ನನ್ನ ಹುಡುಗಿ ಜೊತೆಗೆ ಮದುವೆ ಮಾಡಿಸೆಂದು ಬಾಳೆ ಹಣ್ಣಿನಲ್ಲಿ ದೇವರಿಗೆ ಬೇಡಿಕೆ ಇಟ್ಟ ಭಕ್ತ!

By Suvarna News  |  First Published May 23, 2022, 10:52 PM IST

ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಭಕ್ತನೊಬ್ಬ ವಿಚಿತ್ರ ಮಾದರಿಯಲ್ಲಿ ಹರಕೆ ಸಲ್ಲಿಸಿದ್ದಾನೆ. ಭಕ್ತನೋರ್ವ ನಮ್ಮ ಹುಡುಗಿ ನನ್ನ ಮದುವೆಯಾಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದಿದ್ದಾರೆ.


ತುಮಕೂರು (ಮೇ.23) : ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಭಕ್ತರು ದೇವರಿಗೆ ಹರಿಕೆ ಸಲ್ಲಿಸುವುದು ಸಹಜ ಸಮಾನ್ಯ ಹರಿಕೆ ತೀರಿಸುವ ವಿಧಾನ ಮಾರ್ಗಗಳು ಕೂಡ ಹತ್ತು ಹಲವು. ಇದೇ ರೀತಿ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಭಕ್ತನೊಬ್ಬ ವಿಚಿತ್ರ ಮಾದರಿಯಲ್ಲಿ ಹರಕೆ ಸಲ್ಲಿಸಿದ್ದಾನೆ. ತಿಪಟೂರು ನಗರದಲ್ಲಿರುವ ಕೆಂಪಮ್ಮ ದೇವಿಯ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯಲ್ಲಿ ರಥೋತ್ಸವ ಎಳೆಯಲಾಗುತ್ತದೆ. ಈ ವೇಳೆ ಭಕ್ತನೋರ್ವ "ನಮ್ಮೂಡುಗಿ ಜೊತೆಗೆ ನನ್ನ ಮದುವೆಯಾಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದಿದ್ದಾನೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇಷ್ಟಾರ್ಥ ನೆರವೇರಿಸುವ ಕೆಂಪಮ್ಮ ದೇವಿ: ಭಕ್ತರ ಇಷ್ಟಾರ್ಥಗಳನ್ನು ಬಗೆ ಹರಿಸುವ ಕೆಂಪಮ್ಮ ದೇವಿ (Kempamma devi) ಯ ಪವಾಡದ ಬಗ್ಗೆ ಭಕ್ತರಲ್ಲಿ ಅಪಾರವಾದ ನಂಬಿಕೆಯಿದೆ. ದೇವಿಗೆ ಶ್ರದ್ಧಾ ಭಕ್ತಿಯಿಂದ ಹರಿಕೆ ಅರ್ಪಿಸಿದರೆ ಇಷ್ಟಾರ್ಥಗಳು ಬಗೆಹರಿಯಲಿವೆ ಎಂಬ ನಂಬಿಕೆಯಿದೆ. ಹೀಗಾಗಿ ಭಕ್ತ ತಮ್ಮ ಕಷ್ಟಗಳನ್ನು ದೇವಿಯ ಎದುರು ನಿವೇದನೆ ಮಾಡಿಕೊಂಡು ಪರಿಹಾರ ಕಂಡು ಕೊಂಡಿದ್ದಾರೆ. ಅದೇ ರೀತಿ ಯುವಕನೋರ್ವ ಬಾಳೇಹಣ್ಣಿನ ಮೇಲೆ ಬೇಡಿಕೆ ಬರೆದು ದೇವಿಗೆ ನಿವೇದನೆ ಮಾಡಿಕೊಂಡಿದ್ದಾನೆ.

