Tumakur : 6ನೇ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

By Kannadaprabha News  |  First Published Oct 7, 2023, 8:52 AM IST

ಜನಸಂಖ್ಯಾ ಸಂಶೋಧನಾ ಕೇಂದ್ರ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಆಧ್ಯಯನ ಸಂಸ್ಥೆ ನಾಗರಬಾವಿ, ಬೆಂಗಳೂರು ವತಿಯಿಂದ ಭಾರತ ಸರ್ಕಾರದ ಪ್ರತಿಷ್ಠಿತ 6ನೇ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.


ತುಮಕೂರು: ಜನಸಂಖ್ಯಾ ಸಂಶೋಧನಾ ಕೇಂದ್ರ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಆಧ್ಯಯನ ಸಂಸ್ಥೆ ನಾಗರಬಾವಿ, ಬೆಂಗಳೂರು ವತಿಯಿಂದ ಭಾರತ ಸರ್ಕಾರದ ಪ್ರತಿಷ್ಠಿತ 6ನೇ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಇದರ ಮೊದಲ ಭಾಗವಾಗಿ ಮನೆಗಳ ಪಟ್ಟಿ ತಯಾರಿಸಲು ನಕ್ಷೆ ಮತ್ತು ಅಂಕಿ ಅಂಶ ತಂಡ ನವೆಂಬರ್ 15 ರವರೆಗೆ ಹಳ್ಳಿ/ಪಟ್ಟಣಕ್ಕೆ ಭೇಟಿ ನೀಡಲಿದೆ. ಇವರಿಗೆ ಬೇಕಾದ ಕುಟುಂಬದ ಮಾಹಿತಿಯನ್ನು ನೀಡಿ ಭಾರತ ದೇಶದಲ್ಲಿ ನಡೆಯುವ ಈ ಅತೀ ಮುಖ್ಯವಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

Latest Videos

undefined

2ನೇ ಹಂತದ ಕುಟುಂಬ ಸಮೀಕ್ಷೆಯನ್ನು ಜನವರಿಯಿಂದ ಪ್ರಾರಂಭ ಮಾಡಲಾಗುವುದು. ಈ ಸಮೀಕ್ಷೆಯಲ್ಲಿ ಜನಸಂಖ್ಯಾ ಹಾಗೂ ಆರೋಗ್ಯ ವಿಷಯಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಕಲೆ ಹಾಕಲಾಗುತ್ತದೆ. ಸಮುದಾಯದ ಹಾಗೂ ಸ್ಥಳೀಯ ಸಂಸ್ಥೆಗಳು ಸಹಕರಿಸಿ ಕುಟುಂಬ ಆರೋಗ್ಯ ಸಮೀಕ್ಷೆ ಸಂಪೂರ್ಣಗೊಳಿಸಲು ಕೊರಿದ್ದಾರೆ.

ವಿದ್ಯುತ್ ವ್ಯತ್ಯಯ

ತುಮಕೂರು: ನಗರ ಉಪವಿಭಾಗ-2 ರ ಸರಸ್ವತಿಪುರಂ ಶಾಖಾ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಅಕ್ಟೋಬರ್ 9, 11, 16 ಮತ್ತು 18 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮೆಳೆಕೋಟೆ, ಸದಾಶಿವನಗರ, ವೀರಸಾಗರ, ನಜರಾಬಾದ್, ಬನಶಂಕರಿ, ಬನಶಂಕರಿ ೨ನೇ ಹಂತ, ಅಮರಜ್ಯೋತಿ ನಗರ, ಉಪ್ಪಾರಹಳ್ಳಿ, ಶಾಂತಿನಗರ, ಗೂಡ್ಸ್ ಶೆಡ್ ಕಾಲೋನಿ, ವಿಶ್ವಣ್ಣ ಲೇ ಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹರಿಸಬೇಕೆಂದು ಬೆವಿಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. ೯೪೪೯೮೪೪೨೯೬ನ್ನು ಸಂಪರ್ಕಿಸಬಹುದಾಗಿದೆ.

