* ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ ಬಳಿ ದಿಢೀರ್ ಪ್ರತಿಭಟನೆ
* ಸೋಷಿಯಲ್ ಮೀಡಿಯಾಗೆ ಹಾಕಿದ್ದ ಪೋಸ್ಟ್
* ಹರಿಹರದಲ್ಲಿ ರಾತ್ರೋ ರಾತ್ರಿ ಬಿಗುವಿನ ವಾತಾವರಣ
ದಾವಣಗೆರೆ(ಫೆ.08): ಸಾಮಾಜಿಕ ಜಾಲತಾಣದಲ್ಲಿ(Social Media) ತಮ್ಮ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆಯೆಂದು ಆರೋಪಿಸಿ ಒಂದು ಕೋಮಿನ ಜನರು ಹರಿಹರದ ನಗರ ಪೊಲೀಸ್ ಠಾಣೆ ಎದುರು ಸೋಮವಾರ ರಾತ್ರಿ ದಿಢೀರ್ ಪ್ರತಿಭಟನೆ(Protest) ನಡೆಸಿದರಲ್ಲದೇ, ಪೊಲೀಸ್ ಜೀಪು ಮೇಲೆ ಕಲ್ಲು ತೂರಾಡಿದ್ದರಿಂದ ವಾಹನ ಜಖಂಗೊಂಡ ಘಟನೆಯೂ ವರದಿಯಾಗಿದೆ.
ಹರಿಹರ(Harihara) ನಗರ ಪೊಲೀಸ್ ಠಾಣೆಯ ಎದುರು ಸೋಮವಾರ ರಾತ್ರಿ ಜಮಾಯಿಸಿದ ಒಂದು ಕೋಮಿನ ಉದ್ರಿಕ್ತ ಜನರು ಘೋಷಣೆ ಕೂಗುತ್ತಿದ್ದರೆ, ಕೆಲವರು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ(Stone Pelting) ನಡೆಸಲಾರಂಭಿಸಿದರು. ಠಾಣೆಯ ಮುಂಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೊಂದು ಕೋಮಿನ ಯುವಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಬಂಧಿಸಿ, ತಮ್ಮ ಕೈಗೆ ನೀಡುವಂತೆ ಒತ್ತಾಯಿಸಿ ಕೆಲವರು ಘೋಷಣೆ ಕೂಗ ತೊಡಗಿದರು.
undefined
ಮಂಗಳೂರು: ದೇವಸ್ಥಾನದ ಹುಂಡಿ ದೋಚಿ, ಕಾಂಡೋಮ್ ಹಾಕಿದ ದುಷ್ಕರ್ಮಿಗಳು
ಪೊಲೀಸರು(Police) ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ಉದ್ರಿಕ್ತರಾಗಿದ್ದ ಜನರು ತಮ್ಮ ಹೋರಾಟ ಮುಂದುವರಿಸಿದ್ದರು. ವಿಷಯ ತಿಳಿದ ಎರಡು ಕೋಮುಗಳ ಮುಖಂಡರು ಸ್ಥಳಕ್ಕೆ ದೌಡಾಯಿಸಿ, ಎರಡೂ ಕಡೆಯವರನ್ನು ಪೊಲೀಸ್ ಅಧಿಕಾರಿಗಳೊಂದಿಗೆ ಸೇರಿಕೊಂಡು ಸಮಾಧಾನ ಪಡಿಸಿದರು.
ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ತಮ್ಮ ವಶಕ್ಕೆ(Arrest) ಪಡೆದಿದ್ದು, ತನಿಖೆ ನಡೆಸುತ್ತಾರೆ. ನೀವೆಲ್ಲರೂ ಶಾಂತಿ ಕಾಪಾಡುವಂತೆ ಸುಮಾರು ಹೊತ್ತು ಮನವಿ ಮಾಡಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಇದೇ ವೇಳೆ ಗುಂಪಿನಲ್ಲಿದ್ದ ಕೆಲವರು ಪಾಕಿಸ್ತಾನದ(Pakistan) ಪರ ಜಯಘೋಷ ಮೊಳಗಿಸಿದರೆಂಬ ಆರೋಪವೂ ಕೇಳಿ ಬರುತ್ತಿದೆ. ಉಭಯ ಸಮುದಾಯಗಳ ಮುಖಂಡರು, ಪೊಲೀಸ್ ಅಧಿಕಾರಿಗಳ ಮನವಿ ಮೇರೆಗೆ ಪರಿಸ್ಥಿತಿ ತಿಳಿಗೊಂಡಿದೆ. ಆದರೆ, ಹರಿಹರದಲ್ಲಿ ಬಿಗುವಿನ ಸ್ಥಿತಿ ಮುಂದುವರಿದಿದ್ದು, ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.
ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೂದಿ ಮುಚ್ಚಿದ ಕೆಂಡಂತಹ ವಾತಾವರಣವಿದ್ದು, ಹಿರಿಯ ಅಧಿಕಾರಿಗಳೂ ಭೇಟಿ ನೀಡಿದ್ದು, ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‌ಗೆ ಕಳಿಸಿರುವ ಸಾಧ್ಯತೆಗಳಿವೆ. ಘಟನೆಯಲ್ಲಿ ಕೆಲವು ವಾಹನಗಳು, ಪೊಲೀಸ್ ಜೀಪು ಜಖಂಗೊಂಡಿದ್ದು, ವಾಹನದ ಗಾಜುಗಳು ಪುಡಿ ಪುಡಿಯಾಗಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.
ಕೊರಗಜ್ಜನ ನಂತರ ಮತ್ತೆ ದಕ್ಷಿಣ ಕನ್ನಡದಲ್ಲಿ ಹಿಂದು ದೇವರ ಅವಹೇಳನ
ಪುತ್ತೂರು: ತುಳುನಾಡಿನ(Tulu Nadu) ಆರಾಧ್ಯ ದೈವ ಕೊರಗಜ್ಜನ(Koragajja) ಕುರಿತು ಮುಸ್ಲಿಂ(Muslim) ಸಮುದಾಯದ ಮದುವೆಯ ಔತಣಕೂಟದಲ್ಲಿ ಅಪಮಾನ ಮಾಡಿದ ಬೆನ್ನಲ್ಲೇ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಮತ್ತೊಂದು ಇಂತಹದ್ದೇ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು.
ಸೋಶಿಯಲ್ ಮೀಡಿಯಾಗೆ ಮೂಗುದಾರ, ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಎಚ್ಚರ!
ಜ.10 ರಂದು ಈ ಘಟನೆ ನಡೆದಿತ್ತು. ಪುತ್ತೂರು ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದು, ಗೋಮಾತೆ(Cow), ಹಿಂದು ದೇವರ(Hindu God) ಬಗ್ಗೆ ಅಪಮಾನಕಾರಿಯಾಗಿ ಉಲ್ಲೇಖಿಸಿದ್ದಾರೆ. ಇವರ ವಿರುದ್ಧ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು.
ಈತ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ(Dr Veerendra Heggade) ಹಾಗೂ ಬ್ರಾಹ್ಮಣ ಸಮುದಾಯದ(Brahmin Community) ಬಗ್ಗೆಯೂ ಅಶ್ಲೀಲ ಪದ ಬಳಸಿ ಬರೆದಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ತಕ್ಷಣ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದರು.