'ಚುನಾವಣೆ ನೀತಿ ಸಂಹಿತೆ ಉಲ್ಲಂಘಣೆ, ಸಿಎಂ ಬಿಎಸ್‌ವೈ ವಿರುದ್ಧ ದೂರು'

Kannadaprabha News   | Asianet News
Published : Apr 16, 2021, 10:15 AM IST
'ಚುನಾವಣೆ ನೀತಿ ಸಂಹಿತೆ ಉಲ್ಲಂಘಣೆ, ಸಿಎಂ ಬಿಎಸ್‌ವೈ ವಿರುದ್ಧ ದೂರು'

ಸಾರಾಂಶ

ಹಾಸನ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಿಂದ ಹಣ ಹಂಚಲು ಬಿಜೆಪಿ ತಂಡ ಬಂದಿದೆ| ಜನರನ್ನು ದುಡ್ಡು ಕೊಟ್ಟು ಖರೀದಿ| ಪೊಲೀಸ್‌, ಇಲ್ಲಿನ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ನಡೆಸುತ್ತಿದ್ದಾರೆ| ಮಸ್ಕಿ ಮತದಾರರು ಪ್ರಬುದ್ಧರಿದ್ದಾರೆ. ಇಲ್ಲಿನ ಜನರು ಸ್ವಾಭಿಮಾನಿಗಳಿದ್ದು, ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಲಿದ್ದಾರೆ: ಡಿಕೆಶಿ| 

ಮಸ್ಕಿ(ಏ.16): ಬಿಜೆಪಿ ವಾಮ ಮಾರ್ಗದಲ್ಲಿ ಚುನಾವಣೆ ಮಾಡುತ್ತಿದೆ. ಹಣ, ಹೆಂಡದ ಹೊಳೆ ಹರಿಸುವ ಮೂಲಕ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಕ್ರಮ ಎಸಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

ಮಸ್ಕಿ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಹಾಸನ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಿಂದ ಹಣ ಹಂಚಲು ಬಿಜೆಪಿ ತಂಡ ಬಂದಿದೆ. ಜನರನ್ನು ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಪೊಲೀಸ್‌, ಇಲ್ಲಿನ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ನಡೆಸುತ್ತಿದ್ದಾರೆ. ಆದರೆ, ಮಸ್ಕಿ ಮತದಾರರು ಪ್ರಬುದ್ಧರಿದ್ದಾರೆ. ಇಲ್ಲಿನ ಜನರು ಸ್ವಾಭಿಮಾನಿಗಳಿದ್ದು, ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಲಿದ್ದಾರೆ. ಬೆಳಗಾವಿ, ಬಸವಕಲ್ಯಾಣ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಬಂದಿರೋದ್ರಿಂದ ಕಾಂಗ್ರೆಸ್‌ಗೆ ಸೋಲಿನ ಭಯ ಹೆಚ್ಚಾಗಿದೆ: ವಿಜಯೇಂದ್ರ

ಸಿಎಂ ವಿರುದ್ಧ ದೂರು ಕೊಡುತ್ತೇವೆ:

ಸಿಎಂ ಯಡಿಯೂರಪ್ಪ ಜಾತಿವಾರು ಸಭೆಗಳನ್ನು ಆಯೋಜನೆ ಮಾಡಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ವೀರಶೈವ ಸೇರಿ ಇತರೆ ಜಾತಿಗಳ ಸಭೆ ಮಾಡುವ ಮೂಲಕ ಆಮಿಷ ಹುಟ್ಟಿಸಿದ್ದಾರೆ. ಸಿಎಂ ಆಗಿ ಹೀಗೆ ಜಾತಿವಾರು ಸಭೆ ಮಾಡುವುದು ಕಾನೂನು ಬಾಹಿರ. ಈ ಬಗ್ಗೆ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್‌ ಪಕ್ಷದಿಂದಲೂ ಈ ಬಗ್ಗೆ ದೂರು ಕೊಡುತ್ತೇವೆ ಎಂದು ತಿಳಿಸಿದ್ದಾರೆ.
 

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