ಕುವೆಂಪು ವಿವಿ ಉಪ ಕುಲ ಸಚಿವರ ವಜಾಗೊಳಿಸಿ ಆದೇಶ

By Suvarna News  |  First Published Apr 16, 2021, 10:50 AM IST

ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪದ ಅಡಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಉಪ ಕುಲ ಸಚಿವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ನೀಡಲಾಗಿದೆ. 


ಶಿವಮೊಗ್ಗ (ಏ.16):  ಕುವೆಂಪು ವಿವಿಯ ಪ್ರಾಧಿಕಾರಗಳ ವಿಭಾಗದ ಪಭಾರ ಉಪ ಕುಲಸಚಿವ ಎಂ.ಸೀತಾರಾಮ ಅವರನ್ನು ಕೆಲಸದಿಂದ  ವಜಾಗೊಳಿಸಿ  ವಿವಿಯ ಕುಲಸಚಿವ ಪ್ರೊ . ಎಸ್.ಎಸ್.ಪಾಟೀಲ್ ಆದೇಶ ನೀಡಿದ್ದಾರೆ. 

ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪಕ್ಕೆ ಗುರಿಯಾಗಿದ್ದ  ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಸೀತಾರಾಮ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಏಪ್ರಿಲ್ 15ರ ಗುರುವಾರ ಸೀತಾರಾಮ ಅವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ನೀಡಲಾಗಿದೆ. 

Tap to resize

Latest Videos

 ಸೀತಾರಾಮ ಅವರು ಪಡೆದಿದ್ದ ಪರಿಶಿಷ್ಟ ಪಂಗಡದ ಮಾಲೇರು ಜಾತಿ ಪ್ರಮಾಣ  ಪತ್ರವನ್ನು ಉಡುಪಿ ಡಿಸಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷ ಜಿ.ಜಗದೀಶ್ ಅವರು ರದ್ದು ಪಡಿಸಿದ್ದಾರೆ.  ಹೀಗಾಗಿ ಸೀತಾರಾಮರನ್ನು ಪ್ರಭಾರ ಉಪಕುಸಚಿವ ಹುದ್ದೆಯಿಂದ ವಜಾಗೊಳಿಸಲಾಗಿದೆ .

ಕುವೆಂಪು ವಿವಿ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವೇ? ಚಾನ್ಸಲರ್ ಸ್ಪಷ್ಟನೆ ...

 ಸೀತಾರಾಮರವರು 1989 ನ .4 ಕ್ಕೆ  ಕುವೆಂಪು ವಿವಿಯಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಗೆ ನಿಗದಿಯಾದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದರು. ಆನಂತರ ಬಡ್ತಿ ಪಡೆದು ಪ್ರಭಾರ ಉಪಕುಲಸಚಿವ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.  

ಇದೀಗ ಸೀತಾರಾಮ  ನೇಮಕಾತಿ ಸಂದರ್ಭದಲ್ಲಿ ವಿವಿಗೆ ಸಲ್ಲಿಸಿರುವ ಪರಿಶಿಷ್ಟ ಪಂಗಡ ಮಾಲೇರು ಜಾತಿ ಪ್ರಮಾಣ ಪತ್ರ ನಕಲಿ ಎಂಬುದು ದೃಢಪಟ್ಟಿದೆ.

 ಈ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನದ ಪ್ರಕಾರ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲಾದ ಹುದ್ದೆ ಪಡೆದು ವಿವಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ  ಆರೋಪವು ಎದುರಾಗಿದ್ದು, ಕೆಲಸದಿಂದ ವಜಾಗೊಳಿಸಲಾಗಿದೆ. 

click me!