ವಿದ್ಯುತ್ ಬಿಲ್ ಬಾಕಿ10 ೧೦ ತಾಲೂಕುಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ ೭೫೮.೭೪ ಕೋಟಿ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದು, ನಿಗಧಿತ ಸಮಯದಲ್ಲಿ ವಿದ್ಯುತ್ ಬಾಕಿಯನ್ನು ಪಾವತಿ ಮಾಡದೇ ಇರುವ ವಿವಿಧ ಸರ್ಕಾರಿ ಇಲಾಖೆಯ ಸ್ಥಾವರಗಳನ್ನು ಕಡಿತಗೊಳಿಸಲಾಗುವುದು ಎಂದು ಬೆವಿಕಂ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.

ಕುಂದುಕೊರತೆ ನಿವಾರಣಾ ಸಮಿತಿ: ಅರ್ಜಿ ಆಹ್ವಾನ

ತುಮಕೂರು: ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಕುಂದುಕೊರತೆ ನಿವಾರಣಾ ಸಮಿತಿಯನ್ನು5 ವರ್ಷಗಳ ಅವಧಿಗೆ ರಚಿಸಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ 65 ವರ್ಷದೊಳಗಿನ ನಿವೃತ್ತ ಸಿವಿಲ್ ನ್ಯಾಯಾಧೀಶರು ಅಧ್ಯಕ್ಷರ ಹುದ್ದೆಗೆ, 65 ವರ್ಷದೊಳಗಿನ ರಾಜ್ಯ ಸರ್ಕಾರದ ನಿವೃತ್ತ ಎ ದರ್ಜೆ ಅಧಿಕಾರಿಯು ಸ್ಥಳೀಯ ಸದಸ್ಯರ ಹುದ್ದೆಗೆ ಹಾಗೂ ಬೀದಿ ವ್ಯಾಪಾರವನ್ನೊಳಗೊಂಡ ಅನೌಪಚಾರಿಕ ಆರ್ಥಿಕ ಕ್ಷೇತ್ರದಲ್ಲಿ ಅನುಭವ ಹೊಂದಿರುವ ೬೫ ವರ್ಷದೊಳಗಿನ ಸಾಮಾಜಿಕ ಕಾರ್ಯಕರ್ತರು ಸ್ಥಳೀಯ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತುಮಕೂರು ಮಹಾನಗರಪಾಲಿಕೆಯ ವೆಬ್‌ಸೈಟ್ ನಲ್ಲಿ ನೋಡಬಹುದಾಗಿದೆ ಎಂದು ಪಾಲಿಕೆಯ ಉಪ ಆಯುಕ್ತರು ತಿಳಿಸಿದ್ದಾರೆ.

ಕಿರುಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ದಿನಪತ್ರಿಕೆ ಹಂಚಿಕೆ ಮಾಡುವ ಮತ್ತು ಹಾಲು ಮಾರಾಟ ಮಾಡುವವರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಕಿರುಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯೊಂದಿಗೆ ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ, ಆಧಾರ್ ಕಾರ್ಡ್, ಪತ್ರಿಕೆ ಹಂಚಿಕೆ ಮಾಡುತ್ತಿರುವ / ಹಾಲು ಮಾರಾಟ ಮಾಡುತ್ತಿರುವ ಫೋಟೋ, ಕುಟುಂಬದ ಭಾವಚಿತ್ರವನ್ನು ಲಗತ್ತಿಸಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ತುಮಕೂರು ಮಹಾನಗರಪಾಲಿಕೆಯ ಡೇ-ನಲ್ಮ್ ಶಾಖೆ ಅಥವಾ ಮೊಬೈಲ್ ಸಂಖ್ಯೆ: ೯೧೪೧೬೯೯೯೮೩, ೯೫೩೫೧೩೨೫೭೫ನ್ನು ಸಂಪರ್ಕಿಸಬಹುದಾಗಿದೆ ಎಂದು ಪಾಲಿಕೆಯ ಉಪ ಆಯುಕ್ತರು ತಿಳಿಸಿದ್ದಾರೆ.

