ಸೊರಬ (ನ.25) : 2023ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿ ಗಡಿಪಾರು ಮಾಡುವ ಮೂಲಕ ಬಿಜೆಪಿಯನ್ನು ರಕ್ಷಿಸುವುದೇ ನಮೋ ವೇದಿಕೆಯ ಮುಖ್ಯ ಉದ್ದೇಶ ಎಂದು ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು.
ಪಟ್ಟಣದ ನಮೋ ವೇದಿಕೆ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಮಾನ್ಯ ಜನರು ಶಾಸಕ ಕುಮಾರ್ ಬಂಗಾರಪ್ಪ ಅವರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದಾರೆ. ಅವರಲ್ಲಿ ನಿರಂಕುಶತ್ವ ಮನೆಮಾಡಿದೆ. ಜನರನ್ನು ತುಚ್ಛವಾಗಿ ಕಾಣುವ ಮನಸ್ಥಿತಿ ಅರಿತು ಸ್ವಾಭಿಮಾನಿ ಕಾರ್ಯಕರ್ತರು ಜೊತೆಗೂಡಿ ನಮೋ ವೇದಿಕೆ ಸ್ಥಾಪನೆ ಮಾಡಿದ್ದೇವೆ. ಜಿಲ್ಲಾ ಬಿಜೆಪಿ ನಮಗೆ ನೀಡಿರುವ ವಿವಿಧ ಹುದ್ಧೆಯಿಂದ ಕೆಳಗಿಳಿಸಿರುವುದು ಶಾಸಕ ಕುಮಾರ್ ಬಂಗಾರಪ್ಪ ಅವರ ವಿರುದ್ಧ ನಮೋ ವೇದಿಕೆ ಸಂಘಟಿಸಲು ಹೊರತು ಬೇರೆ ಕಾರಣದಿಂದಲ್ಲ. ಇದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಎಂದು ತಿಳಿಸಿದರು.
ಶರಾವತಿ ಸಂತ್ರಸ್ತರ ಮರೆತ ಸಿಎಂ, ಮಾಜಿ ಸಿಎಂ : ತೀ.ನ.ಶ್ರೀನಿವಾಸ್
ಆನವಟ್ಟಿಯಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ನಮೋ ವೇದಿಕೆ ಕಾರ್ಯಕರ್ತರಿಗೆ ಹೋಗದಂತೆ ಹೇಳಿಲ್ಲ. ಮುಖ್ಯಮಂತ್ರಿ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಹೆಸರು ಬರುತ್ತದೆ ಎಂದು ಕಾರ್ಯಕರ್ತರೇ ಭಾಗವಹಿಸಿಲ್ಲ. ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಜನ ಸೇರಿಲ್ಲ ಎಂದು ಶಾಸಕರು ಭ್ರಮನಿರಸನಗೊಂಡಿದ್ದಾರೆ. ಮುಂದೆ ಅಧಿಕಾರ ಸುಲಭವಾಗಿ ದೊರೆಯುವುದಲ್ಲಿ ಎಂದು ಭಾವಿಸಿ ನಮೋ ವೇದಿಕೆ ಕಾರ್ಯಕರ್ತರಿಗೆ ಆಸೆ, ಆಮಿಷವೊಡ್ಡಲಾಗಿದೆ. ಅವರ ಯಾವುದೇ ಆಮಿಷಕ್ಕೆ ಬಲಿಯಾಗದೇ ನಮೋ ವೇದಿಕೆ ಸಂಘಟಿಸಲು ಉತ್ಸಾಹ ತೋರಿಸುತ್ತಿರುವುದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ವೇದಿಕೆ ಅಭ್ಯರ್ಥಿ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಂದೆ ಹೆಸರು, ಅಧಿಕಾರ, ಹಣ ಬಲವಿರುವ ಶಾಸಕರ ವಿರುದ್ಧ ನಮೋ ವೇದಿಕೆ ಕಟ್ಟಿದ್ದೇವೆ ಎಂದರೆ ನಮ್ಮಲ್ಲಿರುವ ರಾಜಕಾರಣದ ಅನುಭವ, ಶಾಸಕ ಕುಮಾರ್ ಬಂಗಾರಪ್ಪ ಮುಖಂಡರನ್ನು ನಡೆಸಿಕೊಂಡ ರೀತಿ ಬಗ್ಗೆ ಬಿಜೆಪಿ ವರಿಷ್ಠರು ಗಮನ ನೀಡಬೇಕು. ಅಧಿಕಾರಕ್ಕಾಗಿ ಬಂದ ವ್ಯಕ್ತಿ ಮುಖ್ಯವೋ ಅಥವಾ ತಮ್ಮ ಸ್ವಂತ ಹಣ ಖರ್ಚು ಮಾಡಿ ಪಕ್ಷ ಕಟ್ಟಿದ ನಿಷ್ಠಾವಂತ ಕಾರ್ಯಕರ್ತರು ಮುಖ್ಯವೊ ಎನ್ನುವುದನ್ನು ಅರಿತು ಮುಂದಿನ ಹೆಜ್ಜೆ ಇಡಬೇಕಿದೆ ಎಂದು ವರಿಷ್ಠರಿಗೆ ಎಚ್ಚರಿಸಿದರು.
ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ಮಯ ಎಂಬ ಹೇಳಿಕೆ ಸರಿಯಲ್ಲ: ಕುಮಾರ ಬಂಗಾರಪ್ಪ
ಪ್ರಮುಖರಾದ ಗಜಾನನ ರಾವ್, ಎ.ಎಲ್.ಅರವಿಂದ್, ಕುಸುಮಾ ಪಾಟೀಲ್, ಶಿವಯೋಗಿ, ಮಲ್ಲಿಕಾರ್ಜುನ ಗುತ್ತೇರ್, ವಿಜಯಕುಮಾರ್, ಮಹಾಬಲೇಶ್ವರ ತಡಗಳಲೆ, ಗೀತಾ ಮಲ್ಲಿಕಾರ್ಜುನ್, ಗುರುಪ್ರಸನ್ನಗೌಡ, ಚಂದ್ರಪ್ಪ ಬರಗಿ, ಪ್ರಸನ್ನಕುಮಾರ್, ಮಂಜಣ್ಣ ಲಕ್ಕವಳ್ಳಿ, ಬೆನವಪ್ಪ, ಸಂಜೀವಾಚಾರ್, ಅರುಣಕುಮಾರ್ ಮೊದಲಾವರಿದ್ದರು.