ಹುಬ್ಬಳ್ಳಿ: ಪಾಲಿಸ್ಟರ್ ಧ್ವಜದ ಚಿಂತನೆಯೇ ರಾಷ್ಟ್ರದ್ರೋಹ: ಬಿಜೆಪಿ‌ ವಿರುದ್ಧ ಉಮಾಶ್ರೀ ಕಿಡಿ

By Suvarna News  |  First Published Jul 27, 2022, 7:36 PM IST

Hubballi News: ರಾಷ್ಟ್ರದ ಭಕ್ತಿ ಮಾತಿನಲ್ಲಿ ಬೇಡ, ಕೃತಿಯಲ್ಲಿ ಮಾಡಿ ತೋರಿಸಿ ಎಂದು ಮಾಜಿ ಸಚಿವೆ, ನಟಿ ಉಮಾಶ್ರೀ, ಬಿಜೆಪಿ‌ ವಿರುದ್ಧ ಕಿಡಿಕಾರಿದ್ದಾರೆ. 


ಹುಬ್ಬಳ್ಳಿ (ಜು. 27): ರಾಷ್ಟ್ರದ ಭಕ್ತಿ ಮಾತಿನಲ್ಲಿ ಬೇಡ, ಕೃತಿಯಲ್ಲಿ ಮಾಡಿ ತೋರಿಸಿ, ಬಾಯಲ್ಲಿ ಮೇಕ್ ಇನ್ ಇಂಡಿಯಾ, ತ್ರಿವರ್ಣ ಧ್ವಜಗಳನ್ನ ತರಿಸಿಕೊಳ್ಳುವುದು ಚೀನಾದಿಂದ ಎಂದು ಮಾಜಿ ಸಚಿವೆ, ನಟಿ ಉಮಾಶ್ರೀ, ಬಿಜೆಪಿ‌ ವಿರುದ್ಧ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ಹಮ್ಮಿಕೊಂಡರುವ ರಾಷ್ಟ್ರಧ್ವಜ ಹೋರಾಟದಲ್ಲಿ ಭಾಗಿಯಾದ ಮಾತನಾಡಿದ ಅವರು  "ಬಿಜೆಪಿಯವರ ರಾಷ್ಟ್ರಧ್ವಜವೇ ಬೇರೆ ಇದೆ, ಅವರ ರಾಷ್ಟ್ರ ಪರಿಕಲ್ಪನೆಯೇ ಬೇರೆ ಆಗಿದೆ. ಅದಕ್ಕಾಗಿಯೇ ರಾಷ್ಟ್ರ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಲ್ಲಿಯೂ ತರೋಕೆ ಧ್ವಜ ಸಂಹಿತೆ ತಿದ್ದುಪಡಿ ತಂದಿದ್ದಾರೆ‌ ಎಂದು ಹೇಳಿದರು. 

ನಮ್ಮ ರಾಷ್ಟ್ರಧ್ವಜಕ್ಕೆ ತನ್ನದೆ ಆದ ಗೌರವ ಇದೆ. ಅದಕ್ಕೆ ಅದರದ್ದೇ ಮೌಲ್ಯ, ಘನತೆ ಇದೆ, ಇದು ನಮ್ಮ ಸ್ವಾಭಿಮಾನದ ಸಂಕೇತ. ಇದನ್ನ ಹೊರದೇಶದವರು ಸಿದ್ದಪಡಿಸಬಾರದು. ಆದರೆ ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜ ಬಳಕೆಗೆ ಮುಂದಾಗಿದೆ‌. 

Latest Videos

undefined

ಬಿಜೆಪಿಯವರ ರಾಷ್ಟ್ರಗೀತೆನೇ ಬೇರೆ, ಧ್ವಜನೇ ಬೇರೆ. ಇವರ ಆರ್‌ಎಸ್‌ಎಸ್ ಧ್ವಜವೇ ಬೇರೆ ಇದೆ. ರಾಷ್ಟ್ರಧ್ವಜ ಅವರ ಧ್ವಜ ಅಲ್ಲವೇ ಅಲ್ಲ, ಅವರ ಧ್ವಜವೇ ಬೇರೆ, ಅವರು ಕಾಣುತ್ತಿರುವ ಕನಸೆ ಬೇರೆ, ಅವರ ಕಲ್ಪನೆ ಬೇರೆ ಇದೆ. ಕೇಂದ್ರ ಸರ್ಕಾರಕಕ್ಕರ ದೇಶಾಭಿಮಾನ ‌ಇದೇನಾ ಎಂದು ಉಮಾಶ್ರೀ ಪ್ರಶ್ನಿಸಿದರು. 

ರಾತ್ರಿ ವೇಳೆಯೂ ರಾಷ್ಟ್ರಧ್ವಜ ಹಾರಿಸಲು ಸರ್ಕಾರ ಅವಕಾಶ

ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಪಾಲಿಸ್ಟರ್ ಬಟ್ಟೆಯ ಧ್ವಜವನ್ನೆ ಬಳಸಬಹುದು ಎನ್ನುವ ಚಿಂತನೆಯೇ ರಾಷ್ಟ್ರದ್ರೋಹ. ರಾಷ್ಟ್ರಧ್ವಜವನ್ನ ಹೊರದೇಶದಿಂದ ತರಿಸಿಕೊಳ್ಳವುದು ಸರಿಯಲ್ಲ. ದೇಶದಲ್ಲಿರುವ ರಾಷ್ಟ್ರಧ್ವಜ ತಯಾರಕ ಘಟಕದಿಂದ ಧ್ವಜಗಳನ್ನ ತರೆಸಿಕೊಂಡಿದ್ದರೆ ಅದರ ಮೌಲ್ಯ ಹೆಚ್ಚುತ್ತಿತ್ತು. ಈ ಆದೇಶವನ್ನ ತಕ್ಷಣ ವಾಪಸ್ ಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಉಮಾಶ್ರೀ ಆಗ್ರಹಿಸಿದರು.

click me!