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ

ತುಮಕೂರು: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ೨೦೨೩-೨೪ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಬೆಸ್ತ, ಅಂಬಿಗ/ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ, ಮೊಗವೀರ ಮತ್ತು ಇದರ ಉಪ ಜಾತಿಗಳಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು), ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ), ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ನವೆಂಬರ್ ೩, ೨೦೨೩ ಕಡೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ/ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ದೂರವಾಣಿ ಸಂಖ್ಯೆ: ೦೮೧೬-೨೦೦೫೦೦೮ ಸಂಪರ್ಕಿಸಬಹುದು.

ನಿವೃತ್ತ ಸೈನಿಕ ನಾಪತ್ತೆ

ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ೮೪ ವರ್ಷದ ಕಲ್ಲಪ್ಪ ಹೆಚ್.ಕೆ. ಎಂಬ ನಿವೃತ್ತ ಸೈನಿಕನು ಸೆಪ್ಟೆಂಬರ್ ೨೬, ೨೦೨೩ರ ರಾತ್ರಿ ೭.೩೦ರ ಸಮಯದಿಂದ ನಾಪತ್ತೆಯಾಗಿದ್ದಾನೆ ಎಂದು ಈತನ ಮಗ ಠಾಣೆಗೆ ದೂರು ನೀಡಿದ್ದಾರೆ.

ಈತನು ೫.೮ ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ತಿಳಿ ಕೇಸರಿ ಬಣ್ಣದ ಜುಬ್ಬ ಮತ್ತು ಬಿಳಿ ಪೈಜಾಮ ಹಾಗೂ ಕೇಸರಿ ಬಣ್ಣದ ಟೋಪಿ ಧರಿಸಿದ್ದನು. ಈತನು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ. ೦೮೧೬-೨೨೮೧೧೨೪, ೨೨೮೧೧೨೦, ೨೨೭೨೫೪೧, ಮೊ.ಸಂ.೯೪೮೦೮೦೨೯೫೨, ೮೪೫೩೪೦೫೦೮೬ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‌ ಪೆಕ್ಟರ್‌ ಮನವಿ ಮಾಡಿದ್ದಾರೆ.

ನಾಳೆ ವಿದ್ಯುತ್ ವ್ಯತ್ಯಯ

ತುಮಕೂರು: ಬೆವಿಕಂ ನಗರ ಉಪ ವಿಭಾಗ-೧ಕ್ಕೆ ಸಂಬಂಧಿಸಿದಂತೆ ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಭಾನುವಾರ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಡಿಸಿ ಆಫೀಸ್, ಕೋರ್ಟ್ ಆವರಣ, ಶ್ರೀರಾಮನಗರ, ಶಂಕರಪುರಂ, ಬಿ.ಹೆಚ್.ರಸ್ತೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

ಇಂದು ನಾರಾಯಣಗುರು ಜಯಂತ್ಯುತ್ಸವ

ತುಮಕೂರು: ಜಿಲ್ಲಾ ಆರ್ಯಯ ಈಡಿಗರ ಸಂಘ, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ, ಜಗದ್ಗುರು ನಾರಾಯಣಗುರು ಸಮಾಜ ಟ್ರಸ್ಟ್‌ ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಿಲ್ಲಾ ಜಯಂತ್ಯುತ್ಸವ ಸಮಿತಿ ತುಮಕೂರು ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜಯಂತೋತ್ಸವ ಕರ್ಯಕ್ರಮವನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಟೌನ್ ಹಾಲ್ ವೃತ್ತದಿಂದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ನಾರಾಯಣಗುರುಗಳ ಪುತ್ಥಳಿಯ ಅದ್ಧೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಶನಿವಾರ ಬೆಳಗ್ಗೆ 10 ಗಂಟೆಗೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜರುಗುವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತನಂದ ಮಹಾಸ್ವಾಮಿ ವಹಿಸುವರು. ಉತ್ಸವಕ್ಕೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಚಾಲನೆ ನೀಡುವರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಆರ್ಯು ಈಡಿಗರ ಸಂಘದ ಅಧ್ಯಕ್ಷ ಕೆ.ವಿ. ಅಜಯ್ ಕುಮಾರ್ ವಹಿಸುವರು. ಸಂಸದ ಜಿ.ಎಸ್‌. ಬಸವರಾಜು, ಸಚಿವ ಕೆ.ಎನ್‌.ರಾಜಣ್ಣ, ಮಧು ಬಂಗಾರಪ್ಪ, ಡಿ. ಸುಧಾಕರ್, ಟಿ.ಬಿ.ಜಯಚಂದ್ರ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ರಾಜ್ಯ ಸಭಾ ಸದಸ್ಯರಾದ ಜಗ್ಗೇಶ್, ವಿಧಾನ ಪರಿಷತ್‌ ಸದಸ್ಯರಾದ ಆರ್.ರಾಜೇಂದ್ರ, ಮಹಾ ಪೌರರಾದ ಪ್ರಭಾವತಿ ಸುಧೀಶ್ವರ್ ಭಾಗವಹಿಸಲಿದ್ದಾರೆ

