ಹಂಪಿಯಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿವೆ ರಸ್ತೆಗಳು| ಕೊರೋನಾ ಭೀತಿ| ಹಂಪಿಯಲ್ಲಿ ನಿಷೇಧಾಜ್ಞೆ| ಷ ಹಂಪಿಯಿಂದ ಜಾಗ ಖಾಲಿ ಮಾಡುತ್ತಿರುವ ವಿದೇಶಿ ಪ್ರವಾಸಿಗರು| ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಕಾರ್ಯ|
ಹೊಸಪೇಟೆ(ಮಾ.16): ಕೊರೋನಾ ವೈರಸ್ ಭೀತಿಯಿಂದಾಗಿ ಹಂಪಿಯಲ್ಲಿ ನಿಷೇಧಾಜ್ಞೆ ಹೊರಡಿಸಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
ಯಾವುದೇ ಪ್ರವಾಸಿಗರು ಬರದಂತೆ ನಿಷೇಧಾಜ್ಞೆ ಹೊರಡಿಸಿದ್ದು, ಭಾನುವಾರ ಹಂಪಿಯಲ್ಲಿ ಕೆಲವೇ ಕೆಲವು ಭಕ್ತರು ಮಾತ್ರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷೇಶ್ವರಸ್ವಾಮಿ ದೇವರ ದರ್ಶನವನ್ನು ಪಡೆದುಕೊಂಡು ಹೋಗಿದ್ದಾರೆ. ಎಂದಿನಂತೆ ಹಂಪಿಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಇಲ್ಲದೆ ಹಂಪಿಯ ರಸ್ತೆಗಳು ಮತ್ತು ದೇವಸ್ಥಾನ ಆವರಣ ಬಿಕೋ ಎನ್ನುತ್ತಿತ್ತು. ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಹಂಪಿ ಇತರೆ ದೇವಸ್ಥಾನಗಳನ್ನು ಎಂದಿನಂತೆ ನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ಮನೆಯಿಂದ ಹೊರಬರ್ತಿಲ್ಲ ಜನ : ಸಿಲಿಕಾಟ್ ಸಿಟಿ ಶಟ್ ಡೌನ್
ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು ಎಂದಿನಂತೆ ಅರ್ಚಕರು ನೆರವೇರಿಸುತ್ತಿದ್ದಾರೆ. ಪೂಜಾ ಕಾರ್ಯಕ್ರಮಗಳಿಗೆ ಯಾವುದೇ ರೀತಿಯಲ್ಲಿ ನಿಲ್ಲಿಸಲಾಗುವುದಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರು ದೇವರ ದರ್ಶನದ ಭಾಗ್ಯವನ್ನು ಪಡೆದುಕೊಳ್ಳಬಹುದು.
ವಿಜಯಪುರ: ಕೊರೋನಾ ವೈರಸ್ ನಿವಾರಣೆಗೆ ಧನ್ವಂತರಿ ಹೋಮ
ಹಂಪಿಯಲ್ಲಿ ಈಗಾಗಲೇ ಇರುವ ವಿದೇಶಿ ಪ್ರವಾಸಿಗರು ಹಂಪಿಯಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ಹಂಪಿಯಲ್ಲಿ ಯಾವುದೇ ರೀತಿಯಲ್ಲಿ ಒಂದು ವಾರಕಾಲ ಯಾವುದೇ ಪ್ರವಾಸಿಗರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಬಾರದು ಎಂದು ಸ್ಥಳೀಯ ಪೊಲೀಸರು ಲಾಡ್ಜ್ ಮಾಲೀಕರಿಗೆ ತಿಳಿಸಲಾಗಿದೆ. ಈಗಾಗಲೇ ಇರುವಂತಹ ವಿದೇಶಿ ಪ್ರವಾಸಿಗರ ವಸತಿ ಮಾಡಿದ್ದರೆ ರೂಂ ಖಾಲಿ ಮಾಡಿಸುವಂತೆ ಸೂಚಿಸಲಾಗಿದೆ. ಹಂಪಿಯಲ್ಲಿರುವ ವಿದೇಶಿ ಪ್ರವಾಸಿಗರನ್ನು ತಮ್ಮ ಪ್ರವಾಸವನ್ನು ಸ್ಥಗಿತಗೊಳಿಸಿಕೊಂಡು ಹೊರಡುವಂತೆ ಈಗಾಗಲೇ ಸೂಚಿಸಲಾಗಿದೆ. ಇದರಿಂದ ಕೆಲ ವಿದೇಶಿ ಪ್ರವಾಸಿಗರು ಈಗಾಗಲೇ ಹಂಪಿಯಿಂದ ಈಗಾಗಲೇ ಕೆಲವರು ಬೇರೆ ಕಡೆಗೆ ಹೊರಟು ಹೋಗುತ್ತಿದ್ದಾರೆ.