ಕೊರೋನಾ ರೋಗ ನಿಯಂತ್ರಣಕ್ಕೆ ಹೋಮ| ವಿಜಯಪುರದ ವ್ಯಾಸ ಮಧ್ವ ಸಂಸ್ಕೃತ ವಿದ್ಯಾಲಯದಲ್ಲಿ ನಡೆದ ಹೋಮ|
ವಿಜಯಪುರ(ಮಾ.16): ನಗರದ ಹೊರವಲಯ ತೊರವಿ ರಸ್ತೆಯ ವ್ಯಾಸ ಮಧ್ವ ಸಂಸ್ಕೃತ ವಿದ್ಯಾಲಯದಲ್ಲಿ ಭಾನುವಾರ ಅಖಿಲ ಭಾರತಿಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೊರೋನಾ ರೋಗ ನಿಯಂತ್ರಣಕ್ಕೆ ಹಾಗೂ ಸಕಲ ಜೀವರಾಶಿಗಳ ಸುಖ ಶಾಂತಿಗಾಗಿ ಧನ್ವಂತರಿ, ಲಕ್ಷ್ಮೇ ನರಸಿಂಹ, ಮೃತ್ಯುಂಜಯ ಮಹಾ ಹೋಮವನ್ನು ಭಕ್ತಿಯಿಂದ ನೆರವೇರಿಸಲಾಯಿತು.
ಪಂ. ವೇದನೀಧಿ ಆಚಾರ್ಯರ ನೇತೃತ್ವದಲ್ಲಿ ವಿಶ್ವದಲ್ಲಿ ಆವರಿಸಿದ ಕೊರೋನಾ ಹಾಗೂ ಕೋವಿಡ್ - 19 ನಿಯಂತ್ರಣಕ್ಕೆ ಹೋಮ ಮಾಡಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆನಂದ ಜೋಶಿ, ಜಯತೀರ್ಥ ಕಿರಸುರ, ಅರವಿಂದ ಜೋಶಿ, ಪವನ ಶರ್ಮಾ, ಶ್ರೀನಿವಾಸ ಜೋಶಿ, ಜ್ಞಾನೇಶ್ವರ, ಬಾಬುರಾವ ಕುಲಕರ್ಣಿ ಮುಂತಾದವರು ಇದ್ದರು.