ಗಣಪತಿ -ನಂದಿಯ ಲಾಂಛನ ಚಿತ್ರ ಬಿಡಿಸುವ ಸ್ಪರ್ಧೆ

ತುಮಕೂರು: ಸಿದ್ಧಿವಿನಾಯಕ ಸೇವಾ ಮಂಡಳಿ ವಿನಾಯಕನಗರ ತುಮಕೂರು ಆಶ್ರಯದಲ್ಲಿ ನಡೆಯುತ್ತಿರುವ 47ನೇ ವರ್ಷದ ಸಿದ್ಧಿ ವಿನಾಯಕ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ 9-30 ಕ್ಕೆ ಮಂಡಳಿಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿ ಗಣಪತಿಯ ಹಾಗೂ ಡೈರಿಯ ಲಾಂಛನ ನಂದಿಯ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. 1ನೇ ತರಗತಿಯಿಂದ 10ನೇ ತರಗತಿಯ ಶಾಲಾ ಮಕ್ಕಳು ಭಾಗವಹಿಸಲು ಅವಕಾಶವಿದೆ. ಹಾಲು ಉತ್ಪಾದಕರ ಸಂಘಗಳ ಒಕ್ಕೂಟದವರು ಉಚಿತ ಹಾಲು, ಪೇಡ ಹಾಗೂ ಐಸ್ ಕ್ರೀಮ್ ವಿತರಿಸುವರು ಮತ್ತು ಆಕರ್ಷಕ ಬಹುಮಾನ ನೀಡಲು ನಿರ್ಧರಿಸಿದ್ದಾರೆ.

ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಆ ದಿನ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಗುವುದು

22 ರಂದು ಪೌರಾಣಿಕ ವೇಷ ಭೂಷಣ ಸ್ಪರ್ಧೆ

ತುಮಕೂರು: ದಸರಾ ಸಮಿತಿ ವತಿಯಿಂದ ಪೌರಾಣಿಕ ವೇಷ ಭೂಷಣ ಸ್ಪರ್ಧೆಯನ್ನು 22ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಐತಿಹಾಸಿಕ ಹಾಗೂ ಪೌರಾಣಿಕ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ.

ಭಾಗವಹಿಸುವ ಪ್ರತಿ ಸ್ಪರ್ಧಿ 100 ರು. ಪ್ರವೇಶ ಶುಲ್ಕ ಪಾವತಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 5 ಸಾವಿರ ದ್ವಿತೀಯ ಬಹುಮಾನ 3 ಸಾವಿರ ಹಾಗೂ ತೃತಿಯ ಬಹುಮಾನವಾಗಿ 2 ಸಾವಿರ ರು. ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಪ್ರತಿಮಾ ಹೆಬ್ಬಾರ್ ೯೪೮೧೦೬೧೪೦೯, ರೇಖಾ ಶಿವಕುಮಾರ್ ೯೮೪೪೭೬೮೩೫೪, ಮಮತಾ ರಾಜ್ ೯೦೩೫೪೩೮೫೭೬ ಇವರನ್ನು ಸಂಪರ್ಕಿಸಬಹುದು.

click me!