ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಇನ್ನಿತರ ಯಾವುದೇ ಖಾಸಗಿ ಕಾರ್ಯಕ್ರಮಗಳ ಆಚರಣೆಗೆ ನಿಷೇಧವಿದ್ದರೂ ಸರ್ಕಾರದ ಸುತ್ತೋಲೆಗೆ ಧಿಕ್ಕರಿಸಿ ಪೊಲೀಸ್ ಪೇದೆಯೊಬ್ಬರ ಬರ್ತಡೇ ಪಾರ್ಟಿ ಮಾಡುವ ಮೂಲಕ ಕೊಪ್ಪಳದ ಕನಕಗಿರಿ ಪೊಲೀಸ್ ಠಾಣೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕೊಪ್ಪಳ (ಜ.11): ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಇನ್ನಿತರ ಯಾವುದೇ ಖಾಸಗಿ ಕಾರ್ಯಕ್ರಮಗಳ ಆಚರಣೆಗೆ ನಿಷೇಧವಿದ್ದರೂ ಸರ್ಕಾರದ ಸುತ್ತೋಲೆಗೆ ಧಿಕ್ಕರಿಸಿ ಪೊಲೀಸ್ ಪೇದೆಯೊಬ್ಬರ ಬರ್ತಡೇ ಪಾರ್ಟಿ ಮಾಡುವ ಮೂಲಕ ಕೊಪ್ಪಳದ ಕನಕಗಿರಿ ಪೊಲೀಸ್ ಠಾಣೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪೇದೆಯ ಜನ್ಮದಿನಾಚಣೆ. ಠಾಣೆಯಲ್ಲೇ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಬರ್ತಡೇ ಪಾರ್ಟಿಯಲ್ಲಿ ನೂತನ ಪಿಎಸ್ಐ ಆಗಿರುವ ಲೋಕರಾಜ ಭಾಗಿಯಾಗಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆಗೆ ನಿಷೇಧವಿದ್ದರೂ ಡೊಂಟ್ ಕೇರ್ ಎಂದ ಕನಕಗಿರಿ ಪೊಲೀಸರು. ಪೇದೆಗಳಿಗೆ ಬಿಡಿ ಪಿಎಸ್‌ಐ ಸಾಹೇಬ್ರಿಗೂ ಸರ್ಕಾರದ ಆದೇಶ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಪೇದೆಯ ಬರ್ತ್ ಡೇ ಸೆಲಿಬ್ರೆಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಟೀಕಿಸಿದ್ದಾರೆ. ಬಿಟ್ಟರೆ ಪೊಲೀಸ್ ಠಾಣೆಗಳಲ್ಲಿ ಮದುವೆ ಕೂಡ ಮಾಡಿಸ್ತಾರೆ ಎಂದಿರುವ ನೆಟ್ಟಿಗರು.