Tumakuru: ರಸ್ತೆ ಕೇಳಿದ ಯುವಕನ ಕೆನ್ನೆಗೆ ಬಾರಿಸಿದ ಕಾಂಗ್ರೆಸ್‌ ಶಾಸಕ: ವಿಡಿಯೋ ವೈರಲ್‌

Published : Apr 21, 2022, 06:42 AM IST
Tumakuru: ರಸ್ತೆ ಕೇಳಿದ ಯುವಕನ ಕೆನ್ನೆಗೆ ಬಾರಿಸಿದ ಕಾಂಗ್ರೆಸ್‌ ಶಾಸಕ: ವಿಡಿಯೋ ವೈರಲ್‌

ಸಾರಾಂಶ

*  ಕೈ ಶಾಸಕ ಕಪಾಳಮೋಕ್ಷ *  ಪಾವಗಡದ ವೆಂಕಟರಮಣಪ್ಪ ಕೃತ್ಯ ವೈರಲ್‌ *  ಬುದ್ಧಿ ಹೇಳಿದೆನಷ್ಟೆ: ಶಾಸಕ ವೆಂಕಟರಮಣಪ್ಪ  

ಪಾವಗಡ(ಏ.21):  ಊರಿಗೆ ಕುಡಿಯುವ ನೀರು, ರಸ್ತೆ ಕೇಳಿದ ಯುವಕನಿಗೆ ಪಾವಗಡ ಕಾಂಗ್ರೆಸ್‌(Congress) ಶಾಸಕ ವೆಂಕಟರಮಣಪ್ಪ(Venkataramanappa) ಕಪಾಳ ಮೋಕ್ಷ ಮಾಡಿದ್ದು, ಈ ಕುರಿ​ತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್‌(Viral) ಆಗಿದೆ. ಶಾಸ​ಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತ​ವಾ​ಗಿ​ದೆ.

ಪಾವಗಡ ತಹಸೀಲ್ದಾರ್‌ ಕಚೇರಿಯಲ್ಲಿ ಬಗರ್‌ಹುಕುಂ ಕಮಿಟಿ ಸಭೆ ಮುಗಿಸಿ ಶಾಸಕ ವೆಂಕಟರಮಣಪ್ಪ ಹೊರಗೆ ಬಂದಾಗ, ಹುಸೇನ್‌ಪುರದ ನಾಗೇನಹಳ್ಳಿಯ ನರಸಿಂಹಮೂರ್ತಿ ಎಂಬ ಯುವಕ ನಮ್ಮ ಗ್ರಾಮಕ್ಕೆ ನೀರು, ರಸ್ತೆಯಿಲ್ಲ ಎಂದು ಅಲವತ್ತುಕೊಂಡಿದ್ದಾನೆ. ಗ್ರಾಮದ ಸಮಸ್ಯೆಯನ್ನು ತಿಳಿಸಲೆಂದೇ ನಿಮ್ಮನ್ನು ಹುಡುಕಿಕೊಂಡು ಬಂದಿದ್ದೇನೆ. ನಮ್ಮೂ​ರಿನ ಸಮಸ್ಯೆ ಬಗೆ​ಹ​ರಿಸಿ ಎಂದು ಶಾಸ​ಕರ(MLA) ಮುಂದೆ ಸ್ವಲ್ಪ ಏರು​ಧ್ವ​ನಿ​ಯಲ್ಲೇ ಹೇಳಿ​ಕೊಂಡಿ​ದ್ದಾ​ನೆ ಎನ್ನ​ಲಾ​ಗಿ​ದೆ.
ಈ ಸಂದ​ರ್ಭ​ದಲ್ಲಿ ಯುವ​ಕನ ಸಮ​ಸ್ಯೆ​ಯನ್ನು ಆಲಿಸು​ತ್ತಿದ್ದ ಶಾಸಕ ಏಕಾ​ಏಕಿ ಕೋಪ​ಗೊಂಡು ಕೆನ್ನೆಗೆ ಹೊಡೆ​ದಿ​ದ್ದಾ​ರೆ. ಅಲ್ಲದೆ, ನಿನ್ನನ್ನು ಪೊಲೀಸ್‌ ಠಾಣೆಗೆ(Police Station) ಹಾಕಿಸುತ್ತೇನೆಂದು ಬೆದ​ರಿ​ಕೆಯನ್ನೂ​ ಹಾಕಿ​ದ್ದಾರೆ. ಈ ಘಟನೆ ಮಂಗಳ​ವಾರ ನಡೆ​ದಿದ್ದು, ಇದೀಗ ವೈರಲ್‌ ಆಗಿ​ದೆ. ಸಾರ್ವ​ಜನಿ​ಕರ ಸಮ​ಸ್ಯೆ​ಯನ್ನು ಶಾಂತ​ಚಿ​ತ್ತ​ದಿಂದ ಆಲಿ​ಸ​ಬೇ​ಕಾದ ಶಾಸ​ಕರು ಈ ರೀತಿ ಮಾಡಿದ್ದು ಸರಿ​ಯಲ್ಲ ಎಂದು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಆಕ್ರೋಶ ವ್ಯಕ್ತ​ವಾ​ಗಿ​ದೆ.

ನಮ್ಮೂರಿನ ಕಂಟ್ರಾಕ್ಟರ್ ಗಳು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಊರು ಬಿಟ್ಟಿದ್ದಾರೆ

ಶಾಸಕ ಸ್ಪಷ್ಟ​ನೆ: 

‘ನಾನು ಸಭೆ ಮುಗಿಸಿ ಹೊರ ಬಂದಾಗ ನಾಗೇಹಳ್ಳಿಯ ಯುವಕ ರಸ್ತೆ ಹಾಳಾಗಿದೆ ಎಂದು ಹೇಳಿ​ದ. ರಸ್ತೆಗೆ .3.5 ಕೋಟಿ ಅನುದಾನ(Grants) ಬಿಡುಗಡೆ ಆಗಿದೆ, ಶೀಘ್ರದಲ್ಲೇ ಗುದ್ದಲಿ ಪೂಜೆ ಮಾಡುವುದಾಗಿ ಹೇಳಿದೆ. ಆಗ ಆತ ಕೆಟ್ಟಪದ​ಗ​ಳನ್ನು ಬಳ​ಸಿ ಮಾತ​ನಾ​ಡಿದ. ಆ ರೀತಿ ಮಾತನಾಡಬಾರದು ಎಂದು ಬುದ್ಧಿಹೇ​ಳಿ​ದ್ದೇನೆ ಅಷ್ಟೆ’ ಎಂದು ಶಾಸ​ಕ ವೆಂಕಟರಮಣಪ್ಪ ಸ್ಪಷ್ಟನೆ ನೀಡಿ​ದ್ದಾ​ರೆ.

ತಾಯಿ ಓದಿದ ಸರ್ಕಾರಿ ಶಾಲೆಗೆ 2 ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಿಸಿದ ಉದ್ಯಮಿ

ಉದ್ಯಮಿ ಹರ್ಷ ಮತ್ತು ಮಮತಾ ದಂಪತಿ(Harsha-Mamta Couple) ತುಮಕೂರು(Tumakuru) ಜಿಲ್ಲೆ ಕೋರಾ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ‘ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ’ಯ(Government School) 14 ಕೊಠಡಿಗಳ ಸುಸಜ್ಜಿತವಾದ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ಬುಧವಾರ ನಡೆದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರು ಸ್ಥಳೀಯ ಶಾಸಕರಾದ ಡಾ. ಜಿ.ಪರಮೇಶ್ವರ್‌ ಅವರೊಂದಿಗೆ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದರು. 
 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