ಕೊರೋನಾ ತಡೆಗೆ ಅಗ್ನಿಹೋತ್ರ ಹೋಮ ಮಾಡಲು ಆದೇಶಿಸುವೆ: ಬಿಎಸ್‌ವೈ

Kannadaprabha News   | Asianet News
Published : Apr 16, 2021, 09:17 AM IST
ಕೊರೋನಾ ತಡೆಗೆ ಅಗ್ನಿಹೋತ್ರ ಹೋಮ ಮಾಡಲು ಆದೇಶಿಸುವೆ: ಬಿಎಸ್‌ವೈ

ಸಾರಾಂಶ

ಅಗ್ನಿಹೋತ್ರ, ಧನ್ವಂತರಿ ಸುದರ್ಶನ ಹೋಮದ ಕಾರ್ಯಕ್ರಮದಲ್ಲಿ ಭಾಗವಹಿಸದ ಸಿಎಂ ಯಡಿಯೂರಪ್ಪ| ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದಲ್ಲಿ ಆಯೋಜಿಸಿದ್ದ ಹೋಮ| ಅಗ್ನಿಹೋತ್ರ ಹೋಮ ಮಾಡುವುದರಿಂದ ಕೊರೋನಾ ದೂರ ಮಾಡಬಹುದು: ಹುಕ್ಕೇರಿ ಹಿರೇಮಠದ ಶ್ರೀಗಳು| 

ಬೆಳಗಾವಿ(ಏ.16): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಕಾಡುತ್ತಿರುವಾಗಲೇ ಕೆಲ ಜಿಲ್ಲೆಯಲ್ಲಿ ನೈಟ್‌ ಕರ್ಫ್ಯೂ ಹಾಕಲಾಗಿದೆ. ಬೆಂಗಳೂರಿಗೆ ಹೋದ ಮೇಲೆ ಮತ್ತಷ್ಟು ಕ್ರಮ ಕೈಗೊಳ್ಳಲು ಅಧಿಕಾರಿಗಳ ಜತೆ ಸಭೆ ನಡೆಸಲಿದ್ದೇನೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ನಗರದ ಹುಕ್ಕೇರಿ ಹಿರೇಮಠದಲ್ಲಿ ಗುರುವಾರ ಆಯೋಜಿಸಿದ್ದ ಅಗ್ನಿಹೋತ್ರ, ಧನ್ವಂತರಿ ಸುದರ್ಶನ ಹೋಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹುಕ್ಕೇರಿ ಹಿರೇಮಠದ ಶ್ರೀಗಳು ಅಗ್ನಿಹೋತ್ರ ಹೋಮ ಮಾಡುವುದರಿಂದ ಕೊರೋನಾ ದೂರ ಮಾಡಬಹುದು ಎಂದಿದ್ದಾರೆ. ಇದನ್ನು ಎಲ್ಲ ಕಡೆ ಮಾಡಲು ಆದೇಶ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕೊರೋನಾ ತಡೆಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಹೋಮ, ಹವನ!

ಬರುವ ದಿನಗಳಲ್ಲಿ ಕೊರೋನಾ ಮಹಾಮಾರಿ ದೂರವಾಗಬೇಕೆಂದು ಮಠಾಧೀಶರು ಆಶೀರ್ವಾದ ಮಾಡಬೇಕು. ಶ್ರೀಗಳ ಅಣತೆ, ಮಾರ್ಗದರ್ಶನದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ. 
 

PREV
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