Bengaluru: ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗೆ ಮತ್ತೆ ಕಳೆ: ಪ್ರವಾಸಿಗರ ಸಂಖ್ಯೆ ಹೆಚ್ಚಳ

By Girish GoudarFirst Published Apr 21, 2022, 8:49 AM IST
Highlights

* ಎರಡು ವರ್ಷಗಳಿಂದ ಬಿಕೋ ಎನ್ನುತ್ತಿದ್ದ ಬೆಂಗಳೂರಿನ ಪ್ರಮುಖ ಉದ್ಯಾನವನಗಳು
*  ಕೊರೋನಾ 2ನೇ ಅಲೆ ಬಳಿಕ ಸಾರ್ವಜನಿಕರಿಗೆ ಮುಕ್ತ
*  ಕೇರಳ, ತಮಿಳುನಾಡು ಮತ್ತು ಆಂಧ್ರದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮನ
 

ಬೆಂಗಳೂರು(ಏ.21):  ಕಳೆದ ಎರಡು ವರ್ಷಗಳಿಂದ ಬಿಕೋ ಎನ್ನುತ್ತಿದ್ದ ನಗರದ ಪ್ರಮುಖ ಉದ್ಯಾನವನಗಳಾದ ಲಾಲ್‌ಬಾಗ್‌(Lalbagh) ಮತ್ತು ಕಬ್ಬನ್‌ ಪಾರ್ಕ್‌ಗೆ(Cubbon Park) ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಕೊರೋನಾ(Coronavirus) ಕಾರಣದಿಂದ ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ವಾಯುವಿಹಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಕೊರೋನಾ ಎರಡನೇ ಅಲೆಯ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದ್ದು, ಇದೀಗ ಹಂತ ಹಂತವಾಗಿ ಪ್ರವಾಸಿಗರ(Tourists) ಸಂಖ್ಯೆ ಸಾಮಾನ್ಯ ಸ್ಥಿತಿಗೆ ತಲುಪುತ್ತಿದೆ ಎದು ತೋಟಗಾರಿಕೆ ಇಲಾಖೆ(Department of Horticulture) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊರೋನಾ ಪ್ರಾರಂಭಕ್ಕೂ ಮುನ್ನ ಲಾಲ್‌ಬಾಗ್‌ಗೆ ಪ್ರತಿದಿನ 5 ರಿಂದ 7 ಸಾವಿರ, ವಾರಾಂತ್ಯಗಳಲ್ಲಿ 10 ಸಾವಿರದವರೆಗೂ ಪ್ರವಾಸಿಗರು ಬರುತ್ತಿದ್ದು. ಇದೀಗ ಉದ್ಯಾನ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ವಾರಾಂತ್ಯಗಳಲ್ಲಿ 7 ಸಾವಿರದವರೆಗೂ ಜನ ಬರುತ್ತಿದ್ದಾರೆ ಎಂದು ವಿವರಿಸಿದರು.

ಹಳೇ ಸ್ಟೈಲ್‌ಗೆ ಮರಳಿದ ಬೆಂಗ್ಳೂರು, ಲಾಲ್‌ಬಾಗ್‌ಗೆ ಸಾರ್ವಜನಿಕ ಅವಕಾಶ

ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆಯಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು(Students) ಬರುತ್ತಿದ್ದಾರೆ. ಜತೆಗೆ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಎಲ್ಲ ಪ್ರವಾಸಿಗರನ್ನು ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡುಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಕುಸುಮಾ ಮಾಹಿತಿ ನೀಡಿದರು.

ಕಬ್ಬನ್‌ ಪಾರ್ಕ್‌ಗೂ ಹೆಚ್ಚು ಜನ

ನಗರದ ಕೇಂದ್ರ ಭಾಗದಲ್ಲಿರುವ ಕಬ್ಬನ್‌ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಕೊರೋನಾ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರೂ, ಮಾರ್ಚ್‌ ತಿಂಗಳ ವರೆಗೂ ಜನ ಆಗಮಿಸುತ್ತಿರಲಿಲ್ಲ. ಆದರೆ, ಏಪ್ರಿಲ್‌ ತಿಂಗಳ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಲಾಲ್‌ಬಾಗ್‌ ಪ್ರವೇಶಕ್ಕೆ ಜಿಎಸ್‌ಟಿ: ದರ ಏರಿಕೆ ಜಾರಿ

ಸಾಮಾನ್ಯ ದಿನಗಳಲ್ಲಿ ಸುಮಾರ 4 ಸಾವಿರಕ್ಕೂ ಹೆಚ್ಚು ಜನ ಆಗಮಿಸುತ್ತಿದ್ದಾರೆ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ 8 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಆಗಮಿಸುತ್ತಿದ್ದು, ಸಹಜ ಸ್ಥಿತಿಗೆ ತಲುಪಿದೆ ಎಂದು ಅವರು ವಿವರಿಸಿದರು.

ಲಾಲ್‌ಬಾಗ್‌ನಲ್ಲಿ ಕಲ್ಲಂಗಡಿ, ದ್ರಾಕ್ಷಿ ಮೇಳ

ರೈತರಿಗೆ(Farmers) ಹೆಚ್ಚಿನ ಅನುಕೂಲ ಕಲ್ಪಿಸಲು ಹಾಪ್‌ಕಾಮ್ಸ್‌ ಮಳಿಗೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ(Munirathna) ಹೇಳಿದ್ದರು.

ಮಾ.04 ರಂದು ಲಾಲ್‌ಬಾಗ್‌ನ ಹಾಪ್‌ಕಾಮ್ಸ್‌ನಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆ(Karnataka Horticulture Department) ಆಯೋಜಿಸಿದ್ದ ದ್ರಾಕ್ಷಿ-ಕಲ್ಲಂಗಡಿ ಮೇಳ(Grape-Watermelon Fair) ಉದ್ಘಾಟಿಸಿ ಮಾತನಾಡಿದ್ದ ಅವರು, ಬೆಲೆ ಕುಸಿತವಾದಾಗ ರೈತರ ಉತ್ಪನ್ನಗಳನ್ನು ದಾಸ್ತಾನು ಮಾಡಲು ಅನುಕೂಲವಾಗುವಂತೆ 10 ಟನ್‌ ಸಾಮರ್ಥ್ಯದ ಎರಡು ಶೀತಲ ಸಂಗ್ರಹಗಾರ ಸ್ಥಾಪಿಸಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಚಿವರು ಹೇಳಿದ್ದರು. 
 

click me!