
ಬೆಂಗಳೂರು(ಮಾ.28): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಎನ್ಎಸ್‌ಯುಐ ರಮೇಶ್ ಜಾರಕಿಹೊಳಿ ವಿರುದ್ಧ ಮಾನಹಾನಿ ದೂರು ನೀಡಿದೆ.
ಇಂದು(ಭಾನುವಾರ) ಎನ್ಎಸ್‌ಯುಐ ರಾಷ್ಟ್ರೀಯ ಸಂಚಾಲಕ ಫಹಾದ್ ಅವರು ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತಮ್ಮ ವಕೀಲರ ಜೊತೆ ಆಗಮಿಸಿ ದೂರು ನೀಡಿದ್ದಾರೆ.
CD ಪ್ರಕರಣಕ್ಕೆ ಹೊಸ ತಿರುವು; ಪೋಷಕರ ಆರೋಪದ ಬಳಿಕ ಡಿಕೆಶಿ ಮೇಲೆ ಜಾರಕಿಹೊಳಿ ಗುಡುಗು!
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬಹಿರಂಗವಾಗಿ ನೀಡಿರುವ ಹೇಳಿಕೆ ಮಾನಹಾನಿ ಇಂದ ಕೂಡಿದೆ. ಯಾವುದೇ ಪುರಾವೆಗಳಿಲ್ಲದೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಮಾನಹಾನಿಯ ಪ್ರಕರಣದ ಅಂಶಗಳಿಂದ ಕೂಡಿದೆ. ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವುಂಟಾಗಿದೆ. ಹೀಗಾಗಿ ಅವರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಆಗ್ರಹಿಸಿದ್ದಾರೆ.