'ನನ್ನ ಮನಸ್ಸಲ್ಲಿ ನೋವು ಕಾಡುತಿತ್ತು - ಅದಕ್ಕೆ ನಿಮ್ಮ ಭೇಟಿ ಮಾಡಲು ಬಂದೆ'

Suvarna News   | Asianet News
Published : Mar 28, 2021, 02:20 PM IST
'ನನ್ನ ಮನಸ್ಸಲ್ಲಿ ನೋವು ಕಾಡುತಿತ್ತು - ಅದಕ್ಕೆ ನಿಮ್ಮ ಭೇಟಿ ಮಾಡಲು ಬಂದೆ'

ಸಾರಾಂಶ

ನನ್ನ ಮನಸ್ಸಲ್ಲಿ ಆ ನೋವು ಕಾಡಲಾರಂಭಿಸಿತ್ತು. ಇದರಿಂದ ನಿಮ್ಮನ್ನು ಭೇಟಿ ಮಾಡಲು ಬಂದೆ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. 

ರಾಮನಗರ (ಮಾ.28): ಮೊನ್ನೆ ವೇದಿಕೆ ಮೇಲೆ ನಡೆದ ಘಟನೆಯಿಂದ ನನಗೆ ತುಂಬಾ ನೋವಾಯಿತು. ಅತ್ಯಂತ ಪ್ರೀತಿಯಿಂದ ನೀವು ನನ್ನನ್ನು ನಾಟಕಕ್ಕೆ ಬರ ಮಾಡಿಕೊಂಡಿದ್ದಿರಿ.
ಎಲ್ಲೋ  ನನ್ನಿಂದ ಗೊಂದಲ ಸೃಷ್ಟಿ ಆಯಿತು ಎನ್ನೊದು ನನ್ನ ಮನಸ್ಸಲ್ಲಿ ಕಾಡುತ್ತಿತ್ತು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. 

ಕನಕಪುರ ತಾಲೂಕಿನ ಚೀಲೂರು ಗ್ರಾಮಕ್ಕೆ ಇಂದು ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ  ಊರಿನ ಹಲವಾರು ಮುಖಂಡರಿಗೆ ಕರೆ ಮಾಡಿ ವಿಚಾರಿಸಿದೆ. ಅಲ್ಲದೆ, ಇನ್ನೆರಡು ಮೂರು ದಿನಗಳಲ್ಲಿ ಮತ್ತೆ ಗ್ರಾಮಕ್ಕೆ ಭೇಟಿ ನೀಡಬೇಕು ಎಂದು ನಿರ್ಧಾರ ಮಾಡಿದೆ ಎಂದರು.

ನಿಖಿಲ್-ಡಿಕೆಶಿ ಸಪೋರ್ಟರ್ಸ್ ಗಲಾಟೆ : 'ಹುಡುಗ್ರು ನಾವ್ ತಲೆ ಕೆಡಿಸಿಕೊಳ್ಳೋಕಾಗುತ್ತಾ' ...

ನೀವು ನಮ್ಮ ಕುಟುಂಬದ ಸದಸ್ಯರಿದ್ದಂತೆ, ನಾವು ಕೆಲವೊಂದು ವಿಚಾರಗಳನ್ನ ಮನಸ್ಸು ಬಿಚ್ಚಿ ಪ್ರಸ್ತಾಪ ಮಾಡ್ತಿದ್ವಿ. ಆಗ ಕೆಲವೊಂದು ಧ್ವನಿಗಳು ಹಿಂದಿನಿಂದ ಅದಕ್ಕೆ ಅಡ್ಡಿ ಪಡಿಸಿದವು. ನಿಮಗೂ ಅವಕಾಶ ಇದೆ, ವೇದಿಕೆ ನಿಮ್ಮದೇ, ಮೈಕೂ ನಿಮ್ಮದೇ ಬಂದು ಮಾತನಾಡಿ ಅಂದೆ. ನೀವು ಒಳ್ಳೆದನ್ನ ಮಾಡಿದ್ದರೆ ಬಂದು ಹೇಳಿ ಅಂತಾ ಹೇಳಿದೆ, ಅದನ್ನೆ ಗೊಂದಲ ಮಾಡಿದರು ಎಂದರು.

ಅದು ಈಗ ಮುಗಿದಿರೋ ವಿಚಾರ ಅದನ್ನ ಮುಂದುವರೆಸೋದು ಬೇಡ ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರಿಗೂ ಮನವಿ ಮಾಡುತ್ತೇನೆ. ಒಟ್ಟಾರೆಯಾಗಿ ಇಡೀ ಗ್ರಾಮಕ್ಕೆ ಒಳ್ಳೆಯದು ಆಗಬೇಕು. ಒಬ್ಬ ಯುವಕನಾಗಿ ತಮ್ಮ ಪರವಾಗಿ ಸದಾ ನಿಲ್ಲುತ್ತೇನೆ. ಯಾವುದೇ ದುರುದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ ಎಂದರು.

ದೇವೇಗೌಡರ ಕಾಲದಿಂದ ನೀವು ನಮ್ಮ ಪರ ನಿಂತಿದ್ದೀರಾ. ಕುಮಾರಣ್ಣ ಮೂಲತಃ ಹಾಸನದವರಾದರೂ ರಾಜಕೀಯವಾಗಿ ರಾಮನಗರದಲ್ಲಿ ನೆಲೆ ಕಂಡುಕೊಂಡಿದ್ದಾರೆ, ಅದಕ್ಕೆಲ್ಲಾ ಕಾರಣಕರ್ತರು ನೀವು‌. ಈಗ ಬೇಸಿಗೆ ಕಾಲ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದೇವೆ.
ಪ್ರತೀ ಪಂಚಾಯ್ತಿ ವ್ಯಾಪ್ತಿಯಲ್ಲಿ ಏನು ಸಮಸ್ಯೆ ಇದೆ ಅಂತಾ ಪಟ್ಟಿ ಮಾಡಿ ಕೊಡಲು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ನಿಮ್ಮ ಮನೆ ಮಗನ ಹಾಗೆ ನಿಮ್ಮ ಸಮಸ್ಯೆ ಬಗೆಹರಿಸುವ ಜವಬ್ದಾರಿ, ಹೊಣೆ ನನ್ನ ಮೇಲಿದೆ ಎಂದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC