ಭಕ್ತಾದಿಗಳು ದೇವರ ದರ್ಶನಕ್ಕೆ ಸೇರುವುದು, ಧಾರ್ಮಿಕ ಆಚರಣೆ ಮಾಡುವುದು ಹಾಗೂ ಸಮಾರಂಭ ನಿಷೇಧ|ಆಯಾ ದೇವಸ್ಥಾನದ ದೈನಂದಿನ ಪೂಜಾ ಕಾರ್ಯಗಳನ್ನು ಅರ್ಚಕರು, ಪುರೋಹಿತರು ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದವರು ಮಾತ್ರ ಕೋವಿಡ್ -19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ನಿರ್ವಹಿಸಬೇಕು: ಡಿಸಿ ನಿತೇಶ ಕೆ. ಪಾಟೀಲ|
ಧಾರವಾಡ(ಮಾ.19): ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ, ಭಕ್ತಾದಿಗಳ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ.
ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿರುವ ಮುಜರಾಯಿ ಹಾಗೂ ಮುಜರಾಯಿಯೇತರ ದೇವಸ್ಥಾನಗಳಲ್ಲಿ 500 ಕ್ಕಿಂತ ಹೆಚ್ಚಿಗೆ ಸಾರ್ವಜನಿಕರು, ಭಕ್ತಾದಿಗಳು ದೇವರ ದರ್ಶನಕ್ಕೆ ಸೇರುವುದು, ಧಾರ್ಮಿಕ ಆಚರಣೆ ಮಾಡುವುದು ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ.
undefined
ಕೊರೋನಾ ನಿಯಮ ಉಲ್ಲಂಘಿಸಿದ ನಾಲ್ವರು ವಿಮಾನದಿಂದ ಹೊರಕ್ಕೆ
ಆದರೆ, ಆಯಾ ದೇವಸ್ಥಾನದ ದೈನಂದಿನ ಪೂಜಾ ಕಾರ್ಯಗಳನ್ನು ಅರ್ಚಕರು, ಪುರೋಹಿತರು ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದವರು ಮಾತ್ರ ಕೋವಿಡ್ -19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ.