ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೊರಬ ತಾಲೂಕಿನ 21 ವರ್ಷ ವಯೋಮಾನದ ಯುವತಿಯೊಬ್ಬರು ಪ್ರಸೂತಿ ತಜ್ಞರಾದ ಡಾ. ಪ್ರತಿಮಾ ಅವರ ಬಳಿ ಚಿಕಿತ್ಸೆ ಪಡೆಯಲು ಬಂದಿದ್ದರು. ಯುವತಿಯನ್ನು ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದೊಡ್ಡಗಾತ್ರದ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿದೆ.
ಶಿವಮೊಗ್ಗ (ಮಾ.28) : ಯುವತಿಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ ಬರೋಬ್ಬರಿ ಎಂಟು ಕೆಜಿ ತೂಕದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಸಾಗರದ ತಾಯಿ-ಮಗು ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೊರಬ ತಾಲೂಕಿನ 21 ವರ್ಷ ವಯೋಮಾನದ ಯುವತಿಯೊಬ್ಬರು ಪ್ರಸೂತಿ ತಜ್ಞರಾದ ಡಾ. ಪ್ರತಿಮಾ ಅವರ ಬಳಿ ಚಿಕಿತ್ಸೆ ಪಡೆಯಲು ಬಂದಿದ್ದರು. ಯುವತಿಯನ್ನು ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದೊಡ್ಡಗಾತ್ರದ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿದೆ.
ಗರ್ಭಾವಸ್ಥೆಯಲ್ಲಿ ತಾಯಂದಿರ ಒತ್ತಡ ನಿವಾರಿಸಲು ಗಿಡಮೂಲಿಕೆಗಳು
ಇದರಿಂದ ಯುವತಿ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅಲ್ಲದೆ ಅದನ್ನು ಹಾಗೆಯೇ ಬಿಟ್ಟರೆ ಮುಂದಿನ ದಿನದಲ್ಲಿ ಕ್ಯಾನ್ಸರ್ ಕಾಯಿಲೆಗೆ ತಿರುಗುವ ಅಪಾಯವೂ ಇತ್ತು. ಇದನ್ನು ಮನಗಂಡ ವೈದ್ಯರಾದ ಡಾ. ಪ್ರತಿಮಾ, ಡಾ. ಪ್ರಕಾಶ ಬೋಸ್ಲೆ, ಸಿಬ್ಬಂದಿ ರೀಟಾ, ರೋಹಿಣಿ, ಚಂದ್ರು ಮತ್ತಿತರರು ಸತತ ಎರಡು ಗಂಟೆಗಳಿಗೂ ಅಧಿಕ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು ಎಂಟು ಕೆಜಿ ಗೆಡ್ಡೆಯನ್ನು ಹೊರತೆಗೆದು ಯುವತಿಗೆ ಮುಂದೆ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ.