಡ್ಸ್: ಬಳಿಕ ಹೇಳಿದ್ದು ಹೀಗೆ

ಜಿಪಂ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 15 ಸಾವಿರ ಮಂದಿ ವಸತಿ ಹಾಗು ನಿವೇಶನ ರಹಿತರು ಇದ್ದು 1,027 ಎಕರೆ ಸರ್ಕಾರಿ ಜಾಗ ಗುರುತಿಸಿದ್ದು ಶೀಘ್ರದಲ್ಲಿ ನಿವೇಶನ ಹಂಚಲಾಗುವುದೆಂದರು.

ಸಿಎಂ ಲಂಚ್‌ ಮೀಟಿಂಗ್: ಹೋಟೆಲ್‌ನಲ್ಲಿ ಆಪ್ತರ ಜತೆ ಬಿಎಸ್‌ವೈ ಮಹತ್ವದ ಚರ್ಚೆ .

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಪ್ರತಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಘಟಕ ಸ್ಥಾಪಿಸುವ ಗುರಿ ಹೊಂದಲಾಗಿದೆ. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ದಿಗೆ ಕ್ರಮ ವಹಿಸಲಾಗುವುದು ವಿಶೇಷವಾಗಿ ಸರ್ಕಾರಿ ಶಾಲಾ, ಅಂಗನವಾಡಿ ಕೇಂದ್ರಗಳಲ್ಲಿ ಕಾಂಪೌಂಡ್‌, ಕೈ ತೋಟ, ಶೌಚಾಲಯ ನಿರ್ಮಾಣ ಮತ್ತಿತರ ಕಾರ್ಯಗಳನ್ನು ಕೈಗೆತ್ತಿಕೊಂಡು ಗುಣಮಟ್ಟದ ಶಿಕ್ಷಣಕ್ಕ ಹೆಚ್ಚಿನ ಆಧ್ಯತೆ ನೀಡಲಾಗುವುದೆಂದ ಸಚಿವ ಸುಧಾಕರ್‌, ನರೇಗಾದಡಿ ಸಮುದಾಯದ ಅಭಿವೃದ್ದಿ ಕಾಮಗಾರಿಗಳಿಗೆ ಒತ್ತು ಕೊಡಲಾಗುವುದು. ಈಗಾಗಲೇ ಜಿಲ್ಲೆ ಇಡೀ ರಾಜ್ಯದಲ್ಲಿ 37 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಪ್ರಥಮವಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಜೀವ್‌ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದರು. ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ ಎಂದರು.

click me!