ಪಿಎಸ್ಸೈ ಪರೀ​ಕ್ಷೆ​: ಬ್ಲೂಟೂತ್‌ ಅಕ್ರ​ಮದ ತನಿಖೆ ಆಗ್ರಹ

By Girish Goudar  |  First Published Apr 21, 2022, 11:39 AM IST

*  ಹಿಂದೆ ಕಾನ್ಸ್‌​ಟೆ​ಬಲ್‌ ನೇಮಕ ಪರೀ​ಕ್ಷೆ​ಯಲ್ಲೂ ‘ಹೈಟೆ​ಕ್‌’ ಅಕ್ರ​ಮ
*  ಬನಿಯನ್‌, ಮಾಸ್ಕ್‌ನೊಳಗೂ ಪತ್ತೆ​ಯಾ​ಗಿತ್ತು ಬ್ಲೂಟೂತ್‌, ಇತರೆ ಸಾಧ​ನ
*  ಪಿಎಸ್ಸೈ ಪರೀ​ಕ್ಷೆ​ಯಲ್ಲೂ ಇಂಥ ಅಕ್ರಮ ಕುರಿತು ಅಭ್ಯ​ರ್ಥಿ​ಗ​ಳಿಗಿದೆ ಶಂಕೆ
 


ಆನಂದ್‌ ಎಂ. ಸೌದಿ

ಯಾದಗಿರಿ(ಏ.21):  ರಾಜ್ಯಾ​ದ್ಯಂತ(Karnataka) ಸದ್ದು ಮಾಡಿ​ರುವ ಪಿಎ​ಸ್‌ಐ ಪರೀ​ಕ್ಷೆ​ ಅಕ್ರ​ಮ​ದಲ್ಲಿ(PSI Recruitment Scam) ಓಎಂಆರ್‌ ಶೀಟ್‌ ತಿದ್ದುವಿಕೆ ಆರೋಪಕ್ಕೆ ಸಂಬಂಧಿಸಿ ಮಾತ್ರ ಈಗ ಸಿಐಡಿ ತನಿಖೆ ನಡೆ​ಸು​ತ್ತಿದೆ. ಆದರೆ, ಈ ಹಿಂದೆ ಕಾನ್ಸ್‌​ಟೆ​ಬಲ್‌ ಪರೀ​ಕ್ಷೆ​ಯಲ್ಲಿ ನಡೆ​ದಂತೆ ಪಿಎ​ಸ್‌ಐ ಪರೀ​ಕ್ಷೆ​ಯಲ್ಲೂ ಬ್ಲೂಟೂತ್‌ ಮತ್ತಿ​ತರೆ ಹೈಟೆಕ್‌ ತಂತ್ರ​ಜ್ಞಾನ ಬಳಸಿ ಅಕ್ರಮ ಆಗಿ​ರುವ ಸಾಧ್ಯತೆ ಕುರಿತು ಶಂಕೆಯಿದ್ದು, ಈ ನಿಟ್ಟಿ​ನಲ್ಲೂ ತನಿಖೆ ನಡೆ​ಯ​ಬೇ​ಕೆಂಬ ಆಗ್ರಹ ಇದೀಗ ಕೇಳಿ​ಬರುತ್ತಿ​ದೆ.

Latest Videos

undefined

ಅ.24, 2021 ರಂದು ನಡೆದ ಕಾನ್ಸ್‌ಟೆಬಲ್‌ ನೇಮಕ ಪರೀಕ್ಷೆ ವೇಳೆ, ಕಲಬುರಗಿಯ(Kalaburgi) ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿದ್ದ ಸೆನ್‌ ಪೊಲೀಸರು(Police), 9 ಮಂದಿ​ಯನ್ನು ಬಂಧಿಸಿ, ಬ್ಲೂಟೂತ್‌(Bluetooth) ಅಳವಡಿಸಿದ್ದ ಬನಿಯನ್‌ ಸೇರಿ ಅತ್ಯಾಧುನಿಕ ಉಪಕರಣಗಳನ್ನು ಜಪ್ತಿ ಮಾಡಿದ್ದರು. ಬೆಳಗಾವಿ ವಿಭಾಗದಲ್ಲೂ ದಾಳಿ ನಡೆದು, 14 ಮಂದಿ​ಯನ್ನು ಬಂಧಿಸಿ(Arrest), ಅನೇಕ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಭ್ಯರ್ಥಿಗಳ ಜೊತೆಗೆ ಕೋಚಿಂಗ್‌ ಸೆಂಟರ್‌ಗಳ ಮುಖ್ಯಸ್ಥರು, ಸರ್ಕಾರಿ ನೌಕರನನ್ನೂ ಆಗ ಬಂಧಿಸಲಾಗಿತ್ತು. (ಪ್ರಕರಣ ಸಂಖ್ಯೆ 23/2021) ಈ ಪ್ರಕ​ರಣದ ತನಿಖೆ ಇನ್ನೂ ನಡೆ​ಯು​ತ್ತಿ​ದೆ.

