ರಾಯರ ದರ್ಶನಕ್ಕೆ ನೀಡಿದ ಅವಕಾಶ ರದ್ದು, ಮತ್ತೊಂದು ಡೇಟ್ ಫೀಕ್ಸ್

By Suvarna News  |  First Published Jun 30, 2020, 3:45 PM IST

ರಾಯರ ದರ್ಶನಕ್ಕೆ ನೀಡಿದ ಅವಕಾಶ ರದ್ದು ಮಾಡಲಾಗಿದೆ. ರಾಯರ ದರ್ಶನಕ್ಕೆ ನಿಗದಿಪಡಿಸಿದ ದಿನಾಂಕ ಮುಂದೂಡಲಾಗಿದೆ.


ರಾಯಚೂರು(ಜೂ.30): ರಾಯರ ದರ್ಶನಕ್ಕೆ ನೀಡಿದ ಅವಕಾಶ ರದ್ದು ಮಾಡಲಾಗಿದೆ. ರಾಯರ ದರ್ಶನಕ್ಕೆ ನಿಗದಿಪಡಿಸಿದ ದಿನಾಂಕ ಮುಂದೂಡಲಾಗಿದೆ. ಜುಲೈ 2ರಿಂದ ಮಂತ್ರಾಲಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಈಗ ಇದನ್ನು ರದ್ದು ಮಾಡಲಾಗಿದೆ.

ಈಗ ಮತ್ತೆ ಭಕ್ತರ ದರ್ಶನಕ್ಕೆ ಬ್ರೇಕ್ ಹಾಕಿದ ಮಂತ್ರಾಲಯ ಮಠದ ಆಡಳಿತ ಮಂಡಳಿ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ದರ್ಶನಕ್ಕೆ ಮಂತ್ರಾಲಯ ಮಠ ಬ್ರೇಕ್ ಹಾಕಿದೆ.

Latest Videos

undefined

ಕೊಡಗು, ಕೇರಳಕ್ಕೆ ರಾಯರ ಮಠದಿಂದ ತಲಾ 15 ಲಕ್ಷ

ಶ್ರೀಮಠದ ಭಕ್ತರು, ಶಿಷ್ಯ ಹಾಗೂ ತಜ್ಞರ ಸೂಚನೆ ಮೇರೆ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಇರುವುದರಿಂದ ಶ್ರೀಮಠ ‌ದರ್ಶನಕ್ಕೆ ಬ್ರೇಕ್ ಹಾಕಿದೆ.

ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಹೋಮ ನಡೆದಿತ್ತು. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ (ಮಾ.20) ರಂದು ಶ್ರೀಮಠವನ್ನು ಬಂದ್‌ ಮಾಡಿ, ಭಕ್ತರು ಬಾರದಂತೆ ನಿರ್ಬಂಧನೆ ಏರಲಾಗಿತ್ತು.

ಕೇಂದ್ರ ಸರ್ಕಾರದ ಸೂಚನೆಯಂತೆ ಜೂ.8ರಿಂದ ಮಠ ಆರಂಭವಾಗಬೇಕಾಗಿತ್ತು. ಆದರೆ ವೈರಸ್‌ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಠದಲ್ಲಿ ಮತ್ತಷ್ಟು ಮುಂಜಾಗೃತ ಕ್ರಮ ವಹಿಸುವ ನಿಟ್ಟಿನಲ್ಲಿ ಭಕ್ತರ ಆಗಮನಕ್ಕೆ ಅವಕಾಶ ನೀಡಿಲ್ಲ. ಆದರೆ, ಮಠದ ಅಧಿಕಾರಿ, ಸಿಬ್ಬಂದಿ ಹಾಗೂ ಸ್ಥಳೀಯರು ರಾಯರ ದರ್ಶನ ಪಡೆಯುತ್ತಿದ್ದಾರೆ. ಈ ಸಮಯದಲ್ಲಿಯೇ ಸೂರ್ಯಗ್ರಹಣ ಬಂದಿದ್ದು, ಭಕ್ತರಿಗೆ ಅವಕಾಶವಿಲ್ಲದ ಕಾರಣಕ್ಕೆ ಶ್ರೀಮಠದ ಪಂಡಿತರು, ವಿದ್ವಾಂಸರು ಹಾಗೂ ಸಿಬ್ಬಂದಿ ಗ್ರಹಣದ ವಿಶೇಷ ಪೂಜೆ ನೆರವೇರಿಸಿದ್ದರು.

click me!