Tap to resize

Latest Videos

Karnataka MLC polls: ಹಿರಿಯ ಕಾಂಗ್ರೆಸ್ಸಿಗ SR Patilಗೆ ಸಿಗುತ್ತಾ ಪರಿಷತ್ ಸ್ಥಾನ

6 ತಿಂಗಳ ನಂತರ ಕುಣಿಗಲ್ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರ ಹಿಂದೆ ದುರಂತ ಪ್ರೇಮದ ಕಥೆ: ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ವ್ಯಾಪ್ತಿಯ ಅರಣ್ಯ ಪ್ರದೇಶವೊಂದರಲ್ಲಿ ಯುವಕನ ಅಸ್ಥಿಪಂಜರ ಪತ್ತೆಯಾಗಿದೆ. ಇದರ ಜಾಡು ಹಿಡಿದು ಹೋದ ಪೊಲೀಸರಿಗೆ ಆರು ತಿಂಗಳ ಹಿಂದೆ ಕಾಣೆಯಾದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರೀತಿಸಿದ ಯುವತಿಯ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬೇಸತ್ತ ಪ್ರಿಯತಮ ಅರಣ್ಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು 6 ತಿಂಗಳ ನಂತರ ಆತನ ಅಸ್ಥಿ ಪಂಜರ ಪತ್ತೆಯಾಗಿದೆ. ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದಿಂದ ಮಾಗಡಿಗೆ ಹೋಗುವ ಮಾರ್ಗಮಧ್ಯದ ಕಾಡುಶನೇಶ್ವರ ದೇವಾಲಯದ ಹಿಂಭಾಗದ ಕಾಡಿನ ಬಂಡೆ ಬಳಿ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ಅಸ್ಥಿಪಂಜರ ಸಿಕ್ಕಿದೆ.

ವಾಹನದ ಸಂಖ್ಯೆ ಆಧರಿಸಿ ಮೃತನ ವಿಳಾಸ ಪತ್ತೆಯಾಗಿದ್ದು, ಮೃತ ವ್ಯಕ್ತಿ ಅರಮನೆ ಹೊನ್ನಮಾಚನಹಳ್ಳಿಯ ಸಂತೋಷ (28) ಎಂದು ಗುರುತಿಸಲಾಗಿದೆ. 

ಕಾಫಿನಾಡಿನಲ್ಲಿ ಸರಳ ಸಾಮೂಹಿಕ ವಿವಾಹ, ದಲಿತರ ಸಾಂಸ್ಕೃತಿಕ ವೈಭವದ

ಘಟನೆ ಹಿನ್ನೆಲೆ
ಸಂತೋಷ್ ಕೆಬ್ಬಳಿಯ ನಿವಾಸಿ ಶಾಲಿನಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ, ವಿವಾಹಕ್ಕೆ ಪೋಷಕರು ನಿರಾಕರಿಸಿದ ಕಾರಣ ಶಾಲಿನಿ ಕಳೆದ ಅಕ್ಟೋಬರ್ 25 ರಂದು ವಿಷ ಸೇವಿಸಿದ್ದರು. ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ 27 ರಂದು ಕೊನೆಯುಸಿರೆಳೆದಿದ್ದರು.

ಇದರಿಂದ ಮನನೊಂದಿದ್ದ ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಇವರ ಮನೆಯವರು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಉಳಿದುಕೊಂಡಿದ್ದ. ಸಂತೋಷ್ ವಿಷ ಸೇವಿಸಿದ್ದಾನೆ ಎನ್ನುವುದನ್ನು ಅರಿತ ಶಾಲಿನಿ ಕೂಡಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಪ್ರೇಯಸಿ ಇನ್ನಿಲ್ಲ ಎನ್ನುವುದನ್ನು ಅರಿತ ಸಂತೋಷ್, ಆರು ತಿಂಗಳ ಹಿಂದೆ ರಾಜೇಂದ್ರಪುರ ಅರಣ್ಯ ಪ್ರದೇಶದಲ್ಲಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದ. ಪೊಲೀಸರಿಗೆ ದೂರು ದಾಖಲಾಗಿದ್ದರೂ, ಆತನ ಸುಳಿವು ಸಿಕ್ಕಿರಲಿಲ್ಲ.

 ಬಳಿಕ ಆರು ತಿಂಗಳ ಹಿಂದೆ ಸಂತೋಷ್ ಎನ್ನುವ ಯುವಕ ನಾಪತ್ತೆಯಾಗಿದ್ದಾನೆ ಎಂದು ಆತನ ಮನೆಯವರು ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ರಾಜೇಂದ್ರಪುರ ಅರಣ್ಯ ವ್ಯಾಪ್ತಿಯಲ್ಲಿ ಬೈಕ್ ಒಂದು ಪತ್ತೆಯಾಗಿತ್ತು. ಇದು ಕಾಣೆಯಾದ ಯುವಕನದ್ದೇ ಎಂದು ಖಚಿತ ಪಡಿಸಿಕೊಂಡಿದ್ದ ಪೊಲೀಸರಿಗೆ ಯುವಕನ ಸುಳಿವು ಸಿಕ್ಕಿರಲಿಲ್ಲ. ಶುಕ್ರವಾರ (ಮೇ 20) ದನ ಮೇಯಿಸುವವರು ಅಸ್ಥಿಪಂಜರ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು. ಈಗ, ಆ ಅಸ್ಥಿಪಂಜರ ಕಾಣೆಯಾಗಿದ್ದ ಯುವಕ ಸಂತೋಷ್ ಎನ್ನುವವನದ್ದೇ ಎಂದು ಪೊಲೀಸರಿಗೆ ತಿಳಿದು ಬಂದಿದೆ.

click me!