ನೊಂದ ಅಭ್ಯರ್ಥಿಗಳಿಂದ ಕಾನೂನು ಸಮರಕ್ಕೆ ಸಿದ್ಧತೆ

ಹಾಗೆಯೇ, ನ.22, 2021 ರಂದು ನಡೆದ ಕೆಎಸ್‌ಆ​ರ್‌​ಪಿ(KSRP ಹಾಗೂ ಐಆರ್‌ಬಿ(IRB) ಪರೀಕ್ಷೆಗಳ ಸಂದ​ರ್ಭ​ದ​ಲ್ಲೂ ಬೆಂಗಳೂರು, ಕಲಬುರಗಿ, ಜೇವರ್ಗಿ, ಅಫಜಲ್ಪೂರ, ಆಳಂದ, ಬೆಳಗಾವಿ, ಗೋಕಾಕ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗದಲ್ಲಿ ನಕಲಿ ಅಭ್ಯರ್ಥಿಗಳು ಹಾಜ​ರಾ​ಗಿದ್ದು ಸೇರಿ ಅನೇಕ ಅಕ್ರಮಗಳು ಪತ್ತೆಯಾಗಿದ್ದವು. ಅಭ್ಯರ್ಥಿಯೊಬ್ಬ ಮಾಸ್‌್ಕನಲ್ಲಿ ಬ್ಲೂಟೂತ್‌ ಉಪಕರಣ ಅಳವಡಿಸಿಕೊಂಡು ನಕಲಿಗೆ ಮುಂದಾಗಿದ್ದ ಘಟನೆ ಬಾಗಲಕೋಟೆಯಲ್ಲಿ ಪತ್ತೆಯಾಗಿತ್ತು. ಪರೀಕ್ಷೆ ಅಕ್ರ​ಮಕ್ಕೆ ‘ಬ್ಲೂಟೂತ್‌‘ ಹಾವಳಿ ಎಲ್ಲೆ ಮೀರಿತ್ತು ಎನ್ನುವುದಕ್ಕೆ ಸಾಕ್ಷಿ ಸಮೇತ ಪೊಲೀ​ಸ​ರಿಗೆ ಪುರಾವೆ ಸಿಕ್ಕಿ​ತ್ತು.

Yadgir: ಎಸ್‌ಐ ಪರೀಕ್ಷೆ ಗೋಲ್‌ಮಾಲ್‌: ಮತ್ತೆ 6 ಆರೋಪಿಗಳ ಸೆರೆ

ಅದೇ ರೀತಿ ಪಿಎ​ಸ್‌ಐ ಪರೀಕ್ಷೆಯಲ್ಲೂ ಬ್ಲೂಟೂ​ತ್‌​ ಸೇರಿ ಇತರೆ ವಿಧಾ​ನ​ಗಳ ಮೂಲಕ ಅಕ್ರಮ ನಡೆ​ದಿ​ರ​ಬ​ಹುದು. ಬ್ಲೂಟೂತ್‌ ಮೂಲಕ ಅಕ್ರಮ ನಡೆದ ಘಟನೆ ಪತ್ತೆಯಾದಾಗ ಕಾನ್ಸ್‌ಟೆ​ಬಲ್‌ ಪರೀ​ಕ್ಷೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಅದೇ ರೀತಿ ಪಿಎಸೈ ಪರೀಕ್ಷೆಗೆ ವಿಚಾ​ರ​ದಲ್ಲೂ ಕೇವಲ ಒಎಂಆರ್‌ಶೀಟ್‌ ತಿದ್ದು​ವಿ​ಕೆಗೆ ಸೀಮಿ​ತ​ವಾ​ಗದೆ ಬ್ಲೂಟೂತ್‌ ಸೇರಿ ಇತರೆ ರೀತಿಯ ಅಕ್ರ​ಮದ ಕುರಿತೂ ತನಿಖೆ ನಡೆ​ಯಬೇಕು ಎಂಬುದು ನೊಂದ ಅಭ್ಯರ್ಥಿಗಳ ಅಭಿ​ಪ್ರಾ​ಯ.

ಕಳೆದ ಅಕ್ಟೋಬರ್‌ನಲ್ಲಿ ಕಾನ್ಸ್‌ಟೆ​ಬಲ್‌ ಪರೀಕ್ಷೆ(Exam) ವೇಳೆ ನಡೆದ ಅಕ್ರಮದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಅದೇ ರೀತಿ, ಪಿಎಸೈ ಪರೀಕ್ಷೆಯ ತನಿಖೆ ನಡೆಸಿದರೆ, ಬ್ಲೂಟೂತ್‌ ಅಕ್ರಮವೂ ಬೆಳ​ಕಿಗೆ ಬರುವ ಸಾಧ್ಯತೆಯಿದೆ ಅಂತ ನೊಂದ ಅಭ್ಯರ್ಥಿ ರವಿಶಂಕರ್‌ ಪಾಟೀಲ್‌ ತಿಳಿಸಿದ್ದಾರೆ. 
 

click me!